ಉತ್ತರಪ್ರದೇಶ್: ಪ್ರತಿಯೊಬ್ಬ ಹೆಣ್ ಮಕ್ಕಳು ಮನ್ಯಾಗ್ ತಂದಿ-ತಾಯಿ ಸಾಲಾಸೂಲಾ ಮಾಡಿ ಮದ್ವಿ ಮಾಡಿ, ಅಳಿಯಾ ಕೇಳೋವಷ್ಟು ವರದಕ್ಷಿಣೆ ಕೊಟ್ಟು ಮಗಳನ ಗಂಡನ್ ಮನಿಗೆ ಕಳಿಸಬೇಕು ಅನ್ನೋವಷ್ಟರಲ್ಲಿ ಹೈರಾಣಾಗಿ ಹೋಗುತ್ತ. ಉಷ್ ಅಪ್ಪಾ ಅಂತ ಮಗಳ್ ಮದ್ವಿ ಆದ್ರ ಸಾಕು ತಂದಿ-ತಾಯಿ ನಿಟ್ಟುಸಿರು ಬಿಡ್ತಾರಾ? ಆದರೆ ಇಲ್ಲೊಬ್ಬಳು ಹುಡುಗಿ ವರದಕ್ಷಣಿ ಅಂತ ನಂಗ್ ಬುಲೇಟ್ ಬೇಕಾಬೇಕು ಅಂತ ಪಟ್ಟು ಹಿಡಿದ ವರನಿಗೆ ತಕ್ಕ ಪಾಠಾ ಕಲಿಸ್ಯಾಳ.
ಬುಲೇಟ್ ಕೊಟ್ರ ನಾನು ತಾಳಿ ಕಟ್ ತೀನಿ ಅಂತ ಪಟ್ ಹಿಡಿದ್ ಕುಂತೋನಿಗೆ ನಿನ್ನಂಥಂಗ್ ನಾ ಮದ್ವಿ ಆಗಾಕ್ ವಲ್ಲೆ ಅಂತ್ಹೇಳಿ ಮದ್ವಿ ಮನಿಯಾಗಿಂದ ಹೊರಗ್ ಬಂದ ಘಟನೆ ಉತ್ತರ ಪ್ರದೇಶದ ಥಾನಾ ಜಿಲ್ಲೆಯೊಳಗ ನಡದೈತಿ.
ಬರೇಲಿ ಜಿಲ್ಲೆಯ ಸಮೀಪದ ಇಜ್ಜತ್ ನಗರ ನಿವಾಸಿ ಕುಲ್ಸೂಮ್ ಬಿ ಅವರಿಗೆ ಸಿಬಿ ಗಂಜ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಜೀಶನ್ ಅನ್ನೋರ್ ಕೂಡ ಮದ್ವಿ ನಿಗದಿಯಾಗಿತ್ತು. ವರ ಕುಲ್ಸೂಮ್ ಅವರ ಕುಟುಂಬ ಸಂಬಂಧಿಕರೊಂದಿಗೆ ಮೆರವಣಿಗೆಯೊಳಗ್ ಸಂಜೆ ವಧುವಿನ ಮನಿ ಬಾಗಿಲಿಗೆ ಬಂದ. ಆಗ ಮದ್ವೀ ಗಂಡು ವರದಕ್ಷಿಣೆ ರೂಪದಲ್ಲಿ ಬುಲೆಟ್ ಕೊಡಸತೀನಿ ಅಂತ ಒಪ್ಪಿಕೊಂಡ ಹುಡುಗಿ ಮನಿಯವರಿಗೆ ಎಲ್ಲೈತಿ ಬುಲೇಟ್ ಅಂತ ಕೇಳಿದ. ವಧುವಿನ ಅವರ ತಂದೆ ಬುಲೆಟ್ ಬುಕ್ಕೂ ಮಾಡಿದ್ದರು. ಆದರೆ ಕೊರೊನಾ ಅಬ್ಬರ ಹಾಗೂ ಲಾಕ್‌ಡೌನ್ ಕಾರಣ ಶೋರೂಂ ಬಂದ್ ಆಗಿದ್ರಿಂದ ಮದುವಿ ವ್ಯಾಳ್ಯಾದಾಗ ಬುಲೇಟ್ ಕೊಡಿಸೋದು ಭಾಳ್ ಕಷ್ಟದ್ ಕೆಲ್ಸಾ ಆಗಿತ್ತು. ಇದರಿಂದ ಭಾಳ್ ಸಿಟ್ಟಿಗೆದ್ದ ವರ ಮಹಾಶಯ ಬುಲೆಟ್ ಕೊಡ್ರಿ ಇಲ್ಲಂದ್ರ ಬುಲೇಟ್ ಗೆ ಎಷ್ಟಾಗುತ್ತೋ ಅಷ್ಟು ರೊಕ್ಕಾ ಕೊಡ್ರಿ ಅಂತ ಪಟ್ಟ್ ಹಿಡಿದ್ ಕುಂತ. ಪಾಪ.. ಹೆಣ್ಣಿನ್ ಕಡೆಯವ್ರು ಬುಲೇಟ್ ಬುಕ್ ಮಾಡಿದ ರಸೀದಿ ತೋರಿಸಿದ್ರು ಅಂವಾ ಏನು ಜುಮ್ ಅನಲಿಲ್ಲ. ನಂಗೇನೂ ಹೇಳಬ್ಯಾಡ್ರಿ ನಂಗೀಗ ಬುಲೇಟ್ ಬೇಕು ಅಂದ್ರ ಬೇಕಾ ಅಂತ ಹಟಕ್ ಬಿದ್ದ. ವರನ ಹಟದ್ ಗುಣ ನೋಡಿದ್ ವಧು, ಇಂಥವನ್ ಮದ್ವಿ ಆಗಾಕ್ ನಾ ವಲ್ಲೆ ಅಂತ ಖಾಡಾಮುಡಿಯಾಗಿ ಮದ್ವಿ ತಿರಸ್ಕಾರ ಮಾಡಿದ್ಲು.
ಅಷ್ಟೆಲ್ಲಾ ಎಪ್ಪಾ, ಎಣ್ಣಾ ಅಂತ ಗೋಗರೆದು ಹೇಳಿದ್ರು ಕೇಳದ್ ವರ, ವಧುವಿನ ನಿರ್ಧಾರದಿಂದ ಇಂಗ್ ತಿಂದ್ ಮಂಗ್ಯಾನಂಗಾಗಿ ಹ್ವಾದ.

