ಉತ್ತರಪ್ರಭ
ಕ್ರೀಡೆಗಳಿಗೆ ಸ್ಪೂರ್ತಿ ನೀಡಿ- ಬಿಇಒ ಸಂಗಮೇಶ ಪೂಜಾರಿ
ವರದಿ: ಗುಲಾಬಚಂದ ಜಾಧವ
ಆಲಮಟ್ಟಿ: ಬಲವರ್ಧನೆಗೆ ಕ್ರೀಡೆಗಳು ಮಹತ್ತರ ಪಾತ್ರವಹಿಸುತ್ತವೆ. ಕಾರಣ ಶಾಲಾ ಜೀವನದಲ್ಲೇ ವಿದ್ಯಾರ್ಥಿಗಳು ಓದಿನೊಂದಿಗೆ ಆಟೋಟಗಳ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಶಿಸ್ತು ಬದ್ದ ಬದುಕನ್ನು ಕಂಡುಕೊಳ್ಳಬೇಕು ಎಂದು ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಂಗಮೇಶ ಪೂಜಾರಿ ಹೇಳಿದರು.




ಜಿಪಂ.ಸಾಶಿ ಇಲಾಖೆ ವಿಜಯಪುರ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯಾ೯ಲಯ ಬ.ಬಾಗೇವಾಡಿ ಇವರ ಸಹಯೋಗದಲ್ಲಿ ಇಲ್ಲಿನ ಮಂಜಪ್ಪ ಹಡೇ೯ಕರ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಶುಕ್ರವಾರ ಜರುಗಿದ 2022-23 ನೇ ಸಾಲಿನ ಆಲಮಟ್ಟಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕರೋನಾ ಹಾವಳಿಗೆ ಕಳೆದ ಎರಡು ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳು,ಆಟೋಟಗಳೆಲ್ಲ ಬಲಿಯಾಗಿದ್ದವು. ಈಗ ಹಂತ ಹಂತ ಶೈಕ್ಷಣಿಕ ಚಟುವಟಿಕೆಗಳೆಲ್ಲ ಪುನಃ ಚೇತರಿಕೆಗೊಳ್ಳುತ್ತಿವೆ. ಸೋಲು, ಗೆಲುವಿಗೆ ಧೃತಿಗೆಡದೆ ಮಕ್ಕಳು ಕ್ರೀಡಾ ಮನೋಭಾವದಿಂದ ಆಟದ ಕೌಶಲ್ಯ ಪ್ರದಶಿ೯ಸಬೇಕು ಎಂದರು.
ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಕ್ರೀಡಾಕೂಟಗಳಿಗೆ ಅದ್ಯತೆ ನೀಡಲಾಗಿದೆ. ಕ್ರೀಡಾ ಕ್ಷೇತ್ರಗಳಲ್ಲಿ ಭಾರತ ಮೇಲಸ್ಥಳಕ್ಕೆ ಹೋಗಬೇಕು. ಅನ್ಯ ದೇಶಗಳು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಆ ದೇಶಗಳು ಕ್ರೀಡೆಗಳನ್ನು ಕ್ರೀಡೆಯಾಗಿ ನೋಡುವ ದೃಷ್ಟಿಕೋನ ಹೊಂದಿ ಕ್ರೀಡೆಗಳನ್ನು ಉತ್ತೇಜಿಸಿ ತಮ್ಮ ದೇಶ ಕ್ರೀಡಾರಂಗದಲ್ಲಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುತ್ತಲ್ಲಿದ್ದಾರೆ. ಯುರೋಪ್ ಖಂಡದ ಜನತೆಯ ಹೆಮ್ಮೆ ಎಂದರೆ ಪ್ರತಿ ಮನೆಗೊಬ್ಬ ಕ್ರೀಡಾಪಟು ಇರುವಂತೆ ನೋಡಿಕೊಳ್ಳುವುದು.ಈ ಕಾರಣಕ್ಕಾಗಿ ಪಿಪಾ ಓಲ್ಡ್ ಕಪ್ ವನ್ನು ಉತ್ಸುಕತೆಯಿಂದ ಹಬ್ಬವನ್ನಾಗಿ ಆಚರಿಸಿ ಸಂಭ್ರಮಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಕ್ರಿಕೆಟ್ ಗೆ ಮಾತ್ರ ಜನಮಾನ್ಯತೆ ಇದೆ. ಗ್ಲಾಮಿನ್ ಆಟಗಳಿಗೆ ಉತ್ತೇಜನ ನೀಡುತ್ತಿರುವುದು ವಿಷಾಧನೀಯ. ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸಬೇಕು. ಕ್ರೀಡಾ ಜಗತ್ತಿನಲ್ಲಿ ಪ್ರಥಮ ಮಾಲಿಕೆಯಲ್ಲಿ ಭಾರತ ಮಿನುಗಬೇಕು ಎಂದು ಬಿಇಒ ಸಂಗಮೇಶ ಪೂಜಾರಿ ಅಭಿಪ್ರಾಯಿಸಿದರು.
