ರಾಯಚೂರು:ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡುವುದಕ್ಕಾಗಿ ತೆರಳಿದ ರಾಯಚೂರಿನ ಇಬ್ಬರು ಯುವಕರು ಕೃಷ್ಣಾ ನದಿಯ ಪಾಲಾಗಿದ್ದಾರೆ.ಸಂಕ್ರಾಂತಿ ಪೀಡೆ ಕಳೆಯುವುದಕ್ಕಾಗಿ ನದಿಯಲ್ಲಿ ಸ್ನಾನ ಮಾಡಲು ಹೋಗುವುದು ವಾಡಿಕೆ. ಸ್ನಾನ ಮಾಡುವುದಕ್ಕಾಗಿ ರಾಯಚೂರಿನ ಆರೇಳು ಯುವಕರು ಕೃಷ್ಣಾ ನದಿಗೆ ತೆರಳಿದ್ದಾರೆ. ಇದರಲ್ಲಿ ಗಣೇಶ್ ಮತ್ತು ಉದಯ್‌ಕುಮಾರ್ ಎಂಬ ಯುವಕರು ಮೃತಪಟ್ಟಿದ್ದಾರೆ. ಗಣೇಶ್ ಮೃತದೇಹ ದೊರೆತಿದ್ದರೆ, ಉದಯ್‌ಕುಮಾರ್ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತದೆ.

ಮೃತ ಗಣೇಶ್ ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ನಿವಾಸಿ ಆಗಿದ್ದಾರೆ. ಉದಯ್‌ಕುಮಾರ್ ಸಹ ರಾಯಚೂರಿನ ಕೆಇಬಿ ಕಾಲೋನಿಯ ನಿವಾಸಿ ಆಗಿದ್ದಾರೆ ಎಂದು ತಿಳಿದು ಬಂದಿದೆ.ನದಿಯಲ್ಲಿ ಸದ್ಯ ನೀರಿನ ರಭಸವೇನೂ ಇಲ್ಲ. ಜನರು ಸ್ನಾನ ಮಾಡಲು ನಿಗದಿಪಡಿಸಿದಂತಹ ಸ್ಥಳ ಬಿಟ್ಟು ಈ ಯುವಕರು ದೂರ ತೆರಳಿದ್ದಾರೆ. ಆಳವಾದ ಪ್ರದೇಶದಲ್ಲಿ ಈಜಾಡಲು ಹೋಗಿ ಮೃತಪಟ್ಟಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಕ್ಕಳಲ್ಲಿ ಕಲೆಗಳ ವ್ಯಾಮೋಹ ಮೂಡಿಸಿ: ಉಮೇಶ್ ಶಿರಹಟ್ಟಿಮಠ

ಉತ್ತರಪ್ರಭ ನಿಡಗುಂದಿ: ಪ್ರತಿಯೊಬ್ಬ ಮಗುವಿನಲ್ಲಿ ಒಂದಿಲ್ಲೊಂದು ರೀತಿಯ ಕಲಾ ಪ್ರತಿಭೆ ಹುದುಗಿರುತ್ತದೆ. ಅಂಥ ಪ್ರತಿಭೆಗಳನ್ನು ಗುರುತಿಸಿ…

ಆಲಮಟ್ಟಿ: 1.25 ಲಕ್ಷ ಕ್ಯುಸೆಕ್ ನೀರು ಬಿಡುಗಡೆ “ಪ್ರವಾಹ ನಿಯಂತ್ರಣಕ್ಕೆ ಹಂತ ಹಂತ ಹೊರ ಹರಿವು ಹೆಚ್ಚಳ”

ಆಲಮಟ್ಟಿ: ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಆಲಮಟ್ಟಿ ಆಣೆಕಟ್ಟುಯಿಂದ 1.25 ಲಕ್ಷ ಕ್ಯುಸೆಕ್ ನೀರು…

ಕೌಜಗೇರಿ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷೆಯಾಗಿ ಸಾವಿತ್ರಮ್ಮ ಅವಿರೋಧ ಆಯ್ಕೆ

ರೋಣ: ತಾಲ್ಲೂಕಿನ ಕೌಜಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಆಯ್ಕೆಯ ಅಂಗವಾಗಿ ಮಂಗವಾರ ಚುನಾವಣಾ ಪ್ರಕ್ರಿಯೆ ಜರುಗಿತು.…

ಗಳಿಕೆ ರಜೆ ನಗದಿಕರಣ ರದ್ದು!

ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸುವ ಮೂಲಕ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಕೋವಿಡ್ ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.