ಗದಗ: ಜಿಲ್ಲೆಯಲ್ಲಿ 180 ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನಲೆ ಹಳ್ಳಿ ಹಳ್ಳಿಗೂ ಕೊರೋನಾ ಭಯ ಶುರುವಾಗಿದೆ. ಕೊರೋನಾ ತಡೆಗಟ್ಟಲು ಜಿಲ್ಲಾಡಳಿತ ಹಳ್ಳಿಯ ಗಲ್ಲಿ ಗಲ್ಲಿಯಲ್ಲೂ ಔಷಧ ಸಿಂಪಡಣೆ ಕಾರ್ಯ ನಡೆಸಿದೆ. ಗದಗ ಜಿಲ್ಲೆಯ ಏಳು ತಾಲೂಕಿನ ಗ್ರಾಮಗಳಲ್ಲಿ ಔಷಧ ಸಿಂಪಡಣೆ ಕಾರ್ಯ ಆರಂಭಿಸಿದೆ.

ನರಗುಂದ ತಾಲೂಕಿನ ಬೆನಕನಕೊಪ್ಪ , ಸಂಕದಾಳ ಗ್ರಾಮದಲ್ಲಿ ಔಷಧೀಯ ಸಿಂಪಡಣೆ ಮಾಡಲಾಗಿದೆ. ಗದಗ ತಾಲೂಕಿನ ಹೊಂಬಳ, ಲಕ್ಕುಂಡಿ ಗ್ರಾಮದಲ್ಲಿ ಔಷಧೀಯ ಸಿಂಪಡಣೆ ನಡೆಸಿದ್ದು, ಕೋವಿಡ್-19 ವೈರಸ್ ತಡೆಗಟ್ಟಲ್ಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಧ್ವನಿ ವರ್ಧಕದ ಮೂಲಕ ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಸೂಚನೆ ನೀಡಲಾಗುತ್ತಿದೆ. ಜನ್ರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಗ್ರಾಮದಲ್ಲಿ ಗುಟಕಾ, ತಂಬಾಕಿನಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ರೆ 100 ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಲಾಗುತ್ತಿದೆ. ಗ್ರಾಮ ಪಂಚಾಯತ ನಿಂದ ದಂಡ ವಸೂಲಿಗೆ ಸೂಚನೆ ನೀಡಲಾಗುತ್ತಿದೆ. ಈ ಮೂಲಕ ಜನರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

Leave a Reply

Your email address will not be published. Required fields are marked *

You May Also Like

ಗರ್ಭಿಣಿಗೆ ಸೋಂಕು: ಗದಗ ಹೆರಿಗೆ ಆಸ್ಪತ್ರೆ ಸೀಲ್ ಡೌನ್

ಗದಗ: ನಗರದ ಕೆ.ಸಿ ರಾಣಿ ರಸ್ತೆಯಲ್ಲಿರುವ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆಯೋರ್ವರ ಗಂಟಲುದ್ರವದ…

ಸರ್ಕಾರ ಕೊಟ್ರೆ ಮಾತ್ರ ಬಿಎಂಟಿಸಿ ನೌಕರರಿಗೆ ಸಂಬಳ..?

ಲಾಕ್ ಡೌನ್ ಹಿನ್ನೆಲೆ ಮಾ.23 ರಿಂದ ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಿತ್ತು. ಈಗಾಗಲೇ ಮಾರ್ಚ್ ಹಾಗೂ ಏಪ್ರೀಲ್ ತಿಂಗಳ ಸಂಬಳ ನೀಡಲಾಗಿದೆ. ಆದರೆ ಮೇ ತಿಂಗಳ ಸಂಬಳವೇ ಸಿಬ್ಬಂಧಿಗಳಲ್ಲಿ ಆತಂಕ ಮೂಡಿಸಿದೆ.

ವಲಸೆ ಕಾರ್ಮಿಕರ ರಕ್ಷಣೆಗಾಗಿ ಪೋಸ್ಟರ್ ನಾಳೆ ಪ್ರತಿಭಟನೆ

ಕಳೆದ ಒಂದುವರೆ ತಿಂಗಳಿಂದ ವಲಸೆ ಕಾರ್ಮಿಕರು ಊಟ ಇಲ್ಲದೆ, ವೇತನ ವಿಲ್ಲದೆ ಹೇಳಲಾರದ ಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಅವರೆಲ್ಲ ಮನೆಗೆ ಹೋಗಲು ಬಯಸುತ್ತಿದ್ದಾರೆ. ಆದರೆ ನಮ್ಮ ಕ್ರೂರ ಸರ್ಕಾರ, ರೈಲುಗಳನ್ನು ನಿಲ್ಲಿಸಿ, ಅಮಾನೀಯವಾಗಿ ಕಾರ್ಮಿಕರನ್ನು ಇಲ್ಲಿಯೇ ಬಂಧಿಸಿ, ನಮ್ಮ ರಾಜ್ಯವನ್ನ ಬಹಿರಂಗ ಜೈಲು ಮಾಡಲು ಹೊರಟಿದೆ.