ಪ್ರತಿ ಮಗುವಿನಲ್ಲೂ ಒಂದಿಲ್ಲೊಂದು ರೀತಿಯ ಪ್ರತಿಭೆ ಇದ್ದು ಅದನ್ನು ಗುರುತಿಸಿ ಹೊರ ತಗೆಯುವ ಕೆಲಸವಾಗಬೇಕು. ಇಂದಿನ ಸ್ಪಧಾ೯ತ್ಮಕ ಯುಗದಲ್ಲಿ ಮಕ್ಕಳು ಸದೃಢ ದೈಹಿಕ ಬೆಳವಣಿಗೆ ಹೊಂದುವದು ಅಗತ್ಯ. ಓದು ಸುಸೂತ್ರವಾಗಿ ಸಾಗಲು ಕ್ರೀಡೆಗಳು ಪೂರಕ. ಅವು ನವ ಚೇತನ, ಶಕ್ತಿ ನೀಡಬಲ್ಲವು. ಮಕ್ಕಳು ಕ್ರೀಡಾ ಭಾವದಿಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮಿಂಚಬೇಕು. ತಮ್ಮ ಬಹುಮುಖ ಪ್ರತಿಭೆ ಸಾಮಥ್ರ್ಯ ಶಾಲಾ ಹಂತದಲ್ಲೇ ತೋರ್ಪಡಿಸಿ ಅರಳಿಸಿಕೊಂಡು ಬೆಳೆಯಬೇಕು. ಕ್ರೀಡೆಗಳು ಜೀವನ ಸಫಲತೆಗೆ ಎನಜಿ೯ ಕೊಡಬಲ್ಲವು ಎಂದರು.
ಅನಗತ್ಯ ಮಾರಕವಾಗಬಲ್ಲಂಥ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ವಿನಾಕಾರಣ ಕಾಲಹರಣ ಮಾಡದೇ ಓದು,ಕ್ರೀಡೆ, ಸಾಂಸ್ಕೃತಿಕ ರಂಗದೆಡೆ ಒಲವು ಮೂಡಿಸಿಕೊಳ್ಳಬೇಕು. ತಂತ್ರಜ್ಞಾನದ ಮೊಬೈಲ್ ಜಾಲತಾಣದ ಸೆಳೆತಕ್ಕೆ ಒಳಗಾಗಬೇಡಿ. ಅದು ಜೀವನಕ್ಕೆ ಹೆಚ್ಚು ಪೆಟ್ಟು ಕೊಡುತ್ತದೆ. ಕಷ್ಟಪಟ್ಟು ಓದಿ,ಆಟೋಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ.ಸತತ ಪ್ರಯತ್ನ ಜೀವನಕ್ಕೆ ದಾರಿದೀಪ. ಜೀವನದಲ್ಲಿ ಮೇಲ್ಬರಲು ,ಶೈಕ್ಷಣಿಕ ಪ್ರಗತಿ ಸಾಧಿಸಲು ಸಂಕಲ್ಪ ಯುವ ಜನತೆ ತೋಡಬೇಕು ಎಂದರು.
