ಉತ್ತರಪ್ರಭ ಸುದ್ದಿ

ಶಿರಹಟ್ಟಿ: ಸಾಲದ ಹೊರೆ ತಾಳಲಾರದೆ ತಾಲೂಕಿನ ಮಾಚೇನಹಳ್ಳಿ ಗ್ರಾಮದ ರೈತನೊಬ್ಬ ನೇಣಿಗೆ ಶರಣಾದ ಘಟನೆ ಗುರುವಾರ ಜರುಗಿದೆ.

ಗ್ರಾಮದ ಪ್ರವೀಣಗೌಡ ನಿಂಗನಗೌಡ ಪಾಟೀಲ(೪೦) ಮೃತ ದುರ್ದೈವಿ. ಕಳೆದ ೫-೬ ವರ್ಷದಿಂದ ಬೆಳ್ಳಟ್ಟಿಯ ಕೆ.ವಿ.ಜಿ, ಲಕ್ಷ್ಮೇಶ್ವರದ ಪಿಎಲ್ಡಿ, ಮುಂಡರಗಿಯ ಐಡಿಎಫ್ಸಿ ಬ್ಯಾಂಕ್ಗಳಲ್ಲಿ ಸುಮಾರು ೬-೭ ಲಕ್ಷ ಬೆಳೆಸಾಲ ತೆಗೆದುಕೊಂಡಿದ್ದ. ಬೆಳೆ ಚೆನ್ನಾಗಿ ಬಾರದೆ ಮಾಡಿದ ಸಾಲವನ್ನು ಹೇಗೆ ತಿರಿಸುವುದು ಎಂದು ಮನನೊಂದು ತನ್ನ ಹೊಲದಲ್ಲಿರುವ ಗಿಡಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದು, ಈ ಕುರಿತು ಶಿರಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಕೊವಿಡ್-19 ಸೋಂಕು: ಉಸಿರಾಟದ ಸಮಸ್ಯೆ ಸ್ಥಳದಲ್ಲೇ ಪರೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

ಗದಗ : ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲ 9…

ಮುಳಗುಂದ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಶಿವಣ್ಣ ನೀಲಗುಂದ ಆಯ್ಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ…

ಗದಗ ನಗರಸಭೆ: 25 ನೇ ವಾರ್ಡಿನಲ್ಲಿ ಗೆಲುವಿನತ್ತ ಸಂಚಲನ ಮೂಡಿಸಿದ ವಿನಾಯಕ ಮಾನ್ವಿ ಈ ಬಾರಿ ಅಶೋಕ ಮಂದಾಲಿ ಮಂದಾಗೋ ಸಾಧ್ಯತೆ!

ಉತ್ತರಪ್ರಭ ಗದಗ: ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ–2021,  ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾನಕ್ಕೆ…

ಗದಗ ಜಿಲ್ಲೆ: ಜೂನ್ 21- ಜುಲೈ18 :28 ದಿನದ ಕೋರೊನಾ ಕರಾಳತೆ : ದಿನಕ್ಕೆ 17-18 ಹೊಸ ಪಾಸಿಟಿವ್: 28 ದಿನದಲ್ಲಿ ಶೇ.89 ಹೆಚ್ಚಳ

ಕಳೆದ 28 ದಿನಗಳು ಗದಗ ಜಿಲ್ಲೆಯ ಪಾಲಿಗೆ ಕರಾಳ ದಿನಗಳು. ಈ ಅವಧಿಯಲ್ಲಿ ಸರಾಸರಿ ದಿನಕ್ಕೆ 17-18 ಹೊಸ ಪಾಸಿಟಿವ್ ಸೇರ್ಪಡೆಯಾಗಿವೆ. ಸೋಂಕಿತರ ಸಂಖ್ಯೆಯಲ್ಲಿ ಶೇ. 89ರಷ್ಟು ಹೆಚ್ಚಳವಾಗಿದೆ.