ಆಲಮಟ್ಟಿ : ಸನಿಹದ ಸುತಗುಂಡಾರ ಶ್ರೀ ಕರವೀರೇಶ್ವರ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆಲಮಟ್ಟಿಗೆ ಸಮೀಪದ ಸುತಗುಂಡಾರದಲ್ಲಿ ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ ವಿಜಯಪುರ, ಆಲಮಟ್ಟಿ ಡ್ಯಾಂ ಸೈಟ್‌ ಶಾಖಾ ಗ್ರಂಥಾಲಯದ ಆಶ್ರಯದಲ್ಲಿ ಸಂಯೋಜಿಸಿದ್ದ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.
ರಕ್ಷಿತಾ ಎಳ್ಳಿಗುತ್ತಿ ಪ್ರಥಮ,ಬಸವರಾಜ ಮನಗೂಳಿ ದ್ವೀತಿಯ, ಪೃಥ್ವಿ ವಾಲಿಕಾರ ತೃತೀಯ ಸ್ಥಾನ ಪಡೆದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.


ಗ್ರಂಥಪಾಲಕ ಪರುಶುರಾಮ ಮೂಲಂಗಿ, ಮಕ್ಕಳ ಜ್ಞಾನ ವಿಕಾಸಕ್ಕೆ, ತೀಕ್ಷ್ಣ ಭಾಷಾ ನುಡಿ ಬರಹಗಳಿಗೆ ರಸಪ್ರಶ್ನೆ ಕಾರ್ಯಕ್ರಮಗಳು ಪೂರಕವಾಗಿವೆ. ಜೊತೆಗೆ ಗ್ರಂಥಾಲಯಗಳು ಓದುವ ಅಭಿರುಚಿ,ಕೌಶಲ್ಯ ಬೆಳೆಸಿ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದರು.
ಎಂ.ಜಿ.ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಅಂಗಡಿ,ಎ.ಎಲ್.ಬಡಿಗೇರ, ಎಸ್.ಬಿ.ದಳವಾಯಿ, ಆರ್.ಡಿ.ತಹಶೀಲ್ದಾರ,ವಿಶ್ವನಾಥ ನುಗ್ಲಿ ಇತರರಿದ್ದರು.

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ ಹೆದ್ದಾರಿ ಗುಂಡಿಯಲ್ಲಿ ವಾಹನ ಸವಾರರು ಬಿದ್ದು ನರಳಾಟ

ವರದಿ: ವಿಠಲ ಕೆಳೂತ್ ಮಸ್ಕಿ: ಲಿಂಗಸ್ಗೂರು-ಮಸ್ಕಿ ‌ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳಿಗೆ ಬಿದ್ದು ವಾಹನ…

ಯಲಗೂರ ಶಕ್ತಿಮಾನಗೆ ಭಕ್ತರ ಭಕ್ತಿಮಾನ ಸಮರ್ಪಣೆ- ಕಾತಿ೯ಕೋತ್ಸವ ಸಂಭ್ರಮ ಏಳೂರು ಒಡೆಯನ ಸನ್ನಿಧಿಯಲ್ಲಿ ಭಕ್ತಿ ಪರಾಕಾಷ್ಠೆ – ಮಿಂದೆದ್ದ ಜನಸಾಗರ

ಸಚಿತ್ರ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಕೃಷ್ಣೆಯ ತೀರದ ಪ್ರಾಕೃತಿಕ ಪರಿಮಳದ ಹಸಿನೆಲದ ಸುವಾಸನೆಯಲ್ಲಿ…

ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಟಿಸಿಇ ಹ್ಯಾಕಥಾನ್

ಗದಗ: ಇಂದು ಪ್ರತಿಯೊಬ್ಬರ ಜೀವನದಲ್ಲಿ ತಾಂತ್ರಿಕತೆ ಪಾತ್ರ ಮಹತ್ವದ್ದಾಗಿದೆ. ಪ್ರತಿ ರಂಗದಲ್ಲಿ ತಾಂತ್ರಿಕತೆ ಅವಶ್ಯವಾಗಿದ್ದು ತಾಂತ್ರಿಕತೆ…

ಕೊಲ್ಲಾಪೂರ-ಹೈದ್ರಾಬಾದ್-ಮಣಗೂರು-ಕೊಲ್ಲಾಪೂರ ರೈಲು ಪ್ರಾರಂಭಕ್ಕೆ ಬ್ಯಾಳಿ ಒತ್ತಾಯ

ಬಹಳಷ್ಟು ಪ್ರಯಾಣಿಕರು ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿಯಿಂದ ರಾಯಚೂರು, ಮಂತ್ರಾಲಯ, ಗದ್ವಾಲ್ ಜಲಮ್ಮದೇವಿಗೆ ಕರ್ನೂಲ ಮೂಲಕ ಶ್ರೀಶೈಲಂಗೆ ಹೋಗಿ ಬರಲು ಕೊಲ್ಲಾಪೂರ-ಹೈದ್ರಾಬಾದ್-ಮಣಗೂರು-ಕೊಲ್ಲಾಪೂರ ಈ ರೈಲುಗಾಡಿ ಕೋವಿಡ್ 19 ಮಹಾಮಾರಿಗಿಂತ ಮುಂಚೆ ಇದ್ದು ಅದು ಪ್ರಯಾಣಿಕರಿಗೆ ಬಹಳ ಅನುಕೂಲವಾಗಿತ್ತು