ಉತ್ತರಪ್ರಭ ಸುದ್ದಿ
ಗದಗ: ರಾಜ್ಯದಲ್ಲಿ ನಡೆಯುತ್ತಿರುವ ಕುರಿಗಾಹಿಗಳ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಹಾಗೂ ಅವರಿಗೆ ಭದ್ರತೆಯನ್ನು ಕಲ್ಪಿಸಬೆಕೇಂದು ದಿನಾಂಕ: ಮಾರ್ಚ 22ರಂದು ವಿಧಾನಸೌಧ ಚಲೋ ಹೋರಾಟವನ್ನು ಕುರುಬ ಸಮಾಜದ ಸಂಘಟನೆಗಳು ಹಮ್ಮಿಕೊಂಡಿದ್ದಾರೆ.
ಇತ್ತೀಚಿಗೆ ಸಂಚಾರಿ ಕುರಿಗಾಹಿ ಮಹಿಳೆಯಾದ ಲಕ್ಷ್ಮೀ ವಿಠ್ಠಲ ಕಳ್ಳಿಮನಿ ಇವರ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಘಟನೆ ನಡೆದಿದ್ದು ಆರೋಪಿಗಳನ್ನು ಬಂಧಿಸಬೇಕು ಮತ್ತು ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಹಿಡೆಯಲು ದೌರ್ಜನ್ಯ ಕಾಯ್ದೆಯನ್ನು ಜಾರಿಗೆ ತರಬೇಕು. ಕುರಿಗಾಹಿಗಳ ಆತ್ಮ ರಕ್ಷಣೆಗಾಗಿ ಬಂದೂಕಿನ ಪರವಾನಿಗೆ ಹಾಗೂ ಸರಕಾರದಿಂದ ಉಚಿತವಾಗಿ ಬಂದೂಕನ್ನು ನೀಡಬೇಕು. ಕುರಿಗಾಹಿಗಳ ದೂರುಗಳನ್ನು ಆಲಿಸಲು ಪ್ರತಿ ತಿಂಗಳು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುರಿಗಾಹಿಗಳ ಸಭೆ ಮಾಡಬೇಕು. ಕುರಿಗಾಹಿ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಲ್ಲಿ ಪ್ರಾತಿನಿಧ್ಯವನ್ನು ಮತ್ತು ಆಕಸ್ಮಿಕ ದುರ್ಘಟನೆಗಳು ನಡೆದಾಗ ಪರಿಹಾರ ನೀಡಲು ಕುರಿಗಾರ ಹಿತರಕ್ಷಣೆಗಾಗಿ ಶಾಶ್ವತವಾದ ಪರಿಹಾರ ನಿಧಿಯನ್ನು ಸ್ಥಾಪಿಸಬೇಕು. ಸರಕಾರವು ಪಶುಸಂಗೋಪನೆಗಳ ಆಹಾರಕ್ಕಾಗಿ ಮೀಸಲಾಗಿರುವ ಗೋಮಾಳ ಜಾಗವನ್ನು ಸಂರಕ್ಷಣೆ ಹಾಗೂ ಅತೀಕ್ರಮಣ ಮಾಡಿರುವದನ್ನು ತೆರವುಗೊಳಿಸಬೇಕು. ಅನುಗ್ರಹ ಯೋಜನೆಗಳ ಪರಿಹಾರ ನಿಧಿಯ ಮೊತ್ತವನ್ನು 5ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಬೇಕು. ಗುಣಮಟ್ಟದ ಔಷಧಿಗಳನ್ನು ಕಾಲಕಾಲಕ್ಕೆ ಕುರಿಗಳಿಗೆ ಪಿ.ಪಿ.ಆರ್.ಈ.ಟಿ., ನೀಲಿ ನಾಲಿಗೆ ರೋಗದ ಲಸಿಕೆಗಳನ್ನು ಪೂರೈಸಬೇಕು. ಪಶುವೈದ್ಯಕೀಯ ಇಲಾಖೆಯಲ್ಲಿ ಇರುವ ಜಾನುವಾರಗಳ ಸಂಖ್ಯೆಯ ಅನುಗುಣವಾಗಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರವಾಗಿ ನೇಮಕ ಮಾಡವುದು. ಪ್ರತಿ ತಾಲೂಕಿನಲ್ಲಿ ಒಂದರAತೆ ರೋಗ ತಪಾಸಣಾ ಕೇಂದ್ರಗಳನ್ನು ತೆರೆಯುವುದು. ತುರ್ತು ತಪಾಸಣೆಗಾಗಿ ಅಂಬ್ಯೂಲೆನ್ಸಗಳನ್ನು ಹೋಬಳಿಗೆ ನೀಡಬೇಕೆಂದು ಸಿದ್ದಣ ತೇಜಿ ರಾಜ್ಯಸಂಚಾಲಕರು, ಕುರುಬ ಸಮಾಜದ ಸಂಘಟನೆಗಳ ಒಕ್ಕೂಟ, ಬೆಂಗಳೂರು, ಪತ್ರಿಕಾ ಗೋಷ್ಠಿಯ ಮೂಲಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಾನಂದ ಮಾಯಣ್ಣವರ, ಪರಸಪ್ಪ ಗುರಿಕಾರ, ಯಲ್ಲಪ್ಪ ಹೆಗಡೆ, ಚನ್ನಬಸು ಹುಲಜೋಗಿ ಹಾಗೂ ಕುರುಬ ಸಮಾಜದ ಸಂಘಟನೆಯ ಮುಖಂಡರು, ಸದಸ್ಯರುಗಳು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವು

ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರ ಆರೋಪ ಗದಗ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ…

ಗದಗ ಜಿಲ್ಲೆಯಲ್ಲಿ ಕೊರೊನಾಕ್ಕೆ ಯುವಕ ಬಲಿ

ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಓರ್ವ ಯುವಕ ಇಂದು ಬಲಿಯಾಗಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ…

ಚಿಕ್ಕನರಗುಂದ ಗ್ರಾ.ಪಂ ಅಧ್ಯಕ್ಷರಾಗಿ ಲಕ್ಷ್ಮಣ ಕಂಬಳಿ ಅವಿರೋಧ ಆಯ್ಕೆ

ಉತ್ತರಪ್ರಭ ನರಗುಂದ: ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ 3…