ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯ ಸಂರಕ್ಷಣೆಯ ಜತೆಗೆ ಅರಣ್ಯ ಬೆಳೆಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ, ಕರ್ತವ್ಯದಲ್ಲಿರುವಾಗ ಹುತಾತ್ಮರಾಗುವವರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ, ಅವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಚಿಕ್ಕಗಲಗಲಿ ವಲಯ ಅರಣ್ಯ ಅಧಿಕಾರಿ ರಾಜಶೇಖರ ಲಮಾಣಿ ಹೇಳಿದರು.
ಇಲ್ಲಿಯ ಡ್ಯಾಂ ನರ್ಸರಿಯಲ್ಲಿ ಭಾನುವಾರ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಆನೆ ತುಳಿತದಿಂದ ಹುತಾತ್ಮರಾದ ಎಸ್. ಮಣಿಕಂಠನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ ಮಾತನಾಡಿ, “1730 ಸೆಪ್ಟಂಬರ್ 11 ರಂದು ಜೋಧಪುರನ ಮಹಾರಾಜ ಅಭಯಸಿಂಗ್ ನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು, ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ ಸುಮಾರು 360 ಕ್ಕೂ ಅಧಿಕ ಜನರನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ’ ಎಂದರು.

ಆರ್ ಎಫ್ ಓ ಯಶವಂತ ರಾಠೋಡ, ಉಪ ವಲಯ ಅರಣ್ಯಾಧಿಕಾರಿಗಳಾದ ಸತೀಶ ಗಲಗಲಿ, ಮೃತ್ಯುಂಜಯ ಬಿದರಕುಂದಿ, ಸಂತೋಷ ರಾಠೋಡ, ಅರಣ್ಯ ರಕ್ಷಕರಾದ ಪ್ರವೀಣ ಹಚ್ಯಾಳಕರ, ವಿಜಯಲಕ್ಷ್ಮಿ ರೆಡ್ಡಿ, ಎ.ಎಸ್. ಕಾಳೆ, ಅಶೋಕ ಮೇಲಿನಮನಿ, ಆನಂದ ದುಲಾರಿ ಅರಣ್ಯ ಸಿಬ್ಬಂದಿಗಳು, ದಿನಗೂಲಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ಡ್ರಗ್ಸ್ ಮಾರಾಟ : ವಿದೇಶಿ ಪ್ರಜೆ ಸೇರಿ ಇಬ್ಬರ ಬಂಧನ

ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆ ಸೇರಿ ಇಬ್ಬರನ್ನು ಬಂಧಿಸಿ 35 ಲಕ್ಷ ರೂ. ಮೌಲ್ಯದ 350 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಕಾಫಿಗೂ ಕೊರೊನಾ ಕಾಟ, ಬೆಳೆಗಾರರ ಸಂಕಷ್ಟ..!

ಲಾಕ್ ಡೌನ್ ಹಿನ್ನೆಲೆ ಕಾರ್ಮಿಕ ಕುಟುಂಬಗಳ ಪರಿಸ್ಥಿತಿ ಹೇಳತೀರದಾಗಿದೆ. ಕಾಫಿ ಉದ್ಯಮವನ್ನೆ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಇನ್ನು ಕಾಫಿ ಉತ್ಪಾದನಾ ಉದ್ಯಮದ ಮೇಲೂ ಲಾಕ್ ಡೌನ್ ಪರಿಣಾಮ ಬೀರಿದೆ. ಇದರಿಂದ ಕಾಫಿ ಕೈಗಾರಿಕೆಗಳು ಸಂಕಷ್ಟ ೆದುರಿಸುವಂತಾಗಿದೆ.

ಕಲ್ಲು ಗಣಿಗಾರಿಕೆಯಿಂದ ಬೇಸತ್ತ ಗ್ರಾಮಸ್ಥರು

ಅಧಿಕಾರಿಗಳ ಲೆಕ್ಕದಲ್ಲಿ ಇಲ್ಲಿನ ಕ್ರಷರ್ ಗಳನ್ನು ಬಂದ್ ಮಾಡಲಾಗಿದೆ.ಅಥವಾ ನಿಯಮದಂತೆ ಕಾರ್ಯ ನಿರ್ವಹಿಸುತ್ತಿವೆ. ಹಾಗಾದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೂ ಗ್ರಾಮಸ್ಥರ ಸಹನೆಯ ಕಟ್ಟೆ ಒಡೆದಾಗ ಹೊಟ್ಟೆಯೊಳಗಿನ ಸಿಟ್ಟು ರಟ್ಟೆಗೆ ಬರಲೇಬೇಕಲ್ಲವೇ. ಶಿರಹಟ್ಟಿ ತಾಲೂಕಿನ ಪರಸಾಪೂರದ ಸುತ್ತಮುತ್ತಲಿನ ಗ್ರಾಮಸ್ಥರ ಪಾಡು ಈಗ ಹಾಗೆ ಆಗಿದೆ.

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೂ ಅವಕಾಶ!

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಯಾವುದೇ ವಿದ್ಯಾರ್ಥಿ ಪೋಷಕ, ಪೋಷಕರು ಅಥವಾ ಜತೆಯಲ್ಲಿ ವಾಸಿಸುವ ಹತ್ತಿರದ…