ಕೃಷ್ಣಾ ನದಿಗೆ ಜಿಗಿದು ಯುವಕ ಆತ್ಮಹತ್ಯೆ !

ಉತ್ತರಪ್ರಭ
ಆಲಮಟ್ಟಿ:
ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿ ಅಮೂಲ್ಯ ಜೀವತೆತ್ತಿರುವ ಘಟನೆಯೊಂದು ಭಾನುವಾರ ಇಲ್ಲಿ ನಡೆದಿದೆ.
ಕುಡಿದ ಅಮಲಿನ ಮತ್ತಿನಲ್ಲಿ ಇತ ಕೃಷ್ಣಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನ್ನೆಲಾಗಿದೆ.
ಇಂಥ ದುಸ್ಸಾಹಸಕ್ಕೀಳಿದವನು ಬಾಗಲಕೋಟ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಇಲ್ಲಿಗೆ ಸಮೀಪದ ಸೀತಿಮನಿ ತಾಂಡಾದ ಯುವಕನೆಂದು ಹೇಳಲಾಗಿದೆ. ಆ ತಾಂಡಾ ನಿವಾಸಿ ಸುನೀಲ ಸೋಮಲ್ಲಪ್ಪ ಚವ್ಹಾಣ(24) ಎಂದು ಗುರುತಿಸಲಾಗಿದೆ.
ಮೃತನು ಸರಾಯಿ ಚಟಕ್ಕೆ ಅಂಟಿಕೊಂಡಿದ್ದ. ಆಮಲಿನ ದಾಸನಾಗಿ ಇತ್ತೀಚೆಗೆ ಅತೀ ಹೆಚ್ಚು ಮದ್ಯ ಸೇವನೆ ಮಾಡುತ್ತಿರುವದರಿಂದ ಅವರ ಕುಟುಂಬ ವರ್ಗದವರು ಕುಡಿತವನ್ನು ಬಿಡುವಂತೆ ಒತ್ತಾಯಿಸಿದ್ದಾರೆನ್ನಲಾಗಿದೆ. ಅದಕ್ಕೆ ಅತ ಒಪ್ಪಲಿಲ್ಲ. ಇದನ್ನೇ ಮಾನಸಿಕವಾಗಿ ಕೌಟುಂಬಿಕ ಕಲಹ ಮಾಡಿಕೊಂಡು ಆತ್ಮಹತ್ಯೆ ದಾರಿ ತುಳಿದಿದ್ದಾನೆ. ಹಳೆ ರಾಷ್ಟ್ರೀಯ 13 ಕೃಷ್ಣಾ ಸೇತುವೆಯ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನ ಶವ ದೊರೆತಿದ್ದು ನಿಯಮಾನುಸಾರ ಶವ ಪರೀಕ್ಷೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬಾಗಲಕೋಟ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಬಳಬಟ್ಟಿ: ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ನಿಡಗುಂದಿ: ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಗ್ರಾಮೀಣ ಕ್ರೀಡಾಕೂಟ ಸಹಕಾರಿ ಆಗಿದೆ ಎಂದು ಪಿಡಿಓ…

ಎನ್ ಪಿಎಸ್ ರದ್ದುಗೊಳಿಸಲು ಆಗ್ರಹಿಸಿ ನಿಡಗುಂದಿಯಲ್ಲಿ ಬೈಕ್ ರ್ಯಾಲಿ

ಉತ್ತರಪ್ರಭ ಸುದ್ದಿ ನಿಡಗುಂದಿ: ಎನ್ ಪಿಎಸ್ ನೌಕರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನಿಂದ ಹೊರಟಿರುವ ಓಪಿಎಸ್…

ನವೋದಯ : 9 ನೇ ವರ್ಗ ಪ್ರವೇಶಕ್ಕೆ ಅರ್ಜಿ ಆಹ್ವಾನ

ಆಲಮಟ್ಟಿ: ಜವಾಹರ ನವೋದಯ ವಿದ್ಯಾಲಯದ 9 ನೇ ವರ್ಗದ ಖಾಲಿಯಿರುವ ಸ್ಥಳಗಳ ಭರ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ…

ಆಗಷ್ಟ 5 ರಿಂದ 8 ದಿನಗಳಕಾಲ ಆಲಮಟ್ಟಿ ಟೂ ತಾಳಿಕೋಟಿ ಯುವಜನ ಸಂಕಲ್ಪ ನಡಿಗೆ ಯಾತ್ರೆ

20 ಸಾವಿರ ಯುವಕ-ಯುವತಿಯರಿಗೆ ಸಮವಸ್ತ್ರ ವಿತರಣೆ- ಆಲಮಟ್ಟಿಯಲ್ಲಿ ಶಾಸಕ ನಡಹಳ್ಳಿ ಚಾಲನೆಉತ್ತರಪ್ರಭಆಲಮಟ್ಟಿ: 75 ನೇ ಸ್ವಾತಂತ್ರ್ಯ…