ಸಚಿತ್ರ ವರದಿ: ಗುಲಾಬಚಂದ ಆರ್. ಜಾಧವ
ಆಲಮಟ್ಟಿ :
ಕೃಷ್ಣೆಯ ತೀರದ ಪ್ರಾಕೃತಿಕ ಪರಿಮಳದ ಹಸಿನೆಲದ ಸುವಾಸನೆಯಲ್ಲಿ ನೆಲೆಗೊಂಡಿರುವ ಸುಕ್ಷೇತ್ರ ಯಲಗೂರ ಆಂಜನೇಯ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ಆರಂಭವಾದ ಪವನಸುತನ ಕಾತಿ೯ಕೋತ್ಸವದ ಜಾತ್ರಾತ್ಯೋತ್ಸವಕ್ಕೆ ನಾಡಿನ ವಿವಿಧೆಡೆಯಿಂದ ಅಸಂಖ್ಯ ಭಕ್ತಗಣ ಸಾಗರೋಪಾದಿಯಲ್ಲಿ ಹರಿದು ಬಂತು.


ಅಂತರಂಗದ ದೇವಭಾಷೆ ಬರೆದ ಯಲಗುರೇಶ ದೇವಸ್ಥಾನದ ಒಳ,ಹೊರ ಉದ್ದಗಲಕ್ಕೂ ವ್ಯಾಪಕ ಜನಸಂದಣಿಯ ದೃಶ್ಯ ಗೋಚರಿಸಿತು.


ಸಾತ್ವಿಕೋತ್ತಮ ಯಲಗುರೇಶ ಹನುಮ ಮೌಲ್ಯಾಧಾರಿತ ದೇವರಾಗಿ ಮಿನುಗಿದರಿಂದ ಕುಲಭೇದಗಳೆನ್ನದೆ ಭಕ್ತರ ದಂಡು ಇತ್ತ ಲಗ್ಗೆಯಿರಿಸಿದೆ. ರಾಜ್ಯದ ಹೊರನಾಡಲ್ಲೂ ಯಲಗೂರ ಮಹಿಮೆ ಫಸರಿಸಿದ್ದು ಇಂದಿಲ್ಲಿ ಪವನಸುತನ ಸನ್ನಿಧಿಯಲ್ಲಿ ಆರಂಭಗೊಂಡ ಕಾತಿ೯ಕೋತ್ಸವ ಜಾತ್ರಾ ಸೊಗಡಿನ ಧಾಮಿ೯ಕ ಕೈಂಕರ್ಯದ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಿದ್ದರು. ಈ ನೋಟ ಕಣ್ಮನ ಸೆಳೆಯಿತು. ಅವರೆಲ್ಲರೂ ಶೃದ್ಧಾ ಭಕ್ತಿ ಭಾವದ ಪರಾಕಾಷ್ಠೆ ಮೆರೆದು ಪುನೀತ್ ಭಾವ ತಾಳಿದರು.


ಬೆಳಿಗ್ಗೆ ಆಂಜನೇಯ ಸ್ವಾಮಿ ಮೂತಿ೯ಗೆ ಪಂಚಾಮೃತ ಅಭಿಷೇಕ ನಡೆಯಿತು. ಪವಮಾನ ಹೋಮ,ಮಹಾ ಪೂಜೆ ಇತರೆ ನಾನಾ ಧಾಮಿ೯ಕ ಸಾಂಪ್ರದಾಯಿಕ ಶೈಲಿಯ ಕಾರ್ಯಗಳು ಸಂಪನ್ನವಾಗಿ ಜರುಗಿದವು. ಭಕ್ತರನೇಕರು ಭಾಗಿಯಾಗಿ ಹರಕೆಗಳನ್ನು ತೀರಿಸಿದರು. ಶೋಭಾಯಾತ್ರೆ, ಸ್ಪಧೆ೯, ಉಡುಪಿ ಚಂಡಿವಾದ್ಯ, ಹರಿದಾಸರ ಕೀರ್ತನೆಗಳ ನಿನಾದಗಳು ತೇಲಿಬಂದವು. ಇದೇ ವೇಳೆ ಪ್ರಥಮ ಬಾರಿಗೆ ವೆಂಕಟೇಶ್ವರ ಆಕರ್ಷಕ ಮೂತಿ೯ ಪೂಜಾ ನೆರವೇರಿತು. ರಾತ್ರಿ ದೀಪಗಳ ಅಲಂಕೃತದಲ್ಲಿ ಕಾತಿ೯ಕೋತ್ಸವ ಸೊಬಗು ಮಿನುಗಿತು. ಕೆಂಬೆಳಕಿನ ಚಿತ್ತಾರ ಅರಳಿತು. ಪವನಸುತನ ಸಾಮೀಪ್ಯದಲ್ಲಿ ನಡೆದ ಭಕ್ತಿಯ ಸೌಖ್ಯ ಮೇಳದ ಈ ಜಾತ್ರಾ,ಯಾತ್ರಾದಲ್ಲಿ ಭಕ್ತರು ತನ್ಮಯರಾಗಿ ಮಿಂದೆದ್ದರು. ನಿಷ್ಕಾಮ ಹನುಮನ ಆಕಾರ ಕಾಂತಿ,ಶಕ್ತಿಗಳ ಆರಾಧನೆಯಲ್ಲಿ ಲೀನರಾಗಿ ಸದ್ಗತಿ,ಒಳಿತಿಗಾಗಿ ಕೈಮುಗಿದು ಪ್ರಾಥಿ೯ಸಿದರು, ನಮಿಸಿದರು. ಇಷ್ಟದೇವ ಯಲಗುರೇಶನಿಗೆ ಪ್ರೀತಿಯಿಂದ ಭಜಿಸಿ ಪೂಜಿಸಿ ಭಕ್ತಿಪ್ರೀತಿ ಅಪಿ೯ಸಿದರು.


