ವರದಿ: ವಿಠಲ ಕೆಳೂತ್
ಮಸ್ಕಿ: ಲಿಂಗಸ್ಗೂರು-ಮಸ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳಿಗೆ ಬಿದ್ದು ವಾಹನ ಸವಾರರು ನರಳಾಡುತ್ತಿದ್ದಾರೆ. ತಗ್ಗು ಗುಂಡಿಗಳನ್ನು ಮುಚ್ಚಿಸುವಂತೆ ವಾಹನ ಸವಾರರು ಅಗ್ರಹಿಸಿದ್ದಾರೆ.
ಈಚೆಗೆ 150ಎ ಹೆದ್ದಾರಿಯ ಡಾಂಬರೀಕರಣ ಮಾಡಲಾಗಿದ್ದು, ಡಾಂಬರೀಕರಣ ಮಾಡಿದ ಬಳಿಕ 5 ವರ್ಷಗಳ ಕಾಲ ಗುತ್ತಿಗೆದಾರರು ರಸ್ತೆಯ ಎರಡು ಕಡೆ ಬೆಳೆದಿರುವ ಜಾಲಿ ಗಿಡ ತೆರವುಗೊಳಿಸಬೇಕು, ರಸ್ತೆ ಬದಿ ಮಣ್ಣು ಹಾಕಿಸಬೇಕು, ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಬೇಕೆಂದು ಸರ್ಕಾರ ಗುತ್ತಿಗೆದಾರರಿಗೆ ಸೂಚನೆ ನೀಡಿರುತ್ತಾರೆ. ಆದರೆ ಇದ್ಯಾವುದನ್ನು ಲೆಕ್ಕಿಸದೇ ಗುತ್ತಿದಾರರು, ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಅಕ್ರೋಶಕ್ಕೆಕಾರಣವಾಗಿದೆ.

ಮಸ್ಕಿಯಿಂದ-ಲಿಂಗಸ್ಗೂರುಗೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.ಅಂಕುಶದೊಡ್ಡಿ, ಸಂತೆಕೆಲ್ಲೂರು ತಿರುವಿನಲ್ಲಿ ಜಾಲಿ ಗಿಡ ಬೆಳೆದು ನಿಂತಿರುವ ಪರಿಣಾಮವಾಗಿ ಮುಂದೆ ಬರುವ ವಾಹನಗಳು ಕಾಣದೇ ರಸ್ತೆ ಬದಿಯಲ್ಲಿ ಬಿದ್ದಿರುವ ಗುಂಡಿಗಳಿಗೆ ಬಿದ್ದು ಪರದಾಡುವಂತಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಹರಿಸಬೇಕಿದೆ.
ಮಾಜಿ ತಾಪಂ ಸದಸ್ಯ, ಗವಿಸಿದ್ದಪ್ಪ ಸಾಹುಕಾರ.
ತಾಲೂಕಿನ ಅಂಕುಶದೊಡ್ಡಿ, ಸಂತೆಕೆಲ್ಲೂರು ಬಳಿಯ ತಿರುವಿನಲ್ಲಿ ರಸ್ತೆಯ ಎರಡು ಬದಿಯಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿದೆ. ಮುಂದೆ ಬರುವ ವಾಹನಗಳು ಸರಿಯಾಗಿ ಕಾಣದೇ ರಸ್ತೆ ಬದಿಯಲ್ಲಿ ಬಿದ್ದಿರುವ ಗುಂಡಿಗಳಿಗೆ ವಾಹನ ಬಿದ್ದು, ಗಾಯಗೊಳ್ಳುತ್ತಿದ್ದಾರೆ.ಕೆಲ ವಾಹನ ಸವಾರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳು ಎಚ್ಚೇತ್ತುಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.