ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರ ಕ್ರಿಯಾ ಯೋಜನೆ ಅಭಿಯಾನದ ಅಂಗವಾಗಿ ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆ ಇಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವೈ.ಗುರಿಕಾರ ತಿಳಿಸಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ  ಕಾಮಗಾರಿ ಬೇಡಿಕೆ ಪೆಟ್ಟಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು  ಮಾತನಾಡಿದರು.

ರೈತರ ಕ್ರಿಯಾ ಯೋಜನೆ ಅಭಿಯಾನದ ಅಡಿ ರೈತರು ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗೆ ಬೇಡಿಕೆ ಸಲ್ಲಿಸಬಹುದಾಗಿದೆ. ದನದ ಶೆಡ್, ಕೃಷಿ ಹೊಂಡ, ಬದುವಿನ ಮೇಲೆ ಸಸಿ ನೆಡುವುದು, ತೆಂಗು, ಗುಲಾಬಿ, ದಾಳಿಂಬೆ, ಬಾಳೆ, ರೇಷ್ಮೆ, ಹೆಬ್ಬೇವು, ಮಲ್ಲಿಗೆ ಹೂ ಬೆಳೆಯಲು ಸಹಾಯಧನ ನೀಡಲಾವುದು. 

ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ ವಾಲಿ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ  ನರೇಗಾ ಕಾಮಗಾರಿಗಳು ಉತ್ತಮ ರೀತಿಯಿಂದ ಜರುಗಿವೆ. ಗ್ರಾಮೀಣ ಜನರ ಕಲ್ಯಾಣಕ್ಕಾಗಿಯೇ ಇರುವ ಈ ಯೋಜನೆಯನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡುವವರಿಗೆ ಪ್ರತಿದಿನಕ್ಕೆ 275 ರೂ. ಕೂಲಿ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಎಸ್.ಎಫ್. ಹಳ್ಯಾಳ, ಗ್ರಾಪಂ ಸಿಬ್ಬಂದಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ವೈ. ಗುರಿಕಾರ ಚಾಲನೆ ನೀಡಿದರು.

Leave a Reply

Your email address will not be published. Required fields are marked *

You May Also Like

ಮೌಲ್ಯ ಮಾಪನವಿಲ್ಲದೆ ವಿಟಿಯು ಪರೀಕ್ಷೆ ತೇರ್ಗಡೆಗೆ ಅಭಿಯಾನ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಡಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾಲೇಜುಗಳು ಮಾನ್ಯತೆ ಪಡೆದಿವೆ. ಈ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಮೌಲ್ಯಮಾಪನವಿಲ್ಲದೆ ವಿಟಿಯು ಎಲ್ಲಾ ವಿದ್ಯಾಥಿಗಳನ್ನು ತೆರ್ಗಡೆ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.

ಲಕ್ಕಲಕಟ್ಟಿಯಲ್ಲಿ ವಿದ್ಯುತ್ ಸ್ಪರ್ಷ: ಯುವಕ ಸಾವು

ಮನೆ ಮೇಲೆ ಹತ್ತಲು ನಿಚ್ಚಣಕಿ ಇಡಲು ಹೋದಾಗ ನಿಚ್ಚಣಿಕೆಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಸ್ಪರ್ಶಗೊಂಡ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದೆ.

ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿತೆ ಸರ್ಕಾರ? : ‘ಅನರ್ಹ’ ವಿಶ್ವನಾಥ್ ಅರ್ಹರಾದದ್ದು ಹೇಗೆ?

ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ನಿಮ್ಮ ಅರ್ಹತೆ ಸಾಬೀತು ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಅಲ್ಲಿವರೆಗೂ ಯಾವುದೇ ಪದವಿ ಪಡೆಯುವಂತಿಲ್ಲ ಎಂದಿತ್ತು ಕೂಡ.

ನಾಳೆ ರಾಜ್ಯ ಬಂದ್ – ರೈತರ ಹೋರಾಟದಿಂದಾಗಿ ಏನಿರತ್ತೆ? ಏನಿರಲ್ಲ?

ಬೆಂಗಳೂರು : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ವಿಧೇಯಕ ವಿರೋಧಿಸಿ…