ಹೀಗೊಂದು ಆಯಾಸಯಿಲ್ಲದ ಹೆಜ್ಜೆ ಗುರುತು ಸಂಚಲನ…
ಉತ್ತರಪ್ರಭ

ಆಲಮಟ್ಟಿ: ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಾಗು ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ ಸಧ್ಯ ಅರವತ್ತೈದರ ವಸಂತದ ಆಸುಪಾಸಿನಲ್ಲಿದ್ದರು ಸಹ ನಡಿಗೆಯ ಹೆಜ್ಜೆ ಗುರುತು ರಭಸಮಯ. ರಸಮಯ! ಆಯಾಸವಿಲ್ಲದ ಯೋಗ್ಯ ನಡಿಗೆ ಕಾಣುವ ಸುಯೋಗವೊಂದು ಮೊನ್ನೆ ಇಲ್ಲಿನ ಗುರುಬಳಗಕ್ಕೆಲ್ಲ ಒದಗಿತ್ತು. ಹಲ ಕಾರ್ಯಬಾಹುಳದ ಮಧ್ಯೆಯೂ ಉತ್ಸಾಹದ ನಡಿಗೆ ಸಾಗಿತ್ತು !


ಆಲಮಟ್ಟಿಯಲ್ಲಿ ಶುಕ್ರವಾರ ಕರುನಾಡು ಅನರ್ಘ್ಯ ರತ್ನ, ಶರಣ ಹಡೇ೯ಕರ ಮಂಜಪ್ಪನವರ ಸನ್ನಿಧಿಯಲ್ಲಿ ಚಾಲನೆಗೊಂಡ ಸದೃಢ ಭಾರತಕ್ಕಾಗಿ ಯುವಜನ ಸಂಕಲ್ಪ ನಡಿಗೆ ಯಾತ್ರೆಯಲ್ಲಿ ಭಾಗಿಯಾಗಿ ಯಾತ್ರಾ ವೈಭವ ಹಾಗು ಸಂಸ್ಥೆಯಡಿಯಲ್ಲಿನ ಶಾಲಾ, ಕಾಲೇಜು ಸಮಸ್ತ ಮಕ್ಕಳು ಅತ್ಯಂತ ಶಿಸ್ತಿನಿಂದ ಪಾಲ್ಗೊಂಡು ದೇಶಭಕ್ತಿ ಮೆರೆದಿರುವುದನ್ನು ಕಣ್ಣಾರೇ ಕಂಡು ತಮ್ಮ ವಿಶಾಲಭಾವದ ಕಂಗಳಲ್ಲಿ ಕಣ್ತುಂಬಿಸಿಕೊಂಡು ಪ್ರಸನ್ನರಾಗಿರುವುದು ನಮಗೆಲ್ಲ ಸಂತೋಷದ ಘಳಿಗೆ. ತಮ್ಮೆದುರಿಗೆ ಈ ಸಂದರ್ಭದಲ್ಲಿ ನನ್ನ ಮನದಲ್ಲೊಂದು ಸಂಚರಿಸುತ್ತಿರುವ ಸಂಚಲನದ ಒಂದು ಮಾತು ಹೇಳಲಿಚ್ಚಿಸುವೆ! ಆರವತ್ತೈದರಲ್ಲೂ ಇಂಥ ನಡಿಗೆ ಉತ್ಸಾಹ ಕಾಣಲು ಸಾಧ್ಯವೇ? ಯುವಜನತೆಯ ನಡಿಗೆ ಬಿಡಿ. ಮಾನ್ಯರ ನಡಿಗೆಯ ಹೆಜ್ಜೆ ಗುರುತ್ತೋಮ್ಮೆ ನೋಡಿ ! ಯುವಜನತೆಯ ಸಂಕಲ್ಪ ನಡಿಗೆ ಯಾತ್ರೆ ಆಜ್ಞಾತವಾಸ ಮಂಜಪ್ಪನವರ ಸ್ಮಾರಕದ ಅಂಗಳದಿಂದ ಹೊರಟು ಎಂ.ಎಚ್.ಎಂ ಹೈಸ್ಕೂಲ್ ರಸ್ತೆ ದಾಟಿ ಸಾಗುತ್ತಿದ್ದಂತೆ ತಮ್ಮ ಗುರುಬಳಗವನ್ನು ಕರೆದುಕೊಂಡು ಶ್ರೀ ಪಟ್ಟಣಶೆಟ್ಟಿ ಸರ್ ಅವರು ರಸ್ತೆಗುಂಟ ನಡಿಗೆಯ ಮೂಲಕ ವಚನ ಪಿತಾಮಹ ಶರಣ ಹಳಕಟ್ಟಿ ಪ್ರೌಢಶಾಲೆ ಹಾಗು ಎಂ.ಎಚ್.ಎಂ.ಪ.ಪೂ, ಪದವಿ ಕಾಲೇಜಿನ ಆವರಣದಲ್ಲಿ ನೆಟ್ಟಂಥ ಸಸ್ಯ ಕುಸುಮಗಳನ್ನು ವೀಕ್ಷಿಸಲು ಧಾವಿಸಿದರು. ಅಲ್ಲಿನ ಸಸ್ಯ ಶಾಮಲೆಗಳು ಅರಳಿ ನಿಂತಿರುವ ಪರಿಮಳ ಕಂಡು ನಿಸರ್ಗ ಸೌಂದರ್ಯ ಮೀಮಾಂಸೆ ಮನಸ್ಸಾರೇ ಹೀರಿದರು. ಖುಷಿಪಟ್ಟರು.

