ರೋಣ: ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪುತ್ಥಳಿ ತೆರವುಗೊಳಿಸಲು ಪೊಲೀಸ್ ಇಲಾಖೆ ಬಳಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ತಮ್ಮ ಅಧಿಕಾರ ದರ್ಪ ತೋರಿದ್ದಾರೆ ಎಂದು ರೈತ ಸಂಘದ ತಾಲೂಕಾಧ್ಯಕ್ಷ ಮುತ್ತು ಕುರಿ ಆರೋಪಿಸಿದರು.

ತಾಲೂಕಾ ರೈತ ಸಂಘ, ಕರ್ನಾಟಕ ರಾಜ್ಯ ರಕ್ಷಣಾ ಸಮಿತಿ ಹಾಗೂ ಡಿ.ಎಸ್.ಎಸ್ ಸಂಘನೆಗಳಿಂದ ರಾಯಣ್ಣ ಪುತ್ಥಳಿ ತೆರುವುಗೊಳಿಸಿದ ಕ್ರಮ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕೂಡಲೇ ಕ್ರಮಕೈಗೊಂಡು, ಪುತ್ಥಳಿ ಅದೇ ಸ್ಥಳದಲ್ಲಿ ಪುನಃ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುತ್ತು ಕುರಿ, ಬಸವರಾಜ ನೀಲಗಾರ, ರವಿ ಕೊಪ್ಪದ, ಸಂತೋಷ ಕಡಿವಾಲ, ಹನಮಂತ ಚಲವಾದಿ ಮುತ್ತು ನಂದಿ, ಬಿ.ವಿ.ರಡ್ಡೇರ, ಆರ್.ಎಲ್.ಕರಿಯಣ್ಣವರ, ನಾಗರಾಜ ಮಾಲಿಪಾಟೀಲ್, ರಾಖೇಶ್ ಪಾಟೀಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ: ವಿಧಾನಸೌಧ ಚಲೋ

ಉತ್ತರಪ್ರಭ ಸುದ್ದಿಗದಗ: ರಾಜ್ಯದಲ್ಲಿ ನಡೆಯುತ್ತಿರುವ ಕುರಿಗಾಹಿಗಳ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಹಾಗೂ ಅವರಿಗೆ ಭದ್ರತೆಯನ್ನು ಕಲ್ಪಿಸಬೆಕೇಂದು…

ಲಕ್ಷ್ಮೇಶ್ವರ ನಗರಸಭೆಯಿಂದ ಮರೆಯಾಗಿ ಹೋದ ಅಭಿವೃದ್ಧಿ ಕಾಮಗಾರಿಗಳು

ಉತ್ತರಪ್ರಭ ಸುದ್ದಿ ಲಕ್ಷ್ಮೇಶ್ವರ: ಪಟ್ಟಣದ ನಾಲ್ಕನೇ ವಾರ್ಡನಲ್ಲಿ ರಸ್ತೆ ದುರಸ್ಥಿ ಮತ್ತು ನೀರಿನ ಹಾಹಾಕಾರ ಎದ್ದು…

ವಿಧಾನಪರಿಷತ್ ಚುನಾವಣೆಯಲ್ಲಿಯೂ ಜಯಭೇರಿ ಬಾರಿಸಿದ ಬಿಜೆಪಿ!

ಬೆಂಗಳೂರು : ಉಪ ಚುನಾವಣೆಯೊಂದಿಗೆ ವಿಧಾನಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ.

ಡಾಂಬರೀಕರಣಕ್ಕೆ ಶಾಸಕ ರಾಮಣ್ಣ ಚಾಲನೆ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಾದು ಹೋಗುವ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ 06 ರಲ್ಲಿ ಮಳೆಯಿಂದ ಹಾನಿಗೀಡಾದ ಸುಮಾರು…