ಉತ್ತರಪ್ರಭ ಸುದ್ದಿ

ಗದಗ: ಗದಗ ಬೆಟಗೇರಿ ನಗರಸಭೆ ಚುಣಾವಣೆ  ಹಿನ್ನಲೇ ಬಿಜೆಪಿಯ  ಅಭ್ಯರ್ಥಿಗಳ  ಪಟ್ಟಿಯನ್ನು ಎರಡು ದಿನಗಳ ಹಿಂದೆ ಪ್ರಕಟಿಸಿತ್ತು. ನಾಮ ಪತ್ರ ಸಲ್ಲಿಸಲು ದಿನಾಂಕ: 15.12.2021 ಕೊನೆಯ ದಿನ ವಾಗಿದ್ದು, ಈಗಾಗಲೇ ಕೆಲವು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ,ಇನ್ನೂ ಹಲವು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಲಿದ್ದಾರೆ. ಈ ಮಧ್ಯೆ ಕಾಂಗ್ರೇಸ್  35 ವಾರ್ಡಗಳ ಪೈಕಿ 26 ಅಭ್ಯರ್ಥಿಗಳ  ಪಟ್ಟಿಯನ್ನು ಬಿಡುಗಡೆಗೊಳಿಸಿ ಇನ್ನೂ 9 ವಾರ್ಡ ಅಭ್ಯರ್ಥಿಗಳ  ಪಟ್ಟಿಯನ್ನು ಕಾಂಗ್ರೇಸ್ ಘೋಷಿಸಿರುವುದಿಲ್ಲಾ,  ಈ ಮಧ್ಯೆ ಬಿಜೆಪಿಯ   ಮುಖಂಡ ಮತ್ತು ಗದಗ ವಿಧಾನಸಭಾ ಪರಾಜಿತ ಅಭ್ಯರ್ಥಿ ಅನೀಲ ಮೇಣಸಿನಕಾಯಿ 35ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾದ ಉಷಾ ಮಹೇಶ ದಾಸರ  ಪರವಾಗಿ  ಮನೆ ಮನೆಗೆ  ತೆರಳಿ ಮತಭೀಕ್ಷೆ ಕೇಳುತ್ತಿರುವುದು ವಿಶೇಷವಾಗಿದೆ. ಜೋಳಿಗೆ ಹಿಡಿದುಕೊಂಡು  ದಯವಿಟ್ಟು ಈ ಭಾರಿ ಬಿಜೆಪಿ ಅಭ್ಯರ್ಥಿಗೆ ಮತವನ್ನು ಹಾಕಿ ಅದರೊಂದಿಗೆ ಅವರಿಗೆ ಧನಸಹಾಹ ಮಾಡಿ ಬಹುಮತದಿಂದ ಗೆಲ್ಲಿಸಲು  ಮನವಿ ಮಾಡಿದರು .ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ಸೆಟ್ಲಮೆಂಟ್ ನಿವಾಸಿಗಳ ಸಮಸ್ಯೆ ಸೆಟ್ಲ್ ಆಗೋದು ಯಾವಾಗ?

ನಗರದ ಜನರಿಗೆ ನೆಮ್ಮದಿ ಒದಗಿಸಬೇಕಿದ್ದ ಆಡಳಿತ ವ್ಯವಸ್ಥೆ ಜಿಡ್ಡುಗಟ್ಟಿದರೆ ಜನ ಸಾಮಾನ್ಯರ ಸ್ಥಿತಿ ಹೇಗೆ? ಜನರಿಗೆ ನೆಮ್ಮದಿ ಒದಗಿಸಬೇಕಿದ್ದ ನಗರಸಭೆಯ ನಿರ್ಲಕ್ಷ್ಯದಿಂದ ಪೈಪ್ ಒಡೆದು ಅಪಾರ ನೀರು ಪೋಲಾಗುವ ಜೊತೆಗೆ ಸಾಂಕ್ರಾಮಿಕ ಇಲ್ಲಿನ ಬೆಟಗೇರಿ ಸೆಟ್ಲಮೆಂಟ್ ಭಾಗದ ಜನರಿಗೆ ಕಾಯಿಲೆಯ ಸಂಕಟ ಎದುರಾಗಿದೆ.

ಗಜೇಂದ್ರಗಡ: ರೋಜಗಾರ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

ಸಮೀಪದ ಲಕ್ಕಲಕಟ್ಟಿ ಗ್ರಾಮ ಪಂಚಾಯತಿಯ ಲಕ್ಕಲಕಟ್ಟಿ ತಾಂಡಾಕ್ಕೆ ತಾಂಡಾ ರೋಜಗಾರ ಮಿತ್ರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ: ವಿಧಾನಸೌಧ ಚಲೋ

ಉತ್ತರಪ್ರಭ ಸುದ್ದಿಗದಗ: ರಾಜ್ಯದಲ್ಲಿ ನಡೆಯುತ್ತಿರುವ ಕುರಿಗಾಹಿಗಳ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಹಾಗೂ ಅವರಿಗೆ ಭದ್ರತೆಯನ್ನು ಕಲ್ಪಿಸಬೆಕೇಂದು…

ಬಿಜೆಪಿ ಸರಕಾರ ಬರಲು ಶ್ರಮಿಸಿ: ಮಾಜಿ ಶಾಸಕ‌ ಪ್ರತಾಪಗೌಡ ಕರೆ

ಮಸ್ಕಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ‌‌ ಬರುವುದಕ್ಕೆ ಕಾರ್ಯಕರ್ತರು ಶ್ರಮಿಸಬೇಕೆಂದು‌ ಮಾಜಿ‌‌…