ಬೆಂಗಳೂರು: ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸುವ ಮೂಲಕ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಕೋವಿಡ್ ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

ಸರ್ಕಾರದ ಈ ಆದೇಶವು ಸರ್ಕಾರದಿಂದ ಸಹಾಯಾನುದಾನ / ಅನುದಾನ ಪಡೆಯುವ ಅಥವಾ ಪಡೆಯದಿರುವ ಎಲ್ಲಾ ಕರ್ನಾಟಕ ಸರ್ಕಾರದ ಎಲ್ಲಾ ಉದ್ಯಮಗಳ ಸಂಸ್ಥೆಗಳ ನೌಕರರಿಗೂ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

2021 ರ ಜನವರಿ ತಿಂಗಳಿಂದ ಡಿಸೆಂಬರ್ ಅಂತ್ಯದ ಅವಧಿಯಲ್ಲಿ ನಿವೃತ್ತಿ ಹೊಂದುವ ಎಲ್ಲಾ ಅರ್ಹ ನೌಕರರು / ಅಧಿಕಾರಿಗಳು, ಅವರು ನಿವೃತ್ತಿ ಹೊಂದುವ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶದ ಪ್ರಕಾರ 2021ನೇ ಸಾಲಿನ 01-01-2021 ರಿಂದ 31-12-2021 ರವರೆಗಿನ ಅವಧಿಯಲ್ಲಿ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು ಮತ್ತೆ ಎರಡಂಕಿ ಬಿಡದ ಸೋಂಕು: 14 ಕೊರೊನಾ ಪಾಸಿಟಿವ್!

ಗದಗ ಜಿಲ್ಲೆಯಲ್ಲಿಂದು ಮತ್ತೆ ಎರಡಂಕಿ ಬಿಡದ ಸೋಂಕು: 14 ಕೊರೊನಾ ಪಾಸಿಟಿವ್! ಗದಗ: ಜಿಲ್ಲೆಯಲ್ಲಿಂದು 14…

ಸಿರಿಧಾನ್ಯಗಳ ಅಭಿಯಾನ ಶನಿವಾರ ಉದ್ಘಾಟನೆ ಸಮಾರಂಭ

ರಾಯಚೂರು: ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವುದನ್ನು ಉತ್ತೇಜಿಸಲು ರೈತಸಿರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ…

ಗ್ರಾಮಪಂಚಾಯಿತಿಗೆ ಸದಸ್ಯರ ನೇಮಕ: ಕಾಂಗ್ರೆಸ್ ವಿರೋಧ

ಅವಧಿ ಪೂರ್ಣಗೊಳ್ಳುವ ಗ್ರಾಮ ಪಂಚಾಯಿತಿಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಅವಕಾಶ ನೀಡದಂತೆ ಹಾಗೂ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರ ನಿಯೋಗ ಮೂಲಕ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿತು.