ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಮತ್ತು ನೆಲ್ಸನ್ ಮಂಡೇಲಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದ ಶ್ರೀ ಡಿ.ಡಿ. ಕಡೇಮನಿಯವರು ತಮ್ಮ ೭೩ನೇ ವಯಸ್ಸಿನಲ್ಲಿ ದಿ.೬ ರಂದು ಗುರುವಾರ ಹೃದಯಾಘಾತದಿಂದ ನಿಧನರಾದರು.
ಇವರು ತಮ್ಮ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಕಡೇಮನಿ, ಸುಪುತ್ರರಾದ ವಿಶಾಲ್ ಹಾಗೂ ವಿಜಯಕುಮಾರ, ಮಗಳು ಶ್ರೀಮತಿ ರೇಶ್ಮಾ ಕೋಂ. ಆನಂದ ಜಿಗಜಿಣಗಿ, ಸೊಸೆ ಶ್ರೀದೇವಿಯವರನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಶ್ರೀ ರಮೇಶ ಜಿಗಜಿಣಗಿ, ಹಿರಿಯರಾದ ಮೋಹನ ಆಲಮೇಲಕರ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ‍್ಯದರ್ಶಿಗಳಾದ ಶಿವಾನಂದ ಎಸ್. ಪಟ್ಟಣಶೆಟ್ಟಿ, ಹಿರಿಯ ಮುಖಂಡರಾದ ಎಸ್. ಎನ್. ಬಳ್ಳಾರಿ ನಿವೃತ್ತ ಶಿಕ್ಷಕರು, ಪ್ರೊ. ಸತೀಶ ಪಾಸಿ ಹಾಗೂ ಅವರ ಅಭಿಮಾನಿಗಳು ಡಿ.ಡಿ. ಕಡೇಮನಿಯವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ದಿ.೭ ರಂದು ಶುಕ್ರವಾರ ಮುಂಜಾನೆ ೧೧ ಗಂಟೆಗೆ ಹಾತಲಗೇರಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಜರುಗುವುದು.

Leave a Reply

Your email address will not be published. Required fields are marked *

You May Also Like

ಮಹಿಳಾ ಮಣಿಗಳ ಅಧಿಪತ್ಯಪ್ರಾರಂಭ: ಬಿಜೆಪಿಗೆ ರಾಮನಿಂದ ಪಟ್ಟಾಭಿಷೇಕ,ಕಾನೂನು ಹೋರಾಟ -ಎಚ್ ಕೆ ಪಾಟೀಲ

ಉತ್ತರಪ್ರಭ ಸುದ್ದಿಗದಗ: ಕಾಂಗ್ರೆಸ್‌ನ ಹಿಡಿತದಲ್ಲಿದ್ದ ನಗರಸಭೆ ಗದ್ದುಗೆ ದಶಕಗಳ ಬಳಿಕ ಬಿಜೆಪಿ ಪಾಲು, ಬಿಜೆಪಿಯಲ್ಲಿ ಸಂಭ್ರಮ…

ಕುಡಿದ ಮತ್ತಿನಲ್ಲಿ ಮಹಿಳೆಯ ಜೀವಕ್ಕೆ ಕುತ್ತು ತಂದ ಪೊಲೀಸ್!

ನವದೆಹಲಿ : ಕುಡಿದ ಮತ್ತಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ವೇಗವಾಗಿ ಕಾರು ಚಲಾಯಿಸಿ…

ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವರ್ಗಾವಣೆ

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಡಿಪಿ & ಎಆರ್ (ಸರ್ವೀಸಸ್-1) ಇಲಾಖೆ ಇಂದು ಆದೇಶ ಹೊರಡಿಸಿದೆ.

ಕೊರ್ಲಹಳ್ಳಿ ಟೋಲ್ ನಾಕಾ ಸಿಬ್ಬಂದಿ ಗೂಂಡಾಗಿರಿ..!

ಮುಂಡರಗಿ: ಟೋಲ್ ನಾಕಾ ಹಣದ ವಿಚಾರಕ್ಕೆ ಸಂಬಂಧ ಪಟ್ಟಂತೆ ಟೋಲ್ ಸಿಬ್ಬಂಧಿಗಳು ಗೂಂಡಾಗಿರಿ ನಡೆಸಿದ್ದು ನಾಲ್ವರನ್ನು…