ನಳನಳಿಸುವ ಸಸಿಗಳ ಸುಗಂಧಕ್ಕೆ ಉಲ್ಲಾಸದ ನಗೆ ಬೀರಿದರು. ಈ ರಮ್ಯ ಹಸಿರು ಪ್ರಕೃತಿಗೆ ಮನ ಸೋತು ಫಿದಾ ಗೊಂಡರು. ಇದಷ್ಟೇ ಅಲ್ಲ ಕ್ಯಾಂಪಸ್ ಆವರಣದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯ ಖುದ್ದಾಗಿ ಪರಿಶೀಲಿಸಿ ಸಂತೃಪ್ತ ಭಾವ ಚೆಲ್ಲಿದರು. ಇಡೀ ಕ್ಯಾಂಪಸ್ ಸುತ್ತಲೂ ನಿಮಿ೯ಸಿರುವ ಸುಮಾರು ಒಂದೆರಡು ಕಿಲೋಮೀಟರ್ ಉದ್ದದ ಬ್ರಹತ್ ಕಾಂಪೌಂಡ್ ಸ್ಥಿತಿಗತಿ ಕಿಷ್ಕಂಧೆ ದಾರಿ ಮಾರ್ಗದಲ್ಲಿ ಗಿಡಗಂಟಿಗಳ ನಡುವೆ ದಾಟಿಕೊಂಡು ಸರಸರನೇ ನಡೆದ ಪರಿ ರೋಚಕವಾಗಿತ್ತು. ಕಾಂಪೌಂಡ್ ಒಳ ಅಂಗಳದಲ್ಲಿನ ಎಲ್ಲ ವಾಸ್ತವಿಕ ಚಿತ್ರದರ್ಪಣ ತಮ್ಮ ಕಣ್ಣಂಚಿನಲ್ಲಿ ಸೆರೆ ಹಿಡಿದರು. ಈ ವಯೋಮಾನದಲ್ಲೂ ಆಯಾಸ ವಿಲ್ಲದ ರಸವತ್ತಾದ ಈ ಪರಿಯ ಪಟಪಟ ನಡಿಗೆ ಸಾಧ್ಯವೇ? ಎಂಬ ಪ್ರಶ್ನೆ ಹಿಂಬಾಕ ಗುರು ಹಿತೈಷಿಗಳ ಮನದಲ್ಲಂತೂ ಕಾಡಿದ್ದು ಸತ್ಯ ! ಯುವಕರು ನಾಚಿಸುವಂತೆ ಮಾನ್ಯರ ನಡಿಗೆ ವಿಶೇಷಮಯವಾಗಿತ್ತು, ಇದು ಅಪರೂಪಮಯವೂ ಹೌದು ! ಅನುಕರಣೀಯವೂ ಹೌದು ! ಸದಾಕಾಲವೂ ಇದೇ ತೆರನಾಗಿ ನಮ್ಮ ಮಾನ್ಯ ಕಾರ್ಯದಶಿ೯ಗಳವರ ಕ್ರಾಂತಿಕಾರ ಮಿಂಚಿನ ವೇಗದ ಆದರ್ಶನೀಯ ಹೆಜ್ಜೆ ಗುರುತುಗಳು ಮೂಡುತಿರಲಿ ಎಂಬುದೇ ಎಲ್ಲ ಗುರುಬಳಗದ ಆಶಯ. ಲಿಂ,ತೋಂಟದ ಸಿದ್ದಲಿಂಗ ಶ್ರೀಗಳವರ, ಪೂಜ್ಯ ಡಾ.ಸಿದ್ದರಾಮ ಶ್ರೀಗಳವರ ಹಾಗು ಚೇತನಾಶೀಲ ಕಾರ್ಯದಶಿ೯ಗಳಾದ ಶ್ರೀ ಶಿವಾನಂದ ಪಟ್ಟಣಶೆಟ್ಟಿ ಸರ್ ಅವರುಗಳ ಕೃಪಾಶೀವಾ೯ದ ದಿಂದ ಶೈಕ್ಷಣಿಕ ರಂಗದಲ್ಲಿ ಸಂಸ್ಥೆಯ ಶಾಲಾ,ಕಾಲೇಜುಗಳು ಮೆರೆಯಲಿ ಎಂಬ ಮಹೋನ್ನತ ಆಶಯದೊಂದಿಗೆ…

