ಉತ್ತರಪ್ರಭ
ಗದಗ:
ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾ.ಪಂ ಹಿಂದಿನ ಪ್ರಬಾರಿ ಪಿಡಿಓ ಶಾಬುದ್ದೀನ ಕವಡೇಲಿ ರನ್ನು ವರ್ಗಾವಣೆ ಮಾಡುವ ಹಾಗೂ ಇವರ ಅಧಿಕಾರದ ಅವಧಿಯಲ್ಲಿ ಅಕ್ರಮವಾಗಿ ಸರ್ಕಾರದ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ದಾಖಲು ಮಾಡಿದ್ದರ ಬಗ್ಗೆ ಸಮಗ್ರ ತನಿಖೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ರೈತ ಸೇನಾ ಜಿಲ್ಲಾ ಸಂಚಾಲಕ ಮಂಜಯ್ಯಸ್ವಾಮೀ ಅರವಟಗಿಮಠ ದೂರು ಸಲ್ಲಿಸಿದ್ದು, ಪಂ.ರಾಜ್ ಸಹಾಯಕ ನಿರ್ದೇಶಕರು ತಾ.ಪಂ ಇವರನ್ನು ಪರೀಶಿಲನೆಗೆ ನೇಮಿಸಲಾಗಿತ್ತು.


ಈ ಹಿನ್ನೆಲೆ ಪರೀಶಿಲಿಸಿದ ಪ್ರಕಾರ ಸ್ಥಿರ ಸ್ವತ್ತುಗಳ ಅರ್ಜನೆ ಮತ್ತು ವರ್ಗಾವಣೆ ನಿಯಮಗಳನ್ನು ಉಲ್ಲಂಘನೆ ಹಾಗೂ ಸರ್ಕಾರಿ ಜಮೀನನ್ನು ಯಾರಿಗೂ ಹಂಚಿಕೆ ಮಾಡಲು ಅವಕಾಶ ವಿರುವದಿಲ್ಲ ಎಂಬ ಸ್ಪಷ್ಠ ಸರ್ಕಾರದ ನಿರ್ದೇಶನವನ್ನೆ ಉಲ್ಲಂಘಿಸಿರುವದರಿಂದ ಹಿಂದಿನ ಪ್ರಭಾರ ಪಂಚಾಯತ ಅಭಿವೃಧ್ದಿ ಅಧಿಕಾರಿ ಹಾಗೂ ಪ್ರಸ್ತುತ ಕೋರ್ಲಹಳ್ಳಿ ಗ್ರಾ.ಪಂ ಗ್ರೇಟ್-2 ಕಾರ್ಯದರ್ಶಿ ಎಸ್.ಕೆ.ಕವಡೇಲಿಯರನ್ನು ಜಿಲ್ಲಾ ಪಂಚಾಯತಿ ಸಿ.ಇ.ಓ ಸುಶಿಲಾ ಬಿ ಅಮಾನತು ಮಾಡಿ ದಿ. 17-01-2023 ಆದೇಶ ಹೋರಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಟೈರ್ ಗೆ ಬೆಂಕಿ ಹಚ್ಚಲು ಪೊಲೀಸರ ವಿರೋಧ: ಕರವೇ ಕಾರ್ಯಕರ್ತರ ಆಕ್ರೊಶ

ಕರ್ನಾಟಕ ಬಂದ್ ಹಿನ್ನಲೆ, ಮುಳಗುಂದ ನಾಕಾ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಟೈರ್ ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದರು.

ಕೆರೆಗೆ ಮರುಜೀವ ನೀಡಿದ ಧರ್ಮಸ್ಥಳ ಯೋಜನೆ

ಪಟ್ಟಣದ ಕಲ್ಲೂರ ರಸ್ತೆಗೆ ಹೊಂದಿಕೊAಡ ಪಟ್ಟಣಶೆಟ್ಟಿ ಕೆರೆ ಈಗ ಅಭಿವೃದ್ದಿಗೊಂಡಿದ್ದು ಕಡಿಮೆ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಿದ ಅಭಿವೃದ್ದಿ ಸಮಿತಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯಲ್ಲಿಂದು 2 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 2 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 176…