ಸದಾನಂದ ಕಟ್ಟಿಮನಿ

ಗದಗ: ನಗರದ ಜನರಿಗೆ ನೆಮ್ಮದಿ ಒದಗಿಸಬೇಕಿದ್ದ ಆಡಳಿತ ವ್ಯವಸ್ಥೆ ಜಿಡ್ಡುಗಟ್ಟಿದರೆ ಜನ ಸಾಮಾನ್ಯರ ಸ್ಥಿತಿ ಹೇಗೆ? ಜನರಿಗೆ ನೆಮ್ಮದಿ ಒದಗಿಸಬೇಕಿದ್ದ ನಗರಸಭೆಯ ನಿರ್ಲಕ್ಷ್ಯದಿಂದ ಪೈಪ್ ಒಡೆದು ಅಪಾರ ನೀರು ಪೋಲಾಗುವ ಜೊತೆಗೆ ಸಾಂಕ್ರಾಮಿಕ ಇಲ್ಲಿನ ಬೆಟಗೇರಿ ಸೆಟ್ಲಮೆಂಟ್ ಭಾಗದ ಜನರಿಗೆ ಕಾಯಿಲೆಯ ಸಂಕಟ ಎದುರಾಗಿದೆ.

ತಿಂಗಳಿAದ ಪೈಪ್ ಲೈನ್ ಒಡೆದು ನೀರು ರಸ್ತೆಗೆ ಹರಿಯುತ್ತಿರುವುದರಿಂದ ನೀರು ಪೋಲಾಗುವ ಜೊತೆಗೆ ದುರ್ವಾಸನೆ ಶುರುವಾಗಿದೆ. ಇದರಿಂದ ಜನರಿಗೆ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ.

ಬೆಟಗೇರಿ ರೈಲ್ವೆ ಬ್ರಿಡ್ಜ್ ಹಾಕಿ ಗ್ರೌಂಡ್ ಎದುರಿಗಿರುವ ಸೆಟ್ಲಮೆಂಟ್ ರಸ್ತೆಯಲ್ಲಿನ ಪೈಪ್ ಲೈನ್ ಒಡೆದು ಕಳೆದ ಒಂದು ತಿಂಗಳಿAದ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಅಲ್ಲಲ್ಲಿ ಈ ನೀರು ನಿಂತಿರುವುದರಿAದ ಸಾಂಕ್ರಾಮಿಕ ಕಾಯಿಲೆ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ. ಈ ರಸ್ತೆಯಲ್ಲಿ ತಿರುಗಾಡುವ ಜನರು ಮೂಗು ಮುಚ್ಚಿಕೊಂಡೆ ಮುಂದೆ ಹೋಗುವ ಪರಸ್ಥಿತಿ ಎದುರಾಗಿದೆ.

ಸಮಸ್ಯೆಗಳ ಗೂಡು:

ಬೆಟಗೇರಿ ರೈಲ್ವೆ ಬ್ರಿಡ್ಜ್ ಸಮೀಪ ಹಾಕಿ ಗ್ರೌಂಡ್ ಎದುರಿಗೆ ಸೆಟ್ಲಮೆಂಟ್ ರಸ್ತೆಯಲ್ಲಿನ ಸಮಸ್ಯೆ ಜೊತೆಗೆ ನಗರದಲ್ಲಿ ವಿವಿಧ ರಸ್ತೆಗಳಲ್ಲಿ ಇಂತಹ ಸಮಸ್ಯೆಗಳಿವೆ. ನಗರದಲ್ಲಿನ ಇಂತಹ ಸಮಸ್ಯೆಗಳ ನಡುವೆಯೇ ಬದಕುತ್ತಿರುವ ಸಾರ್ವಜನಿಕರ ಜನ ಜೀವನ ಸ್ಥಿತಿ ಮಾತ್ರ ಹೇಳತೀರದು.

