ಮುಳಗುಂದ : ಗಣರಾಜ್ಯೋತ್ಸವ ದಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿ ಸಾಂವಿಧಾನಿಕ ಹುದ್ದೆಗೆ ಅಪಮಾನ ಮಾಡಿದ ರಾಯಚೂರ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ವಜಾ ಮಾಡಬೇಕು. ಎಂದು ಆಗ್ರಹಿಸಿ ಡಾ.ಬಾಬು ಜಗಜೀವನರಾಮ ವಿವಿಧೋದ್ದೇಶಗಳ ಅಭಿವೃದ್ದಿ ಸಂಘ ವತಿಯಿಂದ ಪಪಂ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ಅವರ ಮೂಲಕ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಿದರು.

ಗಣರಾಜ್ಯೋತ್ಸವ ದಿನ ರಾಯಚೂರ ಜಿಲ್ಲಾ ನ್ಯಾಯಾಧೀಶ ಸಾಂವಿಧಾನಿಕ ಹುದ್ದೆಯಲ್ಲಿ ಇದ್ದುಕೊಂಡು ಪೂರ್ವಾಗ್ರಹ ಪೀಡಿತರಾಗಿ ಅವರ ವೃತ್ತಿಗೆ ಅಗೌರವ ರೀತಿಯಲ್ಲಿ ನಡೆದುಕೊಂಡಿದ್ದು ತೀವ್ರ ಖಂಡನೀಯ. ನ್ಯಾಯಾಧೀಶರ ಹುದ್ದೆಯಿಂದ ಅವರನ್ನ ವಜಾ ಮಾಡಬೇಕು ಮತ್ತು ರಾಜ್ಯದ ಎಲ್ಲಾ ನ್ಯಾಯಾಲಯದ ಮುಂದೆ ಅಂಬೇಡ್ಕರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಕೂಡಲೆ ಆದೇಶ ಹೊರಡಿಸಬೇಕು. ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹಾಂತೇಶ ನಡುಗೇರಿ, ಉಪಾಧ್ಯಕ್ಷ ಎಂ.ಎನ್.ನಡುಗೇರಿ, ಪ್ರಕಾಶ ಗಡದವರ, ಸಂತೋಷ ಜಾಲಣ್ಣವರ, ಬಸವರಾಜ ನಡುಗೇರಿ, ಮಹಾಂತೇಶ ತಳಗೇರಿ, ಸಂತೋಷ ದೊಡ್ಡಮನಿ, ದೇವಪ್ಪ ನಡುಗೇರಿ, ಪ್ರಕಾಶ ನಡುಗೇರಿ, ಸುಭಾಸ ಜಾಲಣ್ಣವರ, ಪರಸಪ್ಪ ಜಾಲಣ್ಣವರ ಮೊದಲಾದವರು ಇದ್ದರು.
ಮುಳಗುಂದ ರಾಯಚೂರ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಡಿಎಸ್‍ಎಸ್ ಸಂಘಟನೆ ವತಿಯಿಂದ ಪಪಂ ಮುಖ್ಯಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.