ಸಕಲ ದೂರಿತಗಳ ನಿವಾರಕ,ಇಷ್ಟಾರ್ಥ ಈಡೇರಿಸುವ ಏಳೂರು ಒಡೆಯ ಎಂಬ ಅವಿಚಲ ನಂಬಿಕೆ ಅಚಲವಾಗಿ ಭಕ್ತರ ಮನದಲ್ಲಿ ನೆಲೆಗೊಂಡಿದೆ. ಹೀಗಾಗಿ ಭಕ್ತರ ಹೃದಯ ಸಾಮ್ರಾಟ್ ಅಗಿರುವ ಯಲಗೂರದ ಪ್ರಸನ್ನ ವದನನ ಕಾತಿ೯ಕೋತ್ಸವದ ಉತ್ಸವದಲ್ಲಿ ನಿರೀಕ್ಷೆಗಿಂತ ಅಧಿಕ ಜನಸ್ತೋಮ ಮೊದಲ ದಿನ ಸೇರಿದ್ದು ಕಂಡುಬಂತು. ನಾಲ್ಕು ದಿನಗಳಕಾಲ ಈ ಸುಕ್ಷೇತ್ರದ ದೇಗುಲ ಜನ ಸಂಗಮದಿಂದ ಹೌಸ್ ಫೂಲ್. ತುಂಬಿ ತುಳಕುತ್ತದೆ. ಕಾಲ್ಕಿತ್ತಿಡಲು ಪರದಾಟ, ಹರಸಾಹಸ, ಮಾಡಬೇಕಾದ ಪರಸ್ಥಿತಿ ಎದುರಾಗುತ್ತದೆ.ನಾನಾ ಕಡೆಗಳಿಂದ ಜಾತಿ,ಮತ,ಭೇದವಿಲ್ಲದೆ ದೈವ ಭಕ್ತಗಣ ಈ ಪುಣ್ಯ ಸುಕ್ಷೇತ್ರದ ಕಡೆಗೆ ಆಗಮಿಸಿದ್ದರು. ಪೂಜ್ಯನೀಯ ಭಾವದಿಂದ ಪೂಜಿಸಲ್ಪಡುವ ಭಕ್ತರೋದ್ಧಾರಕ ಯಲಗುರೇಶ ಹನುಮ ಎಲ್ಲ ಧಮಿ೯ಯರ ಅಚ್ಚುಮೆಚ್ಚಿನ ಆರಾಧ್ಯ ದೇವರಾಗಿದ್ದಾರೆ.


