ಉತ್ತರಪ್ರಭ ಸುದ್ದಿ

ನರಗುಂದ: ತಾಲೂಕಿನ ಕಲ್ಲಾಪೂರ ಗ್ರಾಮದ ಪವಾಡ ಪುರುಷ ಬಸವಣ್ಣ ಜಾತ್ರೆಯ ನಿಮಿತ್ಯ ಪಾದಯಾತ್ರೆ ಮೂಲಕ ಜಾತ್ರೆಗೆ ತೆರಳುವ ಭಕ್ತರಿಗೆ ಶಿರೋಳ ಗ್ರಾಮದ cವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು. ಶ್ರಾವಣ ಮಾಸದ ಪ್ರಥಮ ಸೋಮವಾರದಿಂದ ಪ್ರತಿ ಸೋಮವಾರವೂ ಸುತ್ತ ಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಪಾದಯಾತ್ರೆ, ಎತ್ತು ಚಕ್ಕಡಿ ಮೂಲಕ ಭಕ್ತರು ಬಸವಣ್ಣನ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ಸಕಲ ವಾದ್ಯ ಮೇಳದ ಜೊತೆಗೆ ನೂರಾರು ಹಳ್ಳಿಗಳಿಂದ ಆಗಮಿಸುವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜಾತ್ರೆಯು ನಡೆಯುತ್ತದೆ. ಬೇಡಿದವರ ವರ ಪ್ರದಾಯಕ ಕಲ್ಲಾಪುರ ಬಸವಣ್ಣ. ಸರ್ಪ ಕಚ್ಚಿದಾಗ ಇಲ್ಲಿಯ ದರ್ಶನ ಪಡೆದು ತೀರ್ಥ ಸೇವಿಸಿದರೆ ಸರ್ಪದ ವಿಷ ದೇಹವನ್ನು ಆವರಿಸುವುದಿಲ್ಲ ಎನ್ನುವ ನಂಬಿಕೆ ಇದೆ, ಹಾಗೂ ಎತ್ತುಗಳನ್ನು ದೇಗುಲಕ್ಕೆ ಪ್ರದಕ್ಷಣೆ ಹಾಕಿಸಿ ಅಂಗಾರವನ್ನು ಎತ್ತುಗಳಿಗೆ ಹಚ್ಚಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಪ್ರತೀತಿ ಇದೆ.

Leave a Reply

Your email address will not be published. Required fields are marked *

You May Also Like

ಸೋಂಕಿನ ಸವಾಲಿಗೆ ಸರ್ಕಾರ ಸುಸ್ತು!: 3693 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 3693 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ…

ಆಲಮಟ್ಟಿ: ಬಸವಭೂಮಿ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತಾತೀಥ್ಯ

ಆಲಮಟ್ಟಿ : ಆಲಮಟ್ಟಿಗೆ ಆಗಮಿಸಿದ್ದ ಬಸವಭೂಮಿ ಯಾತ್ರೆಯ ಸಹಸ್ರಾರು ಬಸವಭಕ್ತ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡು…

ಮಾರುಕಟ್ಟೆಯಲ್ಲಿಲ್ಲ ಮೆಣಸಿನಕಾಯಿ ಘಾಟು..! ರೈತರಿಗೆ ತಪ್ಪದ ಪರಿಪಾಟಲು..!

ಕೊರೋನಾ ಕಾಟದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ರೈತರ ಸಂಕಷ್ಟದ ಬದುಕಿನ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಿಮ್ಮ ಉತ್ತರ ಪ್ರಭ ಮಾಡಿದೆ

ಫೆ.27,28 ರಂದು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 27 ಮತ್ತು 28 ರಂದು ಜಿಲ್ಲಾ ಸಾಹಿತ್ಯ ಭವನದಲ್ಲಿ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಶರಣು ಗೋಗೇರಿ ಹೇಳಿದರು.