ರೋಣ: ತಾಲ್ಲೂಕಿನ ಕೌಜಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಆಯ್ಕೆಯ ಅಂಗವಾಗಿ ಮಂಗವಾರ ಚುನಾವಣಾ ಪ್ರಕ್ರಿಯೆ ಜರುಗಿತು. ಹಿಂದಿನ ಅಧ್ಯಕ್ಷೆ ಟಿ ಸಿ ಅಮರಗೋಳವರ ರಾಜೀನಾಮೆಯಿಂದ ತೆರುವುಗೊಂಡಿದ್ದ ಸ್ಥಾನಕ್ಕೆ ಸಾವಿತ್ರಮ್ಮ ಶೇಖಪ್ಪ ಉಗರಗೋಳವರು ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡರು.ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಸಿದರು ಅವರ ಜೊತೆ ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ಮಂಜುನಾಥ ಪಾಟೀಲ್ ಗ್ರಾಮ ಪಂಚಾಯ್ತಿ ಪಿ ಡಿ ಓ ಹಾಗೂ ಕಾರ್ಯದರ್ಶಿ ಸಿಬ್ಬಂದಿಗಳು ಸಾತ್ ನೀಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ವಿಜಯಕುಮಾರ ನೀಲಗುಂದ, ತನುಜಾ ಬೇಗಂ ಅಮರಗೋಳ. ಮಹಾಲಕ್ಷ್ಮಿ ರಾಮಣ್ಣವರ, ಶೇಕವ್ವ ಭಜಂತ್ರಿ, ಜ್ಯೋತಿ ಹೊನ್ನೂರು,ಬಿಜೆಪಿ ಮುಖಂಡರಾದ ಸುರೇಶಗೌಡ ಪಾಟೀಲ್, ನೀಲಪ್ಪಗೌಡ ದಾನಪ್ಪಗೌಡರ, ಮುತ್ತಣ್ಣ ಜಂಗಣ್ಣವರ ಇತರರು ಇದ್ದರು.