ಬೆಂಗಳೂರು: ಮೂರು ದಿನಗಳ ಹಿಂದೆ ಬೆಂಗಳೂರು ಖಾಲಿ ಮಾಡಿದ್ದ ಜನ ಇದೀಗ ಮತ್ತೆ ರಾಜಧಾನಿಯತ್ತ ಮುಖ ಮಾಡಿದ್ದಾರೆ.

ಹೀಗಾಗಿ ಸಂಜೆಯಿಂದ ತುಮಕೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಜೆ 7 ಗಂಟೆಯ ಒಳಗಡೆ ಮನೆ ಸೇರಬೇಕಾದ ಹಿನ್ನೆಲೆಯಲ್ಲಿ ನೆಲಮಂಗಲ ಟೋಲ್ ಬಳಿ ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇನ್ನೊಂದು ಕಡೆ ಉತ್ತರ ಭಾರತ ಕಾರ್ಮಿಕರು ಬೆಂಗಳೂರು ಬಿಟ್ಟು ದೊಡ್ಡ ಸಂಖ್ಯೆಯಲ್ಲಿ ತಮ್ಮೂರುಗಳಿಗೆ ತೆರಳುವುದು ಮುಂದುವರಿದಿದೆ.

ಇವತ್ತು ಕೂಡ ಮಿಜೋರಾಂ, ಒಡಿಶಾ ರಾಜ್ಯಗಳಿಗೆ ತೆರಳಲು ಸಾವಿರಾರು ಕಾರ್ಮಿಕರು ಅರಮನೆ ಮೈದಾನದಲ್ಲಿ ಜಮಾಯಿಸಿದ್ರು. ಯಾರೂ ಸಾಮಾಜಿಕ ಅಂತರ ಪಾಲಿಸಿದ್ದು ಕಂಡು ಬರಲಿಲ್ಲ. ಎಲ್ಲರೂ ರೈಲು ಹತ್ತಲು ಅವಕಾಶ ಸಿಕ್ಕಿದರೆ ಸಾಕು ಅಂತಾ ನೋಂದಣಿ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದರು.

Leave a Reply

Your email address will not be published. Required fields are marked *

You May Also Like

ಮೋದಿ ಸಭೆಗೆ ಹಾಜರಾಗದ ದೀದಿ!

ಕೋಲ್ಕತ್ತಾ: ಕೇಂದ್ರ ಸರ್ಕಾರದ ವಿರುದ್ಧ ಸದಾ ಕಾಲ ಗುಡುಗುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ,…

ಕೋವಿಡ್ ಜ್ವರದಿಂದ ಬಳಲುತ್ತಿರುವ ಮಕ್ಕಳು!

ವಾಷಿಂಗ್ಟನ್‍: ಕೊರೊನಾ ವೈರಸ್‍ ಸಂಬಂಧಿತ ಜ್ವರದಿಂದ ಮಕ್ಕಳು ಬಳಲುತ್ತಿರುವ ಪ್ರಕರಣಗಳು ಅಮೆರಿಕದ ಕನಿಷ್ಠ 17 ರಾಜ್ಯಗಳಿಂದ…

ಭಾರತಕ್ಕೆ ವೆಂಟಿಲೇಟರ್ ದಾನ: ಅಮೇರಿಕಾ ಅಧ್ಯಕ್ಷ ಟ್ರಂಪ್ ಟ್ವೀಟ್

ನವದೆಹಲಿ: ಕೊರೋನಾ ಸೋಂಕು ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ಇದಕ್ಕೆ ಹಿರಿಯಣ್ಣ ಅಮೇರಿಕಾ ಕೂಡ ಹೊರತಾಗಿಲ್ಲ. ಕೊರೋನಾ…

ಹರ್ನಾಜ್ ಕೌರ್ ಸಂಧು 2021ರ ನೂತನ ವಿಶ್ವ ಸುಂದರಿ!

ಉತ್ತರಪ್ರಭ ದೆಹಲಿ: 2021ರ 70ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು…