ರೋಣ: ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಬೈಕ್ ಸವಾರ ಮುಗಳಿ ಗ್ರಾಮಕ್ಕೆ ಕೆಲಸಕ್ಕಾಗಿ ಹೊರಟಿದ್ದ ವೇಳೆ, ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ರೋಣ ಪಟ್ಟಣದ ಮುಗಳಿ ರಸ್ತೆಯಲ್ಲಿ ಘಟನೆ ನಡೆದಿದೆ. ಮೃತನನ್ನು ರೋಣ ಪಟ್ಟಣದ ಶರಣಪ್ಪ ಮಡಿವಾಳರ್(26) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಶರಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಶರಣಪ್ಪ ಕುಟುಂಬಕ್ಕೆ ಒಬ್ಬನೇ ಮಗನಾಗಿದ್ದು, ಕುಟುಂಬದ ಆಧಾರ ಸ್ಥಂಭವಾಗಿದ್ದನು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರೋಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಅಂಗನವಾಡಿ ಅಕ್ಕಂದಿರ 3 ತಿಂಗಳ ಸಂಬಳಕ್ಕೂ ಲಾಕ್ಡೌನ್!: ಬೆಂಗಳೂರಿಂದ ಪಾಸ್ ವರ್ಡ್ ತಂದರೆ ಲಾಕ್ ಓಪನ್!

ಖಾಲಿ-ಪೀಲಿ ತಾಂತ್ರಿಕ ನೆಪ ಹೇಳುತ್ತಿರುವ ಅಧಿಕಾರಿಗಳು ತಮ್ಮ ಸೋಮಾರಿತನ, ನಿರ್ಲ್ಯಕ್ಷದ ಕಾರಣದಿಂದ ಮುಂಡರಗಿ ತಾಲೂಕಿನ ಅಂಗನವಾಡಿ ಅಕ್ಕಂದಿರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದ್ದಾರೆ.

ಗದಗ ನಗರಸಭೆ: 25 ನೇ ವಾರ್ಡಿನಲ್ಲಿ ಗೆಲುವಿನತ್ತ ಸಂಚಲನ ಮೂಡಿಸಿದ ವಿನಾಯಕ ಮಾನ್ವಿ ಈ ಬಾರಿ ಅಶೋಕ ಮಂದಾಲಿ ಮಂದಾಗೋ ಸಾಧ್ಯತೆ!

ಉತ್ತರಪ್ರಭ ಗದಗ: ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ–2021,  ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾನಕ್ಕೆ…

ಪುರಸಭೆ ಸದಸ್ಯನಿಗೆ ಕೊರೊನಾ ಪಾಸಿಟಿವ್

ಪಟ್ಟಣದ ಪುರಸಭೆ ಸದಸ್ಯರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ಮಾಸಂಗಿಪುರದ ನಾಗರಿಕರಲ್ಲಿ ಆತಂಕ ಮನೆಮಾಡಿದೆ.

ನರೇಗಲ್, ಹೊಳೆಯಾಲೂರು ಹೋಬಳಿ: ರೈತರಿಂದ ತಾಡಪತ್ರಿಗೆ ಅರ್ಜಿ ಆಹ್ವಾನ

ಕೃಷಿ ಇಲಾಖೆಯಿಂದ ನರೇಗಲ್ ಹಾಗೂ ಹೊಳೆಆಲೂರ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಲಾಟರಿ ಮುಖಾಂತರ ತಾಡಪತ್ರಿಗಳನ್ನು ವಿತರಿಸಲು ಅರ್ಜಿ ಕರೆಯಲಾಗಿದೆ.