ಬೀದರ: ಜಾನಪದ ಜನ ಕೇಂದ್ರಿತ ಮೌಲ್ಯಗಳ ನಿದಿಯಾಗಿದ್ದು ಇದನ್ನು ಬಗೆದಷ್ಟು ದೇಶಿಯತೆ ಅನಾವರಣಗೊಳ್ಳುವುದು ಎಂದು ಕರ್ನಾಟಕ ಜಾನಪದ ಪರಿಷತ್ತು ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಜಗನ್ನಾಥ ಹೆಬ್ಬಾಳೆ ನುಡಿದರು. ಅವರು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಹಾಗೂ ಜಿಲ್ಲಾ ಘಟಕ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ, ಕರ್ನಾಟಕ ಸಾಹಿತ್ಯ ಸಂಘ ಮತ್ತು ಕನ್ನಡ ಸಾಹಿತ್ಯ ವಿಭಾಗ ಕರ್ನಾಟಕ ಕಾಲೇಜು ಬೀದರ್ ಸಂಯುಕ್ತಾಶ್ರಯದಲ್ಲಿ ಇಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದಲ್ಲಿ ವಿಶ್ವ ಜಾನಪದ ದಿನಾಚರಣೆ-2022 ದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂಗ್ಲೆಡ್‌ನ ಡಬ್ಲ್ಯೂಜೆ. ಥೋಮ್ಸ್ ಇವರು 1846ರ ಮಾರ್ಚ 22ರಂದು ಫೋಕಲೋರ ಪದವನ್ನು ತಮ್ಮ ಲೇಖನದಲ್ಲಿ ಬಳಸಿ ಪ್ರಕಟಿಸಿದರು. ಅಂದಿನಿಂದ ಫೋಕಲೋರ ವಿಶ್ವದಲ್ಲಿ ಬಳಕೆಯಾಗುತ್ತ ಬಂತು. ಅಂದಿನನಿಂದ ಪ್ರತಿ ವರ್ಷ ಮಾರ್ಚ 22ರಂದು ವಿಶ್ವ ಜಾನಪದ ದಿನಾಚರಣೆ ಆಚರಿಸುತ್ತ ಬರಲಾಗಿದೆ. ಇಂಗ್ಲೀಷನ್ ಫೋಕಲೋರ ಪದದ ಸಂವಾದ ಪದದಲ್ಲಿ ಜಾನಪದ ಎಂದು ಕರೆಯಲಾಗುತ್ತದೆ. ಚರಿತ್ರೆಗೆ ಇದೊಂದು ಬಲಿಷ್ಠವಾದ ಆಕಾರ. ಇವುಗಳಿಗೆ ಜನಪದದಲ್ಲಿ ವಾರಸುದಾದರರು ಇವುಗಳನ್ನು ಗೌರವಿಸುವುದು ನಮ್ಮೇಲ್ಲರ ಹೋಣೆಯಾಗಿದೆ ಜನಪದ ಸಾಹಿತ್ಯ ಪ್ರಕಾರಗಳಾದ ಕಥೆ, ಹಾಡು, ಗಾದೆ, ಒಗಟು, ಒಡಪು ಮತ್ತು ಬಯಲಾಟದ ಧಾಟಿಗಳು ಹಿಡಿದಿಡುವ ಪ್ರಯತ್ನ ಮಾಡಬೇಕಾಗಿದೆ. ಅದರಲ್ಲಿರುವ ಮಾನವೀಯ ಮೌಲ್ಯಗಳನ್ನು ತಿಳಿ ಹೇಳಬೇಕಾಗಿದೆ. ಆ ದಿಶೆಯಲ್ಲಿ ಇಂದಿನ ವಿಶ್ವ ಜಾನಪದ ದಿನಾಚರಣೆ ನಮಗೆಲ್ಲ ಪೂರಕವಾಗಲಿದೆೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯರಾದ ರೇವಣಸಿದ್ದಪ್ಪ ಜಲಾದೆ ಮಾತನಾಡುತ್ತ ನಮ್ಮ ದೇಶದ ಸಂಸ್ಕೃತಿ ಇಂದಿಗೂ ಉಳಿದುಕೊಂಡು ಬಂದಿರುವುದು ಜನಪದದಿಂದ ಆಧುನಿಕ ಸಮೂಹ ಮಾಧ್ಯಮ ಕಾರಣವಾಗಿ ನಮ್ಮ ಜನಪದ ಸಂಸ್ಕೃತಿ ನಶಿಸಿ ಹೊಗುತ್ತಿದೆ. ಅದನ್ನು ಉಳಿಸಿಕೊಳ್ಳಲು ಇಂಥ ಕಾರ್ಯಕ್ರಮ ತುಂಬ ಉಪಯುಕ್ತವಾಗಲಿದೆ. ಡಾ. ಹೆಬ್ಬಾಳೆ ಅವರು ಈ ದಿಶೆಯಲ್ಲಿ ಪುಣ್ಯದ ಕಾರ್ಯ ಮಾಡುತಿದ್ದಾರೆ.
ತಾಲೂಕು ಅಧ್ಯಕ್ಷರಾದ ಎಸ್‌ಬಿ ಕುಚಬಾಳ ತಮ್ಮ ಶ್ರೀಕಂಠದಿಂದ ಜಾನಪದ ಹಾಡನ್ನು ಹಾಡಿ ರಂಜಿಸಿದರು. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ. ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿಗಳಾದ ಡಾ. ಸುನಿತಾ ಕೂಡ್ಲಿಕರ್ ಸ್ವಾಗತಿಸಿದರು. ಇನ್ನೋರ್ವ ಕಾರ್ಯದರ್ಶಿ ಡಾ. ಮಹಾನಂದಾ ಮಡಕಿ ನಿರೂಪಿಸಿದರು. ಅಂಜಲಿ ದೊಡ್ಡಕಾಮಣ್ಣ ಪ್ರಾರ್ಥನೆ ಹಾಡು ಹಾಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ರೇಣುಕಾ ಭಗವತಿ ಮತ್ತು ಮರಖಲ ಗ್ರಾಮದ ಶ್ರೀಮತಿ ನಾಗಮ್ಮ ಮತ್ತು ಸಂಗಡಿಗರು ಸಂಪ್ರದಾಯದ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನ ತಳಿಸಿದರು. ಕಾರ್ಯಕ್ರಮದಲ್ಲಿ ಅಕ್ಕ ಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಡಾ.ಸಾವಿತ್ರಿಬಾಯಿ ಹೆಬ್ಬಾಳೆ ಶ್ರೀ ಶಿವಶರಣಪ್ಪ ಗಣೇಶಪುರ ಶ್ರೀ ಶ್ರೀಧರ ಜಾಧವ ಶ್ರೀ ಪವನ ನಾಟೆಕರ ಶ್ರೀಮತಿ ಸುನೀತಾ ಬುಡೆರಿ ಉಪಸ್ಥಿತರಿದ್ದರು.ಪ್ರಾಧ್ಯಾಪಕರು ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *

