ಅಗರ್ತಲಾ : ತ್ರಿಪುರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಮತ್ತೆ 24 ಜನ ಬಿಎಸ್ ಎಫ್ ಯೋಧರಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣ 88 ಕ್ಕೆ ತಲುಪಿವೆ ಎಂದು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ತಿಳಿಸಿದ್ದಾರೆ.

ಧಲೈ ಜಿಲ್ಲೆಯ ಅಂಬಾಸ್ಸಾದಲ್ಲಿರುವ ಬಿಎಸ್ಎಫ್ ನ 86 ನೇ ಬೆಟಾಲಿಯನ್ ಪ್ರಧಾನ ಕಚೇರಿಯಲ್ಲಿನ ಯೋಧರಲ್ಲಿ ಕಂಡು ಬಂದಿದೆ. 86 ನೇ-ಬಿಎನ್ ಬಿಎಸ್ಎಫ್ ಬೆಟಾಲಿಯನ್ ಅಂಬಾಸ್ಸಾದ 24 ಯೋಧರು ಕೋವಿಡ್ ಸೋಂಕಿಗೆ ಒಳಗಾಗಿರುವುದು ಸಾಬೀತಾಗಿದೆ. ತ್ರಿಪುರಾದಲ್ಲಿ 88 ರೋಗಿಗಳು ರೋಗಿಗಳು ಇದ್ದಾರೆ. ಇದರಲ್ಲಿ ಇಬ್ಬರು ಗುಣಮುಖರಾಗಿದ್ದು 86 ಪ್ರಕ್ರಣಗಳು ಸಕ್ರೀಯವಾಗಿವೆ. ಆದರೆ ಇವೆಲ್ಲವೂ ಸೈನ್ಯದ ಸಿಬ್ಬಂದಿಗಳೇ ಆಗಿದೆ ಹೊರತು ನಾಗರಿಕರಲ್ಲಿ ಯಾವ ಕೋವಿಡ್ ಸೋಂಕು ಪತ್ತೆಯಾಗಿಲ್ಲ.

ಇನ್ನು ಹಂದಿ ಜ್ವರದಿಂದಾಗಿ ರಾಜ್ಯದಲ್ಲಿ ಹಂದಿಮಾಂಸವನ್ನು ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಅಧಿಕೃತ ಎಚ್ಚರಿಕೆಯನ್ನು ಬಿಡುಗಡೆ ಮಾಡಿಲ್ಲ. ತ್ರಿಪುರಾ ನೆರೆರಾಜ್ಯ ಅಸ್ಸಾಂನಲ್ಲಿ ಹಂದಿ ಜ್ವರದ ಪರಿಣಾಮ ನೂರಾರು ಹಂದಿಗಳು ಸಾವನ್ನಪ್ಪಿದೆ.

Leave a Reply

Your email address will not be published. Required fields are marked *

You May Also Like

ಪಾಕ್‍ನಲ್ಲಿ ಬಸ್-ರೈಲು ಢಿಕ್ಕಿ 19 ಸಿಖ್ ಯಾತ್ರಾರ್ಥಿಗಳ ಸಾವು

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ರೈಲು-ಬಸ್ ಢಿಕ್ಕಿಯಿಂದ 19 ಸಿಖ್ ಯಾತ್ರಾರ್ಥಿಗಳು ಮೃತಪಟ್ಟು…

ಗದಗನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 18ಕ್ಕೇ ಏರಿಕೆ!

ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ದೃಢವಾಗಿದೆ. ಪಿ-1307 ಕೇಸ್ ಪತ್ತೆಯಾಗಿದ್ದು 49 ವರ್ಷದ ಮಹಿಳೆ ಮುಂಬೈನಿಂದ ಇತ್ತಿಚೆಗಷ್ಟೆ ಬಂದಿದ್ದಳು ಎನ್ನಲಾಗಿದ್ದು

ಬಾಲೇಹೊಸೂರು: ಸೀಲ್ ಡೌನ್ ತಂದ ಸಿಟ್ಟು; ತಹಸೀಲ್ದಾರ್ಗೆ ಮಾತಿನ ಪೆಟ್ಟು!

ಗದಗ: 8 ದಿನದಿಂದ ಅಗತ್ಯ ವಸ್ತು ಸಿಗದೇ ಕಂಗಾಲಾಗಿದ್ದ ಸೀಲ್ ಡೌನ್ ಪ್ರದೇಶದ ಜನರ ಎದುರು…

ಮಹಾರಾಷ್ಟ್ರದ ಜನರ ನಿದ್ದೆಗೆಡಿಸಿದ ಮಹಾಮಾರಿ!

ಮುಂಬಯಿ : ನಗರದಲ್ಲಿ ಕೊರೊನಾ ಸಮುದಾಯಿಕ ಹಂತ ತಲುಪಿದಂತಾಗಿದೆ. ಹೀಗಾಗಿ ಅಲ್ಲಿನ ಜನ ಮಹಾಮಾರಿಗೆ ತತ್ತರಿಸಿ…