ಸಂಬAಧಪಟ್ಟ ಅಧಿಕಾರಿಗಳಿಗೆ ನಗರದ ಸ್ವಚ್ಛತೆಯ ಬಗ್ಗೆ ಗಮನಕ್ಕಿಲ್ಲವೇ? ಎನ್ನುವುದು ಸಾರ್ವಜನಿಕ ವಲಯದ ಪ್ರಶ್ನೆ. ಇದರಿಂದ ಜನರು ಬೆಸತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪೈಪ್‌ಲೈನ್ ಒಡೆದು ಹಲವು ದಿನಗಳಿಂದ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಹಾಗೂ ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ಕಾಯಿಲೆ ಆತಂಕ ಸೃಷ್ಟಿಯಾಗಿದೆ. ಈ ರಸ್ತೆಯಲ್ಲಿ ಮಕ್ಕಳು ವೃದ್ಧರು ಸೇರಿದಂತೆ ಬಹುತೇಕರು ಸಂಚರಿಸುತ್ತಾರೆ. ಇಂತಹ ವಾತಾವರಣದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅಧಿಕಾರಿಗಳೂ ಎಚ್ಚೆತ್ತುಕೊಂಡು ಕೂಡಲೇ ಸಮಸ್ಯೆ ಬಗೆಹರಿಸಬೇಕು.

–        ಸಂಗಮೇಶ ನಾಡಗೌಡ್ರ, ಸ್ಥಳೀಯರು.

ಕಳೆದ ಒಂದು ತಿಂಗಳಿನಿAದ ಪೈಪ್‌ಲೈನ್ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿದ್ದರೂ, ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

ನಗರದಲ್ಲಿ ಇಂತಹ ಹಲವರು ಸಮಸ್ಯೆಗಳು ಇದ್ದರೂ ಕ್ಯಾರೆ ಎನ್ನದೇ ನಮಗೇನು ಸಂಬAಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಹಾಗೂ ರಸ್ತೆಬದಿಯಲ್ಲಿ ನೀರು ನಿಂತು ಕೊಳಚೆಯಂತಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವ ಹೆಚ್ಚಾಗಿದೆ. ಕೂಡಲೇ ಅಧೀಕಾರಿಗಳು ಎಚ್ಚೆತ್ತುಕೊಂಡು ನಗರದಲ್ಲಿರುವ ಇಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದಾಗಬೇಕು.

Leave a Reply

Your email address will not be published. Required fields are marked *

You May Also Like

ನರಗುಂದ ತಾಲೂಕಿನ 383 ಹಣ್ಣು ಬೆಳೆಗಾರರಿಗೆ ಸರಕಾರದಿಂದ ಪರಿಹಾರ

ನರಗುಂದ: (ಕೊಣ್ಣೂರ) ಅತೀವೃಷ್ಟಿ ಮಹಾಪುರದಿಂದ ತತ್ತರಿಸಿದ ರೈತರಿಗೆ ಕೋವೀಡ್ 19 ಮಹಾಮಾರಿಯು ಶಾಪವಾಗಿ ಪರೀಣಮಿಸಿರುವದರಿಂದ ರೈತರ ಜನಜೀವನ ಚಿಂತಾಜನಕವಾಗಿದೆ

ನೂತನ 52 ತಾಲೂಕುಗಳಲ್ಲಿ ಬಿಇಒ ಕಚೇರಿ ಮರೀಚಿಕೆ ? ಆರಂಭದ ಸುಳಿವೇ ಇಲ್ಲ ! ಪ್ರಾರಂಭ ಎಂದು ? ಬಿಇಒ ಕಚೇರಿ, ಸಿಬ್ಬಂದಿ ಮಂಜೂರಾತಿಗೆ ಆಗ್ರಹ

ಆಲಮಟ್ಟಿ : ಹೊಸ ಭರವಸೆಯ ಆಶಾ ಕಿರಣದೊಂದಿಗೆ ನೂತನವಾಗಿ ತೆಲೆಯತ್ತಿದ್ದ ರಾಜ್ಯದ 52 ನವ ತಾಲೂಕುಗಳು…

ಅಪಾಯ ಮಟ್ಟ ಹರಿಯುತ್ತಿರುವ ಭೀಮಾ….ಜನರ ರಕ್ಷಣೆಗೆ ಬಂದ ಸೇನೆ!

ಕಲಬುರಗಿ : ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯ ಜನರ ಬದುಕು ಮೂರಾಬಟ್ಟೆಯಾಗಿದೆ. ಈ ನಿಟ್ಟಿನಲ್ಲಿ ರಕ್ಷಣಾ ಕಾರ್ಯಕ್ಕೆ ಸೇನೆ ನಿಯೋಜನೆ ಮಾಡಲಾಗಿದೆ.

ಪ.ಜಾ-ಪ.ಪಂ ಕುಂದುಕೊರತೆ ಸಭೆ

ನಗರದ ಡಿ.ಸಿ.ಮಿಲ್ ತಳಗೇರಿ ಓಣಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ ಆಯೋಜಿಸಲಾಯಿತು.