You May Also Like

ಯಶಶ್ವಿನಿ ಯೋಜನೆ ರೈತರಿಗೆ ಮಾಸಿಕ ವೇತನ ಜಾರಿಗೊಳಿಸಿ

ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಉಪ ತಹಸೀಲ್ದಾರ್ ಮಂಜುನಾಥ ದಾಸಪ್ಪನವರಿಗೆ ಮನವಿ…

ಶಿಗ್ಲಿ ನಾಕಾಯಿಂದ – ಲಕ್ಷ್ಮೇಶ್ವರ ತಾಲೂಕಿನ ಸರಹದ್ದಿನವರೆಗೂ ಹದಗೆಟ್ಟ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

 ಉತ್ತರಪ್ರಭ ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ನಾಕಾಯಿಂದ – ಲಕ್ಷ್ಮೇಶ್ವರ ತಾಲೂಕಿನ ಸರಹದ್ದಿನವರೆಗೂ ಹದಗೆಟ್ಟ ರಾಜ್ಯ ಹೆದ್ದಾರಿ…

ಸಂಕಷ್ಟದಲ್ಲೂ ಪರೋಪಕಾರಿ ಈ ಆಟೋ ಚಾಲಕ

ಲಾಕ್ ಡೌನ್ ಹಿನ್ನಲೆ ದುಡಿಮೆಯನ್ನೆ ನಂಬಿದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ತನಗೆಷ್ಟೆ ಸಂಕಷ್ಟ ಎದುರಾದರೂ ಆಟೋ ಚಾಲಕನೊಬ್ಬ ಜನಸೇವೆಗೆ ನಿಂತಿದ್ದಾನೆ.