ಹುಬ್ಬಳ್ಳಿ: ಚಿನ್ನಾಭರಣ ಕದ್ದಿರೋ ಕಳ್ಳರನ್ನು ನೋಡಿದ್ದೇವೆ. ಮನೆ ದರೋಡೆ ಮಾಡಿರೋದನ್ನು ನೋಡಿದ್ದೇವೆ. ಆದ್ರೆ ಮಹಿಳೆಯರ ಬಟ್ಟೆ ಕದ್ದ ಕಳ್ಳನೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಮನೆಯ ಮುಂದೆ ಅಥವಾ ಹಿತ್ತಲಲ್ಲಿ ಒಣಹಾಕಿದ ಮಹಿಳೆಯರ ಬಟ್ಟೆ ಕದಿಯುತ್ತಿದ್ದ ಕಳ್ಳ ಸಿಕ್ಕಿಬಿದ್ದು ಪೊಲೀಸ್ ಅತಿಥಿಯಾಗಿದ್ದಾನೆ.
ಹಲವು ದಿನಗಳಿಂದ ನಗರದ ನೇಕಾರನಗರ, ಈಶ್ವರನಗರ, ಜಂಗ್ಲಿಪೇಟ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆಗಳ ಮುಂಭಾಗ ಹಾಗೂ ಹಿತ್ತಲಲ್ಲಿ ಮಹಿಳೆಯರು ತಮ್ಮ ಬಟ್ಟೆಗಳನ್ನ ಒಣಹಾಕಿರೋದನ್ನ ಗಮನಿಸಿ, ಹಗಲು ಹಾಗೂ ರಾತ್ರಿ ವೇಳೆ ಈತ ಬಟ್ಟೆಗಳನ್ನ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಪ್ರತಿ ದಿನ ಒಣಹಾಕಿದ ಬಟ್ಟೆ ಕಾಣದಾದ್ದರಿಂದ ಈ ವಿಷಯ ಇಲ್ಲಿನ ನಿವಾಸಿಗಳಿಗೆ ತಲರನೋವಾಗಿ ಪರಿಣಮಿಸಿತ್ತು.
ಯಾರು ತಮ್ಮ ಬಟ್ಟೆ ಕದಿಯುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಕಾದು ಕುಳಿತ ಇಲ್ಲಿನ ನಿವಾಸಿಗಳ ಕೈಗೆ ನಿನ್ನೆ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕುಬಿದ್ದಿದ್ದಾನೆ.
ಬಟ್ಟೆ ಕದ್ದು ಪರಾರಿಯಾಗುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದು ಈತನನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ. ನಂತರ ಇಲ್ಲಿನ ಕಸಬಾಪೇಟೆ ಪೊಲೀಸರಿಗೆ ಸ್ಥಳೀಯರು ಈತನನ್ನು ಒಪ್ಪಿಸಿದ್ದಾರೆ.