ಉತ್ತರಪ್ರಭ

ನಿಡಗುಂದಿ: ಪ್ರತಿಯೊಬ್ಬ ಮಗುವಿನಲ್ಲಿ ಒಂದಿಲ್ಲೊಂದು ರೀತಿಯ ಕಲಾ ಪ್ರತಿಭೆ ಹುದುಗಿರುತ್ತದೆ. ಅಂಥ ಪ್ರತಿಭೆಗಳನ್ನು ಗುರುತಿಸಿ ಹೊರಹಾಕಲು ಶಿಕ್ಷಣ ಇಲಾಖೆ ಕಳೆದ ಹದಿನೈದು ವರ್ಷಗಳಿಂದ ಪ್ರತಿಭಾ ಕಾರಂಜಿ ವಿಶೇಷ ಕಾರ್ಯಕ್ರಮ ನಡೆಯಿಸಿಕೊಂಡು ಬರುತ್ತಿದೆ. ಆ ಕಾರಣ ಮಕ್ಕಳಲ್ಲಿ ಕಲೆಗಳ ಬೀಜ ಬಿತ್ತಿ ಹೆಮ್ಮರವಾಗಿ ಅರುಳುವಂತೆ ಶಿಕ್ಷಕ ಸಮೂಹ ನೋಡಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿದೇ೯ಶಕ ಉಮೇಶ್ ಶಿರಹಟ್ಟಿಮಠ ಹೇಳಿದರು.


ಸಮೀಪದ ಕಮದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಜರುಗಿದ ನಿಡಗುಂದಿ ಕ್ಲಷ್ಟರ ಮಟ್ಟದ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪಧಾ೯ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದರು. ಕಲೆಗಳಿಗೆ ಭಾಷೆ, ಜಾತಿಗಳ ಬಣ್ಣಗಳಿಲ್ಲ. ಅವು ಸರ್ವ ವ್ಯಾಪಿ ಅರಳಬಲ್ಲವು. ಮಕ್ಕಳ ಬಾಲ್ಯಕ್ಕೆ ಸಾರ್ಥಕತೆ ನೀಡಬೇಕಾದರೆ ಪಾಲಕ, ಪೋಷಕರು ಜೊತೆಗೆ ಶಿಕ್ಷಕರು ಕಲಾಸಕ್ತಿಯ ಅಭಿರುಚಿ ಮೂಡಿಸಬೇಕು. ಮಕ್ಕಳ ಸ್ವಂತಿಕೆಯ ಕಲೆಗಳಿಗೆ ಉತ್ತೇಜಿಸಿ ಪ್ರೋತ್ಸಾಹಿಸಬೇಕು ಎಂದರು.


ಪ್ರತಿಭಾ ಕಾರಂಜಿ ವೇದಿಕೆ ಕಲೆಗಳ ಪ್ರದರ್ಶನ ತೋರ್ಪಡಿಸುವ ಆರಂಭದ ಸ್ಟೇಜ್. ಅದನ್ನು ಮಕ್ಕಳು ಸರಿಯಾಗಿ ಕೌಶಲ್ಯದೊಂದಿಗೆ ಸದುಪಯೋಗ ಪಡಿಸಿಕೊಳ್ಳಬೇಕು. ಲಲಿತಕಲೆಗಳ ಆಸಕ್ತಿ ಬೆಳೆಸಿಕೊಂಡು ಮುಂದೆ ಬರಬೇಕು. ಜೀವನ ನಿರ್ವಹಣೆಗೆ ಲಲಿತಕಲೆಗಳು ಸಹಕಾರಿಯಾಗಬಲ್ಲವು. ಕಲೆಗಳಲ್ಲಿ ಬೇಜಾರ ಅನ್ನುವ ಪದಗಳೇ ಇಲ್ಲ. ಹೊಸಹೊಸ ವಿಭಿನ್ನ ರೂಪ ವೇಷಗಳ ಕಲೆಗಳು ಬದುಕಿಗೆ ಹೊಸತನದ ಸ್ಪರ್ಶ ನೀಡುತ್ತವೆ. ಮಕ್ಕಳಲ್ಲಿನ ಪ್ರತಿಭೆಯನ್ನು ನೋಡಿ ಖುಷಿ ಪಡಬೇಕು.ನಗು ಮೊಗವೇ ನೋಬೆಲ್ ಪ್ರಶಸ್ತಿಕ್ಕಿಂತ ಮಿಗಿಲು. ಎಲ್ಲರ ಮುಖದಲ್ಲಿ ಹಸನತೆಯಭಾವ ಮಕ್ಕಳು ತಮ್ಮ ವಿಶಿಷ್ಟ ಪ್ರದರ್ಶನಗಳ ಮೂಲಕ ನೀಡುತ್ತಾರೆ. ಕಲೆಗಳ ಬಗ್ಗೆ ಬೇಜಾರ ಪಡಬೇಡಿ. ತಾವು ಐದನೂರಕ್ಕೂ ಹೆಚ್ಚು ನಾಟಕಗಳನ್ನು ಕಣ್ತುಂಬಿಸಿಕೊಂಡು ನಾಟಕಗಳಲ್ಲಿನ ದೃಶ್ಯ ವೈಭವದ ರಸಘಳಿಗೆ ಸವಿದಿರುವೆ ಎಂದರು.

