ಉತ್ತರಪ್ರಭ ಸುದ್ದಿ

ನರೆಗಲ್ಲ: ಕನ್ನಡ ನಾಡು ನುಡಿಗೆ ಗದಗ ಜಿಲ್ಲೆಯ ಜಕ್ಕಲಿ ಗ್ರಾಮ ಅಪಾರವಾದ ಕೊಡುಗೆ ನೀಡಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಶ್ರೀ ವಿವೇಕಾನಂದಗೌಡ ಪಾಟೀಲ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದಲ್ಲಿ ಬುಧವಾರ ಶ್ರೀ ಅನ್ನದಾನೇಶ್ವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗ್ರಾಮ ಘಟಕದ ಉದ್ಘಾಟನೆ ಮತ್ತು ಕಸಾಪ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ವಿವೇಕಾನಂದಗೌಡ ಪಾಟೀಲ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗ್ರಾಮ ಘಟಕದ ಉದ್ಘಾಟನೆ

ಜಕ್ಕಲಿ ಗ್ರಾಮವು ಕರ್ನಾಟಕದ ನಾಡು ನುಡಿ ವಿಷಯದಲ್ಲಿ ಸದಾಕಾಲವೂ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದು ಗದಗ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಗ್ರಾಮ ಘಟಕವನ್ನು ಇಲ್ಲಿ ಆರಂಭಿಸಿದ್ದು ಸಾಹಿತ್ಯ ಪ್ರೇಮಿಗಳಿಗೆ ಸಂತಸ ತಂದಿದೆ ಇಲ್ಲಿ ಪ್ರತಿವರ್ಷವೂ ಜಿಲ್ಲಾ ಕಸಾಪದಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡು ಯುವ ಸಾಹಿತ್ಯ ಕೃಷಿಗೆ ಪ್ರೋತ್ಸಾಹಿಸಲಾಗುವುದು -ಕಸಾಪ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ವಿವೇಕಾನಂದಗೌಡ ಪಾಟೀಲ .

ಜಿಲ್ಲಾಧ್ಯಕ್ಷನಾಗಿ ನಾನು ನಿಮಿತ್ಯ ಮಾತ್ರ, ಜಿಲ್ಲೆಯ ಹಿರಿಯ ಸಾಹಿತಿಗಳು, ಕಲಾವಿದರು ಅನುಭವಿಗಳ ಮಾರ್ಗದರ್ಶನದಲ್ಲಿ ಕಸಾಪ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತೇನೆ ಹಾಗೂ ಮುಂದಿನ ದಿನಮಾನಗಳಲ್ಲಿ ಎಲ್ಲರ ಒಳಗೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ವಿಶೇಷವಾಗಿ ಮಕ್ಕಳಲ್ಲಿ ಸಾಹಿತ್ಯ, ಸಂಗೀತ, ನಾಟಕ, ಜನಪದ ಕಲೆ, ಸಂಸ್ಕೃತಿಗಳ ಕುರಿತು ಅಧ್ಯಯನ ಮತ್ತು ಪಾಲ್ಗೊಳ್ಳುವಿಕೆಗೆ ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಎಲ್ಲರೂ ಸಮುಷ್ಟಿಯಾಗಿ ಕನ್ನಡ ಕಟ್ಟುವ ಕಾರ್ಯ ಮಾಡಬೇಕಾಗಿದೆ ಎಂದರು.

ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಶ್ರೀ ವಿವೇಕಾನಂದಗೌಡ ಪಾಟೀಲ ಮಾತನಾಡಿದರು

ಕನ್ನಡದ ಕಟ್ಟಾಳು ಏಕೀಕರಣದ ರೂವಾರಿ ದಿವಂಗತದ ಅಂದಾನಪ್ಪ ದೊಡ್ಡಮೇಟಿ ಅವರ ಪುತ್ರ ಸಾಹಿತಿ ಜ್ಞಾನದೇವ ದೊಡ್ಡಮೇಟಿ ಸ್ಮಾರಕ ನಿರ್ಮಾಣ ಹಾಗೂ ಗದುಗಿನ ಸಿ. ಎನ್. ಪಾಟೀಲ ರಚನೆಯ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ಕರ್ನಾಟಕ ಸರ್ಕಾರದಲ್ಲಿ ಅಧಿಕೃತ ಘೋಷಣೆಯ ಸಂಬಂಧ ರಾಜ್ಯಾಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗುತ್ತಿದೆ -ಕಸಾಪ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ವಿವೇಕಾನಂದಗೌಡ ಪಾಟೀಲ

ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮದ ಹಿರಿಯ ಎಂ. ಎಂ. ಮೇಟಿ ಅವರು ಮಾತನಾಡಿ ಜಕ್ಕಲಿ ಗ್ರಾಮವು ಕನ್ನಡ ನಾಡಿನಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಹೊಂದಿದ್ದು ಅದು ಸಾಹಿತ್ಯ ಪರಿಷತ್ತಿನ ಗ್ರಾಮ ಘಟಕದಿಂದ ಇನ್ನಷ್ಟು ಎತ್ತರಕ್ಕೆ ಏರಲಿ ಮತ್ತು ಯುವ ಜನಾಂವು ಮೊಬೈಲ್ ವ್ಯಸನವನ್ನು ಕಡಿಮೆ ಮಾಡಿ ದಿನಪತ್ರಿಕೆ ಹಾಗೂ ಉತ್ತಮವಾದ ಹವ್ಯಾಸ ಹಾಗೂ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

