ಉತ್ತರಪ್ರಭ
ಗದಗ: ವಿದ್ಯಾದಾನ ಶಿಕ್ಷಣ ಸಮಿತಿ (VDST) ಗದಗ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರಂಭದಲ್ಲಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕಿಯಾದ ಶ್ರೀಮತಿ ಸುಧಾ ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂಸ್ಥೆಯೂ ೧೯೨೦ ರಿಂದ ನಿರಂತರವಾಗಿ ಶಿಕ್ಷಣವನ್ನು ನೀಡುತ್ತಿದ್ದು, ಈ ಸಾಮಾಜಿಕ ಕಾರ್ಯಕ್ಕೆ ನನ್ನ ಅಭಿನಂದನೆಗಳು ಎಂದು ಹೇಳುತ್ತಾ ಅವರು ಶಿಕ್ಷಣ ಮತ್ತು ಸಾಮಾಜಿಕ ಮೌಲ್ಯಗಳ ಕುರಿತು ಮಾತನಾಡಿದರು. ಅವರಿಗೆ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಂಜಾರಾ ಸಮಾಜದಿಂದ ವಿಶೇಷವಾಗಿ ಬಂಜಾರಾ ಸಂಸ್ಕೃತಿಯನ್ನೂ ಬಿಂಬಿಸುವ ಶ್ರೀಮಂತ ಕಲೆಯ ಉಡುಗೆಗಳನ್ನು ಶ್ರೀಮತಿ ಸುಧಾ ಮೂರ್ತಿಯವರಿಗೆ ಉಡುಗೊರೆಯಾಗಿ ನೀಡಲಾಯಿತು. ಬಂಜಾರಾ ಸಮುದಾಯದ ಸಂಸ್ಕೃತಿ ಮತ್ತು ಕಲೆಗೆ ಪ್ರತೀಕವಾದ ಈ ಉಡುಪುಗಳು ಬಹಳ ಸುಂದರವಾಗಿದೆ ಎಂದು ಹೇಳುತ್ತಾ ತಲೆಯ ಮೇಲೆ ಬಂಜಾರಾ ಚಾದರ ತೊಟ್ಟುಕೊಂಡು ಪೇಟಿಯಾ, ಕಾಂಚಳಿ, ಲೇಪೋಗಳನ್ನು ಕೈಯಲ್ಲಿ ಹಿಡಿದುಕೊಂಡು ವಿಶ್ವ ದರ್ಜೆಯ ಮಾನ್ಯತೆ ಪಡೆದ ಈ ಉಡುಪುಗಳನ್ನು ಕೊಂಡಾಡಿದರು.

ಬಂಜಾರಾ ಸಮುದಾಯದಿಂದ ಸುಧಾ ಮೂರ್ತಿಯವರಿಗೆ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಕ್ಷರಿ ಪುಣ್ಯಾಶ್ರಮದ ಪೀಠಾಧಿಪತಿಗಳು ಶ್ರೀ ಕಲ್ಲಯ್ಯಜ್ಜ ಮಹಾಸ್ವಾಮಿಗಳು, ರಾಮಕೃಷ್ಣ ಆಶ್ರಮ ಗದಗದ ಶ್ರೀ ನೀರ್ಬಯಾನಂದ ಮಹಾಸ್ವಾಮಿಗಳು, ಕೆ.ಎಲ್.ಇ ಸಂಸ್ಥೆಯ ಪ್ರಮುಖರಾದ ಶಂಕ್ರಣ್ಣ ಮನವಳ್ಳಿ, ವಿ.ಆರ್.ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ ಸಂಕೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ಮಾಜಿ ಶಾಸಕ ಡಿ.ಆರ್.ಪಾಟೀಲ, ವಿದ್ಯಾದಾನ ಸಮಿತಿ ಅಧ್ಯಕ್ಷ ಡಿ.ಬಿ.ಹುಯಿಲಗೋಳ, ಕಾರ್ಯದರ್ಶಿ ಶ್ರೀನಿವಾಸ್ ಹುಯಿಲಗೋಳ, ಪ್ರಾಚಾರ್ಯರಾದ, ಶ್ರೀಮತಿ ಮುಕ್ತ ಉಡುಪಿ ಹಾಗೂ ಶ್ರೀ ಎಂ ಸಿ ಕಟ್ಟಿಮನಿ, ಬಂಜಾರ ಸಮುದಾಯದ ಪ್ರೊ. ಬಿ.ಎಸ್ ರಾಠೋಡ, ಪ್ರೊ. ಬಿಲ್ಲು ಚವ್ಹಾಣ, ವೆಂಕಟೇಶ ರಾಠೋಡ, ರಮೇಶ ಲಮಾಣಿ, ಸಂಜು ಲಮಾಣಿ ಸೇರಿದಂತೆ, ಕಾರ್ಯಕ್ರಮಕ್ಕೆ ಆಗಮಿಸಿದ ಅಥಿತಿಗಳು, ಸಂಸ್ಥೆಯ ಆಡಳಿತ ಮಂಡಳಿ ವರ್ಗದವರು, ಸಿಬ್ಬಂದಿಗಳು, ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.