ಉತ್ತರಪ್ರಭ ಸುದ್ದಿ

ಶಿರಹಟ್ಟಿ: ಸಾಲದ ಹೊರೆ ತಾಳಲಾರದೆ ತಾಲೂಕಿನ ಮಾಚೇನಹಳ್ಳಿ ಗ್ರಾಮದ ರೈತನೊಬ್ಬ ನೇಣಿಗೆ ಶರಣಾದ ಘಟನೆ ಗುರುವಾರ ಜರುಗಿದೆ.

ಗ್ರಾಮದ ಪ್ರವೀಣಗೌಡ ನಿಂಗನಗೌಡ ಪಾಟೀಲ(೪೦) ಮೃತ ದುರ್ದೈವಿ. ಕಳೆದ ೫-೬ ವರ್ಷದಿಂದ ಬೆಳ್ಳಟ್ಟಿಯ ಕೆ.ವಿ.ಜಿ, ಲಕ್ಷ್ಮೇಶ್ವರದ ಪಿಎಲ್ಡಿ, ಮುಂಡರಗಿಯ ಐಡಿಎಫ್ಸಿ ಬ್ಯಾಂಕ್ಗಳಲ್ಲಿ ಸುಮಾರು ೬-೭ ಲಕ್ಷ ಬೆಳೆಸಾಲ ತೆಗೆದುಕೊಂಡಿದ್ದ. ಬೆಳೆ ಚೆನ್ನಾಗಿ ಬಾರದೆ ಮಾಡಿದ ಸಾಲವನ್ನು ಹೇಗೆ ತಿರಿಸುವುದು ಎಂದು ಮನನೊಂದು ತನ್ನ ಹೊಲದಲ್ಲಿರುವ ಗಿಡಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದು, ಈ ಕುರಿತು ಶಿರಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ವಿದ್ಯಾರ್ಥಿ ಆತ್ಮಹತ್ಯೆ

ಉತ್ತರಪ್ರಭ ನರೇಗಲ್:‌ ಪಟ್ಟಣದ ಹುಚ್ಚೀರೇಶ್ವರ ನಗರದ ವಿದ್ಯಾರ್ಥಿ ಕಾರ್ತಿಕ ವೀರಪ್ಪ ಹಳ್ಳಿಕೇರಿ(24) ನೇಣು ಬಿಗಿದುಕೊಂಡು ಆತ್ಮಹತ್ಯೆ…

ಬೆಂಗಳೂರು : ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ

ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರವಾಗಿಲ್ಲ ಎನ್ನುವುದಾದರೆ ಸೂಕ್ತ ದಾಖಲೆ ಬಿಡುಗಡೆ ಮಾಡಿ ಎಂದು ಮಾಜಿ ಸಿಎಂ…