ಇಡೀ ಜಿಲ್ಲೆಯಲ್ಲಿ ಮೊಟ್ಟ ಮೊದಲು ಕಸಾಪ ಗ್ರಾಮ ಘಟಕವನ್ನು ಆರಂಭಿಸಿದ್ದು ನಾವು ಹೆಮ್ಮೆ ಪಡುವಂತಹದ್ದು ಹಾಗೂ ಇದು ಯುವ ಸಾಹಿತ್ಯ ಪ್ರೇಮಿಗಳಿಗೆ ಒಂದು ಒಳ್ಳೆಯ ವೇದಿಕೆಯನ್ನು ಕಲ್ಪಿಸಲಿದೆ, ಯುವಕರಲ್ಲಿ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ; ಅದನ್ನು ಕನ್ನಡ ತಾಯಿಯ ಸೇವೆ ಎಂದು ತಿಳಿದು ಮಾಡಬೇಕು ಎಂದು ಸಾಹಿತ್ಯ ಪ್ರೇಮಿ ಯುವ ಮುಖಂಡ ವಿದ್ಯಾಧರ ಶಿರಗುಂಪಿ.

ಇದೇ ವೇಳೆಯಲ್ಲಿ ಕಸಾಪ ನೂತನ ಗ್ರಾಮ ಘಟಕದ ಪದಾಧಿಕಾರಿಗಳ ಹೆಸರನ್ನು ಘೋಷಿಸಿ ಪದಾಧಿಕಾರಿಗಳ ಪದಗ್ರಹಣ ಕಾರ್ಯ ನೆರವೇರಿಸಲಾಯಿತು

ಈ ಸಂಧರ್ಭದಲ್ಲಿ ನಿವೃತ್ತ ಶಿಕ್ಷಕ ಎಂ,ಎಸ್,ದಡೆಸೊರಮಠ, ಅಶೋಕ ಕಡಗದ, ವೀರಪ್ಪ ವಾಲಿ, ಶಿವಾನಂದ ಗಿಡ್ನಂದಿ, ಕಿಶೋರ್ ನಾಗರಕಟ್ಟಿ, ಪ್ರಕಾಶ ವಾಲಿ,ಸಂಗಮೇಶ ಮೆಣಸಗಿ, ಮುನಿಯಪ್ಪ ಪಲ್ಲೇದ, ವೀರಪ್ಪ ಪಟ್ಟಣಶೆಟ್ಟಿ, ಬಸವರಾಜ ಶ್ಯಾಶೆಟ್ಟಿ, ಉಮೇಶ ಮೇಟಿ, ರುದ್ರಪ್ಪ ಮೆಣಸಿಗಿ, ಯಮನೂರಸಾಬ ನದಾಫ್ ನಂದಾ ಮೆಣಸಿಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಲ್ಲಿಕೆಗೆ ಇರುವ ನಿಯಮಗಳೇನು?

ಬೆಂಗಳೂರು: 2021-22ನೇ ಸಾಲಿನ ಆಯವ್ಯಯದಲ್ಲಿ ಕಾಲೇಜುಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಉನ್ನತೀಕರಿಸಲು ಹಾಗೂ ನೀರಿನ ಸಂಪರ್ಕ ಒದಗಿಸಲು ಮುಂದಿನ ಎರಡು ವರ್ಷಗಳಲ್ಲಿ 100 ಕೋಟಿ ರೂಗಳನ್ನು ಮೀಸಲಿಡುವುದಾಗಿ ಘೋಷಿಸಲಾಗಿದೆ.

ಊರಳಿಯನಿಂದ ಬಂತು ಸೋಂಕು: ಆರ್.ಎಂ.ಪಿ ಡಾಕ್ಟರ್ ನಿಂದ ಸುತ್ತಲಿನ ಗ್ರಾಮಸ್ಥರಿಗೆ ಆತಂಕ..!

ಗದಗ: ಊರಳಿಯ ಮಾವನ ಮನೆಗೆ ಬಂದಿದ್ದಾನೆ. ಆದರೆ ಆತನಿಗೆ ಸೋಂಕು ತಗುಲಿರುವುದು ಸ್ವತ: ಆತನಿಗೂ ಗೊತ್ತಿರಲಿಲ್ಲ.…

ಸಿದ್ದನಾಥ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಉತ್ತರಪ್ರಭ ಸದ್ದಿಆಲಮಟ್ಟಿ: ಇಲ್ಲಿಗೆ ಸಮೀಪದ ಸಿದ್ದನಾಥ ಸಕಾ೯ರಿ ಪ್ರೌಢಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತೋತ್ಸವ ಸೋಮವಾರ…

ಟ್ರ್ಯಾಕ್ಟರ್ ಪಲ್ಟಿ ಸ್ಥಳದಲ್ಲೇ ಚಾಲಕ ಸಾವು..!

ಉತ್ತರಪ್ರಭಲಕ್ಷ್ಮೇಶ್ವರ: ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೇಶ್ವರ ಯಳವತ್ತಿ ರೈತ ಸಂಪರ್ಕ ರಸ್ತೆಯಲ್ಲಿ ಮಣ್ಣು ತುಂಬಿದ ಟ್ರ್ಯಾಕ್ಟರ್…