Leave a Reply

Your email address will not be published. Required fields are marked *

You May Also Like

ಚೀಟಿ ಎತ್ತುವ ಮೂಲಕ ಹುಡುಗನೊಂದಿಗೆ ಮದುವೆ

ನಾಲ್ವರು ಯುವಕರ ಜೊತೆ ಓಡಿಹೋಗಿದ್ದ ಹುಡುಗಿಯೊಬ್ಬಳು ಸಿಕ್ಕಿ ಬಿದ್ದ ವೇಳೆ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲಕ್ಕೆ ಸಿಲುಕಿದ ಗ್ರಾಮಸ್ಥರು ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿ ಒಂದರಲ್ಲಿ ಬರೆದು ಲಾಟರಿ ಎತ್ತುವ ಮೂಲಕ ಅದರಲ್ಲಿದ್ದ ಹೆಸರಿನವನ ಮದುವೆ ಮಾಡಿಸಿದ್ದಾರೆ.

ಎಸ್‌ಡಿಎಂಸಿ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು : ಪಿ.ಸಿ.ಜೋಗರೆಡ್ಡಿ

ಶಾಲಾ ಮೇಲುಸ್ತುವಾರಿ ಸಮಿತಿ ಆಡಳಿತದಲ್ಲಿ ಶಾಲೆಯ ಅಭಿವೃದ್ಧಿ ಅಡಗಿದೆ ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಮದ್ಯೆ ಎಸ್‌ಡಿಎಂಸಿ ಸೇತುವೆಯಾಗಿಕಾರ್ಯ ನಿರ್ವಹಿಸಬೇಕಿದೆ ಎಂದು ಸಿಆರ್‌ಪಿ ಪಿ.ಸಿ.ಜೋಗರೆಡ್ಡಿ ಹೇಳಿದರು.

78 ವರ್ಷದ ಅಜ್ಜ ಮದುವೆಯಾಗಿದ್ದು 17 ವರ್ಷದ ಹುಡುಗಿಯನ್ನು!! ಮುಂದೆ ನಡೆದಿದ್ದೇನು?

ಜಕಾರ್ತಾ : 78 ವರ್ಷದ ಅಜ್ಜ 17ರ ಹುಡುಗಿಯನ್ನು ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಆದರೆ ವಿವಾಹವಾದ ಕೇವಲ 22 ದಿನಗಳಲ್ಲಿ ವಿಚ್ಛೇದನ ಪಡೆದಿದ್ದಾರೆ. ಅದೂ ಸಹ 78 ವರ್ಷದ ಅಜ್ಜನೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ವಿಶೇಷ.

ಮುಂಬೈ ಎಕ್ಸಪ್ರೆಸ್ ನಲ್ಲಿ ಬಂದಿಳಿದರು 124 ಜನ..!

ಮುಂಬೈನಲ್ಲಿದ್ದ ಜನರು ಇಂದು ಮುಂಬೈ-ಗದಗ ಎಕ್ಸಪ್ರೆಸ್ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದರು. ಇದರಲ್ಲಿ 124 ಜನರು ರೈಲಿನ ಮೂಲಕ ನಗರಕ್ಕೆ ಆಗಮಿಸಿದರು.