ಉತ್ತರಪ್ರಭ ಸುದ್ದಿ
ಬೆಂಗಳೂರು:
ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಇಂದು ಘೊಷಿಸಿದ್ದಾರೆ.ಇಂದು ಅರಮನೆ ಮೈದಾನದಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ಈ ಘೊಷಣೆ ಮಾಡಿದ್ದಾರೆ.ಪುನೀತ್ ರಾಜ್‌ಕುಮಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಕಾನೂನು ಅಡ್ಡಿಗಳು ಇವೆಯೆಂಬ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿರಲಿಲ್ಲ.

ಹಾಗಾಗಿ ಇದೀಗ ‘ಕರ್ನಾಟಕ ರತ್ನ’ ಘೋಷಣೆ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿವರು ಪ್ರಶಸ್ತಿ ಘೋಷಣೆ ಮಾಡುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.ಕರ್ನಾಟಕ ರತ್ನ’ ಮಾತ್ರವೇ ಅಲ್ಲ ಇನ್ನೂ ಹಲವು ಗೌರವಗಳನ್ನು ಪುನೀತ್‌ಗೆ ನೀಡಬೇಕೆಂಬ ಅಭಿಲಾಷೆ ಅಭಿಮಾನಿಗಳಿಗೆ ಇದೆ, ಅದೇ ಅಭಿಲಾಷೆ ಸರ್ಕಾರಕ್ಕೂ ಇದೆ ಎಂದು ಸಿಎಂ ಹೇಳಿದರು. ಕೇಂದ್ರ ಸರ್ಕಾರದ ಪ್ರಶಸ್ತಿಗಳೂ ಸಹ ಪುನೀತ್‌ಗೆ ಸಲ್ಲಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದು ಸಿಎಂ ಹೇಳಿದರು.

Leave a Reply

Your email address will not be published. Required fields are marked *

You May Also Like

ಕೈ ಕಮಲದ ನಡುವೆ ಟ್ವೀಟ್ ಸಮರ

ಬ್ರಷ್ಟಾಚಾರದ ವಿಷಯವೀಗ ಕೈ-ಕಮಲದ ಟ್ವೀಟ್ ಸಮರಕ್ಕೆ ಕಾರಣವಾಗಿದೆ. ಡಿಕೆಶಿ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿದರೆ, ಸಿಎಂ ಬಿಎಸ್ವೈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದೆ.

ರಾಜ್ಯದಲ್ಲಿಂದು 267 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 267 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾದಂತಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಮತ್ತೆ 18 ಕೊರೊನಾ ಪಾಸಿಟಿವ್ ಪ್ರಕರಣ ದೃಡಪಟ್ಟಿದ್ದು ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.

ಯಪ್ಪ..!, ಚಡ್ಡಿ ಜಗಳ ಈಗ ಕೋರ್ಟಿಗೆ ಬಂದೈತ್ಯಂತ..!

ಚಡ್ಯಾರಾ ಆಗಲಿ, ಪ್ಯಾಂಟರಾ ಆಗಲಿ, ಒಳ ಅಂಗ್ಯಾರ ಆಗಲಿ, ಮೇಲಂಗ್ಯಾರ ಆಗಲಿ, ಏನಾರ ಆಗಲಿ ನಾವು ಹ್ಯಾಂಗ್ ಅಳತಿ ಕೊಟ್ಟಿರತಿವಿ ಹಂಗ ಹೊಲದ್ ಕೊಡೊ ಕೆಲ್ಸಾ ಟೈಲರ್ದು. ಆದ್ರ ನಾನು ‘ಚಂದನ್ ಬಟ್ಟಿ ಕೊಟ್ಟೀನಿ. ಆದ್ರ ಟೇಲರ್ ಗಿಡ್ ಗಿಡ್ ಅಂಡರ್ ವೇರ್ ಹೊಲದಾನ. ಅರೆಸ್ಟು ಮಾಡಿ ಒಗಿರಿ ಅವನ್ನ ಅಂತ ಭೋಪಾಲಿನ್ಯಾಗ ಒಬ್ಬಾಂವ ಪೊಲೀಸರ ಠಾಣಾ ಕಟ್ಟಿ ಹತ್ಯಾನ.