ಉತ್ತರಪ್ರಭ ಸುದ್ದಿ

ನರಗುಂದ: ತಾಲೂಕಿನ ಕಲ್ಲಾಪೂರ ಗ್ರಾಮದ ಪವಾಡ ಪುರುಷ ಬಸವಣ್ಣ ಜಾತ್ರೆಯ ನಿಮಿತ್ಯ ಪಾದಯಾತ್ರೆ ಮೂಲಕ ಜಾತ್ರೆಗೆ ತೆರಳುವ ಭಕ್ತರಿಗೆ ಶಿರೋಳ ಗ್ರಾಮದ cವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು. ಶ್ರಾವಣ ಮಾಸದ ಪ್ರಥಮ ಸೋಮವಾರದಿಂದ ಪ್ರತಿ ಸೋಮವಾರವೂ ಸುತ್ತ ಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಪಾದಯಾತ್ರೆ, ಎತ್ತು ಚಕ್ಕಡಿ ಮೂಲಕ ಭಕ್ತರು ಬಸವಣ್ಣನ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ಸಕಲ ವಾದ್ಯ ಮೇಳದ ಜೊತೆಗೆ ನೂರಾರು ಹಳ್ಳಿಗಳಿಂದ ಆಗಮಿಸುವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜಾತ್ರೆಯು ನಡೆಯುತ್ತದೆ. ಬೇಡಿದವರ ವರ ಪ್ರದಾಯಕ ಕಲ್ಲಾಪುರ ಬಸವಣ್ಣ. ಸರ್ಪ ಕಚ್ಚಿದಾಗ ಇಲ್ಲಿಯ ದರ್ಶನ ಪಡೆದು ತೀರ್ಥ ಸೇವಿಸಿದರೆ ಸರ್ಪದ ವಿಷ ದೇಹವನ್ನು ಆವರಿಸುವುದಿಲ್ಲ ಎನ್ನುವ ನಂಬಿಕೆ ಇದೆ, ಹಾಗೂ ಎತ್ತುಗಳನ್ನು ದೇಗುಲಕ್ಕೆ ಪ್ರದಕ್ಷಣೆ ಹಾಕಿಸಿ ಅಂಗಾರವನ್ನು ಎತ್ತುಗಳಿಗೆ ಹಚ್ಚಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಪ್ರತೀತಿ ಇದೆ.

Leave a Reply

Your email address will not be published. Required fields are marked *

You May Also Like

ಕೊರೋನಾ ಸೊಂಕು ನಿಯಂತ್ರಣಕ್ಕೆ ಪ್ಲಾಸ್ಮಾ ಥೆರಫಿ

ಕೊರೋನಾ ಸೋಂಕಿಗೆ ಯಾವುದೇ ಔಷಧಿ ಕಂಡು ಹಿಡಿಯಲಾಗಿಲ್ಲ. ಆದರೆ ರಾಜ್ಯದಲ್ಲಿ ಈ ಸೋಂಕು ನಿಯಂತ್ರಣಕ್ಕೆ ಪ್ಲಾಸ್ಮಾ ಥೆರಫಿ ಚಿಕಿತ್ಸೆಗೆ ರಾಜ್ಯದ ವೈದ್ಯರು ಮುಂದಾಗಿದ್ದು ಇಬ್ಬರು ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೂ ಪ್ರೇರಣೆಯಾಗಿದ್ದಾರೆ.

ಡಿಸಿ ಬಂಗಲೆಯಲ್ಲಿ ಶೂಟ್ ಮಾಡಿಕೊಂಡ ಪೊಲೀಸ್ ಪೇದೆ

ಜಿಲ್ಲಾಧಿಕಾರಿ ಬಂಗಲೆಯಲ್ಲಿಯೇ ಗುಂಡು ಹಾರಿಸಿಕೊಂಡು ಪೊಲೀಸ್ ಪೇದೆಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕರುನಾಡಲ್ಲಿ ದಾಖಲೆಯ 1502 ಕೊರೊನಾ ಸೋಂಕಿತರು ಪತ್ತೆ!: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 1502 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…

ಮೇ.18ರಿಂದ ಸಾರಿಗೆ ಸಂಚಾರ ಆರಂಭ?

ಮೇ.18ರಿಂದ ಸಾರಿಗೆ ಸಂಚಾರ ಆರಂಭ? ಬೆಂಗಳೂರು: ಮೇ.18ರಿಂದ ಸಾರಿಗೆ ಸಂಚಾರ ಸಂಪೂರ್ಣವಾಗಿ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಮೇ.17ಕ್ಕೆ…