ಉತ್ತರಪ್ರಭ
ಗದಗ: ತಾಲೂಕಿನ ನಭಾಪೂರ ತಾಂಡಾದ ರೈತ ರುಪಣ್ಣ ಸೋಮಪ್ಪ ಲಮಾಣಿಯವರ ಹೋಲದಲ್ಲೊ ಹೊಲದಲ್ಲಿ ಬೆಳೆದಿದ್ದ ಕಬ್ಬು ಆಕಸ್ಮಿಕ ಬೆಂಕಿಗೆ ತಗುಲಿ ಸುಮಾರು 5 ಎಕರೆ ಕಬ್ಬು, ಸುಟ್ಟು ಭಸ್ಮವಾದ ಘಟನೆ ನಭಾಪುರ ತಾಂಡಾದಲ್ಲಿ ನಡೆದಿದೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ವಿಷಯ ತಿಳಿಯುತ್ತಿದ್ದಂತೆ ದೌಡಾಯಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ 5 ಎಕರೆ ಕಬ್ಬು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಭರ್ಜರಿ ಬೆಳೆಯ ನಿರೀಕ್ಷೆಯಲ್ಲಿದ್ದ ರೈತ ಕಬ್ಬು ಸುಟ್ಟಿದ್ದರಿಂದ ಈಗ ಕಂಗಾಲಾಗಿದ್ದಾನೆ. ಕಷ್ಟ ಪಟ್ಟು ದುಡಿದ ಹೊಲದ ಬೆಳೆ ಸುಟ್ಟು ಹೋಗಿದೆ. ಸರ್ಕಾರ ಈ ರೈತನ ನೆರವಿಗೆ ಬರಬೇಕಾಗಿದೆ. ರೈತನ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಪ್ರಯತ್ನಿಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಜಿಲೆಟಿನ್‌ ಸ್ಫೋಟ ದುರಂತ: ಗ್ರಾಮಸ್ಥರಿಂದ ಆಕ್ರೋಶ

ಜಿಲ್ಲೆಯ ಹುಣಸೋಡು ಅಕ್ರಮ ಕಲ್ಲು ಕ್ವಾರೆ ಪ್ರದೇಶದಲ್ಲಿ ಜಿಲೆಟಿನ್‌ ಸ್ಪೋಟಗೊಂಡ ಘಟನೆ ಮಾಸುವ ಮೊದಲೇ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟ ದುರಂತ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಳ್ಳಿ ಗ್ರಾಮದ ಬಳಿ ಜಿಲೆಟಿನ್ ಸ್ಫೋಟಗೊಂಡಿದೆ.

ನಮ್ಮದು ಬೆಂಕಿ ಆರಿಸುವ ಸಂಸ್ಕೃತಿ

ಸಮಾಜವನ್ನು ಒಡೆಯುವ ಸಂಸ್ಕೃತಿ ತಮ್ಮದಲ್ಲ. ನಾವು ಬೆಂಕಿ ಹಚ್ಚುವವರಲ್ಲ. ಹಚ್ಚಿದ ಬೆಂಕಿಯನ್ನು ಆರಿಸುವವರು ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಕೇಸರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಪ್ಪತ್ತಗುಡ್ಡ ವನ್ಯಜೀವಿಧಾಮ: ಕೈಬಿಡಲು ಒತ್ತಾಯಿಸಿ ಮನವಿ

ಸರ್ಕಾರ ಅವೈಜ್ಞಾನಿಕವಾಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಿಸಿದ್ದು, ಶಿರಹಟ್ಟಿ ತಾಲೂಕಿನ‌ ಬ್ಲಾಕ್ ನಂ 3 ಮತ್ತು 4 ರ ಅರಣ್ಯ ಕ್ಷೇತ್ರವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ಅಹಿಂದ್ ಸಂಘ ಹಾಗೂ‌ ಕ್ರಷರ್ ಮತ್ತು‌ ಕಲ್ಲು ಗಣಿಗಾರಿಕೆ ಕಾರ್ಮಿಕ ಒಕ್ಕೂಟ ಸಂಘದ ವತಿಯಿಂದ ಬುಧವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ‌ ಮನವಿ‌ ಸಲ್ಲಿಸಲಾಯಿತು.