  • ಗುಲಾಬಚಂದ.ಆರ್.ಜಾಧವ, (ಚಿತ್ರಕಲಾ ಶಿಕ್ಷಕ. ರಾವಬಹದ್ದೂರ, ಡಾ. ಫ.ಗು.ಹಳಕಟ್ಟಿ ಪ್ರೌಢಶಾಲೆ, ಆಲಮಟ್ಟಿ)

Leave a Reply

Your email address will not be published. Required fields are marked *

You May Also Like

ಕೋವಿಡ್‌ ಚಿಕಿತ್ಸೆ, ಸೌಲಭ್ಯಗಳಲ್ಲಿ ಲೋಪಗಳಾದರೆ ಸಂಸ್ಥೆಯ ಮುಖ್ಯಸ್ಥರೆ ಹೊಣೆ: ಸಚಿವ ಸುಧಾಕರ್

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ನೀಡುವ ವಿಷಯದಲ್ಲಿ ಲೋಪ ಅಥವಾ ದೂರುಗಳು ಕಂಡುಬಂದಲ್ಲಿ…

ಜೆಡಿಎಸ್ ಸ್ಥಾನ ಕಬಳಿಸಲು ಬಿಜೆಪಿ ಹೊಂಚು – ರೇವಣ್ಣ!

ಹಾಸನ : ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಅಂತಿಮಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ.

ಯುವಕರೇ ವಾಟ್ಸಾಪ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ..! ಪೊಲೀಸರ ನಿಗಾ ನಿಮ್ಮ ಮೇಲಿದೆ..!!

ಉತ್ತರಪ್ರಭಗದಗ: ಶಹರ ಪೊಲೀಸರು ಶ್ರೀರಾಮ ಸೇನೆ ಕಾರ್ಯ ಕರ್ತನನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಸ್ಥಳದಲ್ಲಿ…

ಹಕ್ಕಿ ಜ್ವರದ ಆತಂಕದ ನಡುವೆಯೇ ಗದಗ ಜಿಲ್ಲೆಯಲ್ಲಿ ಹಕ್ಕಿಗಳ ಸಾವು

ಇದೀಗ ಹಕ್ಕಿ ಜ್ವರದ ಸುದ್ದಿಯೇ ಸದ್ದು ಮಾಡುತ್ತಿದೆ. ಜನರು ಈ ಆತಂಕದಲ್ಲಿರುವಾಗಲೇ ಗದಗ ಜಿಲ್ಲೆ ಡಂಬಳ ಗ್ರಾಮದಲ್ಲಿ ಹಕ್ಕಿಗಳು ಏಕಾಏಕಿ ಸಾವನ್ನಪ್ಪಿರುವುದು ಇಲ್ಲಿನ ಜನರನ್ನು ಗಾಬರಿಗೊಳಿಸಿದೆ.