ನಿಡಗುಂದಿ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದ ಕಾರ್ತಿಕೋತ್ಸವ ಗುರುವಾರ ಸಂಪನ್ನಗೊಂಡಿತು. ಇಡೀ ಒಂದು ತಿಂಗಳು ನಿತ್ಯ ಸಾಯಿಬಾಬಾಗೆ ವಿಶೇಷ ಪೂಜೆ, ಕಾರ್ತಿಕ ದೀಪೋತ್ಸವ, ಮಹಿಳೆಯರ ನಿತ್ಯ ಹಾಡು ಭಜನೆಗಳು ನಡೆದವು.

ಇಡೀ ದೇವಸ್ಥಾನದ ಪ್ರಾಂಗಣದ ಸುತ್ತಲೂ ದೀಪದ ಪಣತಿಯಲ್ಲಿ ದೀಪ ಹಚ್ಚಿದ ಜನ ಭಕ್ತಿಯನ್ನು ಮೆರೆದರು. ದೇವರನ್ನು ವಿಧವಿಧ ಹೂಗಳಿಂದ ಅಲಂಕರಿಸಿ ಅಭಿಷೇಕ ಸೇರಿದಂತೆ ನಾನಾ ಪೂಜೆ ಗುರುವಾರ ಭಕ್ತರು ನೆರವೇರಿಸಿದರು.
ಬಂದ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.