Leave a Reply

Your email address will not be published. Required fields are marked *

You May Also Like

ಮತ್ತೆ ಬೆಂಗಳೂರಿನತ್ತ ಹೊರಟ ಜನ!

ಬೆಂಗಳೂರು: ಮೂರು ದಿನಗಳ ಹಿಂದೆ ಬೆಂಗಳೂರು ಖಾಲಿ ಮಾಡಿದ್ದ ಜನ ಇದೀಗ ಮತ್ತೆ ರಾಜಧಾನಿಯತ್ತ ಮುಖ…

ಹೀಗೆ ಮುಂದುವರೆದರೆ ಸೋಂಕಿತರ ಸಂಖ್ಯೆ ಆಗಷ್ಟ್ ನಲ್ಲಿ ಎಷ್ಟಾಗಲಿದೆ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರೆದರೆ ಆಗಸ್ಟ್ 15ರ ವೇಳೆಗೆ ಸೋಂಕಿತರ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೋವಿಡ್-19 ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಅಂದಾಜಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ವಸತಿ ನಿಲಯಕ್ಕೆ ಅರ್ಜಿ: ಅವಧಿ ವಿಸ್ತರಣೆ

ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗÀಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ನಗರ ಸಭೆ ಚುನಾವಣೆ: 17ನೇ ವಾರ್ಡನ ಪಕ್ಷೇತರ ಅಭ್ಯರ್ಥಿ  ಆಸ್ಮಾ ಮುನ್ನಾ ಸಾಭ ರೇಶ್ಮಿ ಮತ್ತು 3ನೇ ವಾರ್ಡನಲ್ಲಿ ಬಿಜೆಪಿಗೆ ಜಯ

ನಗರ ಸಭೆ ಚುನಾವಣೆ: 17ನೇ ವಾರ್ಡನ ಪಕ್ಷೇತರ ಅಭ್ಯರ್ಥಿ  ಆಸ್ಮಾ ಮುನ್ನಾ ಸಾಭ ರೇಶ್ಮಿ ಮತ್ತು…