ಒಳಿತು ನಂಬಿಕೆಯ ಜಾಗೃತಿವನ್ನುಂಟು ಮಾಡಿರುವ ಈ ದೇವ ಭಕ್ತರ ಕಷ್ಟ, ಕಾರ್ಪಣ್ಯಗಳಿಗೆ ಪರಿಹಾರದ ಮೋಕ್ಷ ಒದಗಿಸಬಲ್ಲವೆಂಬ ಆಶಾಭಾವ ಜನ ಸಮೂಹದಲ್ಲಿ ನಿವಿ೯ಳಿತವಾಗಿ ಮೂಡಿದೆ. ನಾನಾ ಬಗೆಯ ನಾಮಾಂಕಿತದಿಂದ ಭಕ್ತರು ಯಲಗೂರಪ್ಪ ಹನುಮನಿಗೆ ಹೆಸರಿಸಿ ಕರೆಯುತ್ತಾರೆ. ಜಾಗೃತ ದೇವಾ ವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ ಏಳೂರು ಒಡೆಯ. ಸರ್ವಧರ್ಮದ ಸೆಲೆಯಾಗಿ ಹೃದಯಂಗಮವಾಗಿ ಸ್ಮರಿಸಿಕೊಂಡು ಆರಾಧಿಸಿಕೊಳ್ಳುತ್ತಿದ್ದಾನೆ ಇಲ್ಲಿನ ಪವನಸುತ ದೇವ.
ಸರ್ವಶಕ್ತಿ,ಸಂತುಷ್ಟ ಏಳೂರು ಒಡೆಯ ಯಲಗುರೇಶ ಹನುಮ ಶ್ರೀರಾಮ ಪರಮಾತ್ಮನ ಇಚ್ಚೆಯಂತೆ ಈ ಭಾಗದ ಜನ- ನೆಲದ ಒಳತಿಗಾಗಿ ಕೃಷ್ಣೆಯ ಮಡಿಲಿನ ಸುಂದರ ಪ್ರಶಾಂತಮಯ ಸ್ಥಳದಲ್ಲಿ ಬಂದಿಳಿದಿದ್ದಾನೆ ಎಂಬ ಐತಿಹ್ಯ ಪ್ರತೀತಿ ಇದೆ. ಪರಿಣಾಮ ಯಲಗೂರ ಗ್ರಾಮ ಪವನಸುತನ ಕೃಪೆಯಿಂದ ಸುಕ್ಷೇತ್ರವಾಗಿ ಪಾವನ ನೆಲೆ ಕಂಡುಕೊಂಡಿದೆ ಎಂಬುದು ಭಕ್ತರ ಅಂಬೋಣ !
ಯಲಗೂರ ಆಂಜನೇಯ ದೇಗುಲ ಪ್ರತಿಷ್ಠಿತ ದೇವಸ್ಥಾನಗಳಲ್ಲೊಂದಾಗಿದೆ. ಕಾತಿ೯ಕೋತ್ಸವ ನಿಮಿತ್ಯ ನಾಲ್ಕು ದಿನಗಳಕಾಲ ಸುಕ್ಷೇತ್ರದಲ್ಲಿ ಸುವ್ಯವಸ್ಥೆಗಾಗಿ ಪೋಲೀಸರು ಸೂಕ್ತ ಬಂದೋಬಸ್ತ ಕೈಗೊಂಡಿದ್ದಾರೆ. ವಿವಿಧ ಸಂಘ,ಸಂಸ್ಥೆ, ಸಂಘಟನೆ ಕಾರ್ಯಕರ್ತರು ಸಹ ಸ್ವಯಂ ಸೇವಕರಾಗಿ ಅಚ್ಚುತನದಿಂದ ಇಲ್ಲಿ ಸೇವಾ ಕಾಯಕ ಹನುಮನ ಅಂಗಳದಲ್ಲಿ ಗೈಯುತ್ತಿದ್ದಾರೆ. ಸಂಜೆವಾಗುತ್ತಿದ್ದಂತೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂತು.

Leave a Reply

Your email address will not be published. Required fields are marked *

You May Also Like

ಸದ್ದಿಲ್ಲದೆ ಸಾಗುತ್ತಿದೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿ:ಸಾವಿತ್ರಿ ಬಾಯಿ ಫುಲೆ” ಕಲಿಕಾ ಕೇಂದ್ರ

ಕೋರೊನಾ ಈ ಹೆಸರಿನ ಮಹಾಮಾರಿ ಯಾರಿಗೆ ಗೊತ್ತಿಲ್ಲ ದೇಶದಲ್ಲಿ ಈ ಮಹಾಮಾರಿಯಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಸಂಪ್ರದಾಯಿಕವಾಗಿ…

ಗಡಿಯಾರವೇ ನಿರ್ಧಾರಗಳ ಬಂಡಿ

ಜೀವನದ ಯಾವ ಹಂತದಲ್ಲಾದರೂ ಸಮಸ್ಯೆಗಳು,ನೋವು,ಹತಾಶೆಗಳು ಬಂದೇ ಬರುತ್ತವೆ.ಬರೀ ನೋವುಗಳಷ್ಟೇ ಅಲ್ಲ ನಲಿವುಗಳೂ ಕೂಡ.ಈ ನೋವು ಸಂತಸಗಳೆಲ್ಲಾ ನಮ್ಮ ಜೀವನದ ಸಮಯ ಜೀವಿಗಳು ಎಂದರೆ ತಪ್ಪಾಗದು.

ಹೂವಿನಹಡಗಲಿ ಉಪ ಕಾರಾಗೃಹದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ: ರಾಷ್ಟ್ರೀಯ ಐಕ್ಯತೆಗೆ ಭಾಷಾ ಸೌಹಾರ್ದತೆ ಸಹಕಾರಿ

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದ ಐಕ್ಯತೆಗೆ ಭಾಷಾ ಸೌಹಾರ್ಧತೆಯೇ ಸಹಕಾರಿಯಾಗಿದೆ ಎಂದು ಜಿಬಿಆರ್ ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಹೇಳಿದರು.