ಉತ್ತರಪ್ರಭ ಸುದ್ದಿ
ಗದಗ: ವಿವೇಕ ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಹಚ್ಚುವ ಆರ್ಕಿಟೆಕ್ಟರ ಏನಾದರೂ ಕೇಸರಿ ಬಣ್ಣ ಚನ್ನಾಗಿದೆ ಅಂತಾ ಆರ್ಕಿಟೆಕ್ಟ್ ಹೇಳಿದರೆ ಕೇಸರಿ ಬಣ್ಣ ಹಚ್ಚೆ ತೀರ್ತೀನಿ ಅಂತ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿ ಬಣ್ಣವೋ ಅಲ್ವೋ..? ಕೇಸರಿ ಬಣ್ಣ ಚನ್ನಾಗಿದೆ ಅಂತಾ ಆರ್ಕಿಟೆಕ್ಟ್ ಹೇಳಿದರೆ ಕೇಸರಿ ಹಾಕ್ತೀನಿ, ವಿವೇಕ ಶಾಲೆಯ ಬಣ್ಣ, ಕಿಟಕಿ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲ್ಲ ಆರ್ಕಿಟೆಕ್ಟ್ ಮೇಲೆ ಬಿಟ್ಟಿದ್ದೇವೆ ಅವರು ಕೊಡವ ಡಿಸೈನ್ ಮೇಲೆ ನಾವು ಡಿಸೈಡ್ ಮಾಡ್ತೀವಿ, ಒಂದಿಷ್ಟು ಜನಕ್ಕೆ ಬಣ್ಣದ ಅಲರ್ಜಿ ಇದೆ.. ಅವರ ಧ್ವಜದಲ್ಲೂ ಕೆಸರಿ ಇದೆ. ಅದನ್ನ ಯಾಕೆ ಬಿಟ್ಕೊಂಡಿದಾರೆ ಅದನ್ನು ಪೂರ್ತಿ ಹಸಿರು ಮಾಡ್ಕೊಂಡಬಿಡಿ ಎಂದು ಹೆಸರು ಹೇಳದೇ ಪರೋಕ್ಷವಾಗಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
ಟಿಪ್ಪು ಬಯಸಿದ ರಾಷ್ಟ್ರಕ್ಕೆ ಹೋರಾಟ:
ಕೊಡಗು,ಕೇರಳದಲ್ಲಿ ಬಲವಂತವಾಗಿ ಮತಾಂತರ ಮಾಡಿದ ಮತಾಂತರವಾಗದಿರುವವರನ್ನ ಕೊಲೆ ಮಾಡಿದ್ದಾನೆ. ಟಿಪ್ಪು ಸುಲ್ತಾನ್ ಬರೆದ ಪತ್ರದ ಮೂಲಕವೇ ಗೊತ್ತಾಗುತ್ತಿದೆ. ದುರಾದೃಷ್ಟ ಅಂದ್ರೆ ಈ ದೇಶದಲ್ಲಿ ಟಿಪ್ಪು, ಕೆಂಪೇಗೌಡರನ್ನ ಹೋಲಿಸಲಾಗ್ತಿದೆ. ಕೆಂಪೇಗೌಡರು ಎಲ್ಲರೂ ಚನ್ನಾಗಿರ್ಬೇಕು ಅಂತಾ ಕೆಲಸ ಮಾಡಿದವರು. ದೇಶ ಇನ್ನೂ 100 ವರ್ಷ ಬಿಟ್ಟು ಹೇಗಿರಬೇಕು ಅಂತಾ ಕನಸು ಕಂಡವರು ಟಿಪ್ಪು ಸುಲ್ತಾನ್ ಏನು ಮಾಡಿದಾನೆ ಅಂತಾ ಗೊತ್ತಿದ್ರೂ ಅವನ್ನ ಇಟ್ಕೊತಾರೆ ಅಂದ್ರೆ ಮಾನಸಿಕತೆ ಅರ್ಥ ಮಾಡ್ಕೊಬೇಕು ಈ ದೇಶದಲ್ಲಿ ಟಿಪ್ಪು ಬಯಸಿದ ರಾಷ್ಟ್ರ ಆಗಬೇಕು ಅಂತಾ ಹೊರಟಿದ್ದಾರೆ ಎಂದು ದೂರಿದರು.
ತನ್ವೀರ್ ಶೇಠ್ ಅವರ ವಯಕ್ತಿಯ ವಿಚಾರ ಪಕ್ಷಕ್ಕೆ ಸಂಬಂಧ ಇಲ್ಲ ಅಂತಾ ಕಾಂಗ್ರೆಸ್ ಹೇಳಿದೆ ಇವರ ಲೆಕ್ಕ ನೋಡಿದರೆ ಯಾವ ಮೂರ್ತಿಗಳನ್ನ ಮಾಡಲೇ ಬಾರದು, ಇದ್ದ ಮೂರ್ತಿಗಳನ್ನ ತೆಗೆಯಬೇಕಾ, ಹೇಳುವುದಕ್ಕೆ ಇವರಿಗೆ ಏನು ನೈತಿಕತೆ ಇದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಮೈಸೂರಲ್ಲಿ ಟಿಪ್ಪು ಮೂರ್ತಿ ನಿರ್ಮಾಣ ಮಾಡಿದರೇ ಜನ ನಿರ್ಧಾರ ಮಾಡ್ತಾರೆ ಟಿಪ್ಪು ನಾಟಕಕ್ಕೆ ವಿರೋಧ ವಿಷಯ,ಜನಕ್ಕೆ ವಿರೋಧ ಮಾಡುವ ಅಭ್ಯಸ ಇದೆ ಸತ್ಯ ಹೇಳುವುದಕ್ಕೆ ಸಹಿಸಲ್ಲ ಸುಳ್ಳಿನ ಆಧಾರದಲ್ಲಿ ಕೆಲವರು ತಜ್ಞರಾಗಿದ್ದಾರೆ. ಸುಳ್ಳು ಹೇಳಿಕೊಂಡೇ ಕೆಲ ರಾಜಕೀಯ ಪಕ್ಷಗಳು ಬದುಕಿವೆ, ನಿಜ ಹೊರ ಬರೋದ್ರಿಂದ ಕೆಲವರ ಭವಿಷ್ಯಕ್ಕೆ ಕುತ್ತಾಗುತ್ತೆ. ದೇಶಕಂಡಂತ ಅತ್ಯಂತ ಶ್ರೇಷ್ಠ ಅಂತಾ ಟಿಪ್ಪು ಬಗ್ಗೆ ಓದಿದ್ದೇವು,ಈಗ ಸತ್ಯ ಗೊತ್ತಾಗುತ್ತಿದೆ. ಶ್ರೀರಂಗಮಟ್ಟಣದ ಆಂಜನೇಯ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದು ಗೊತ್ತಾಯ್ತು,ಪಹಣಿಯಲ್ಲಿ ಇರೋದು ಪರ್ಷಿಯನ್ ಪದ ಅಂತಾ ಗೊತ್ತಾಯಿತು. ಪಹಣಿ ಅಂದರೆ ಕನ್ನಡದ ಪದ ಅನ್ಕೊಂಡಿದ್ವಿ,ಶಿರಸ್ತೆದಾರ ಅಂದ್ರೆ ಕನ್ನಡ ಅನ್ಕೊಂಡು ಬಿಟ್ಟಿದ್ವಿ ಕನ್ನಡವನ್ನ ಕೊಂದಿದ್ದು ಟಿಪ್ಪು ಮಾಮತಾ ಈಗ ಗೊತ್ತಾಗ್ತಿದೆ ಎಂದು ವಿವರಿಸಿದರು.