ಹಿರಿಯ ಪತ್ರಕರ್ತ ಜಿ.ಸಿ ಮುತ್ತಲ್ಲದಿನ್ನಿ, ಸಣ್ಣ ಪುಟ್ಟ ದೇಶಗಳು ಕ್ರೀಡಾ ಸಾಮಥ್ರ್ಯ ಮೆರೆಯುತ್ತಿವೆ. ಭಾರತವು ಕ್ರೀಡಾಲೋಕದಲ್ಲಿ ಮುಂದೆ ಬರಬೇಕು. ಮಕ್ಕಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷ ಮಂಜುನಾಥ್ ಹಿರೇಮಠ ಕ್ರೀಡಾಕೂಟ ಉದ್ಘಾಟಿಸಿದರು. ಗುರುಮಾತೆ ಕೆ.ಎನ್.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ.ದಳವಾಯಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ ಉಪ್ಪಾರ, ಅರಣ್ಯಾಧಿಕಾರಿ ಮಹೇಶ ಪಾಟೀಲ, ವ್ಹಿ.ಎ.ಭಾಂಡವಲಕರ,ಪಿ.ಎ.ಹೇಮಗಿರಿಮಠ, ಎಚ್.ಎನ್.ಕೆಲೂರ,ಎಸ್ ಆಯ್.ಗಿಡ್ಡಪ್ಪಗೋಳ, ಬ.ಬಾಗೇವಾಡಿ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಜಿ.ವಾಯ್.ನಾಗರಾಳ, ಇಸಿಓ ಯು.ವಾಯ್.ಬಶೆಟ್ಡಿ, ಬಿ.ಎಸ್.ಅವಟಿ, ಎಸ್.ಬಿ.ಹುರಕಡ್ಲಿ, ಬಿ.ಎಂ.ಮನಗೂಳಿ, ಬಿ.ವ್ಹಿ.ಶಿವಯೋಗಿಮಠ, ರಾಘವೇಂದ್ರ ವಂದಗನೂರ, ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎಂ.ಪಾಟೀಲ, ಎನ್.ಬಿ.ದಾಸರ, ಎಚ್.ಜಿ.ಕುಂಟೋಜಿ, ಜಿ.ಎಂ.ಹಿರೇಮಠ, ಜಿ.ಸಿ.ದ್ಯಾವಣ್ಣವರ,ದೇವು ವಾಲಿಕಾರ,ಟಿ.ಬಿ.ಕರದಾನಿ, ಪ್ರಕಾಶ ಧನಶೆಟ್ಟಿ,ಎಂ.ಎಸ್.ಸಜ್ಜನ, ಎಂ.ಎನ್.ಕರೆಮುರಗಿ,ಡಿ.ಟಿ.ಸಿಂಗಾರಿ,ಶಾಂತೂ ತಡಸಿ, ಸಮೀರಾಬಾನು, ತನುಜಾ ಪೂಜಾರಿ, ಕವಿತಾ ಮರಡಿ, ಸಿದ್ದಮ್ಮ ಅಂಗಡಿ, ಸರೋಜಾ ಕಬ್ಬೂರ, ಕಾಂಚನಾ ಕುಂದರಗಿ, ಶಾಹೀನ ಬಾಗಲಕೋಟ,, ಶಂಕ್ರಮ್ಮಗುಳೇದಗುಡ್ಡ, ಮಂಜುಳಾ ಸಂಗಾಪುರ ಇತರರಿದ್ದರು.
ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಸ್ವಾಗತಿಸಿದರು. ಎನ್.ಎಸ್.ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು, ಮಹೇಶ ಗಾಳಪ್ಪಗೋಳ ನಿರೂಪಿಸಿದರು, ಆರ್.ಎಂ.ರಾಠೋಡ ವಂದಿಸಿದರು.