ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಟಾಸ್ಕ್ ಒಂದರಲ್ಲಿ ಗ್ಲಾಸ್ ಗೆ ಕೈ ತಗುಲಿದ ಪರಿಣಾ‌ಮ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಬಿಗ್ ಬಾಸ್ ಮನೆಯಲ್ಲೀಗ 10 ಜನರಿದ್ದು, ಈ ಸ್ಪರ್ಧಿಗಳ ನಡುವೆಯೇ ಭಾರೀ ಪೈಪೋಟಿ ನಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.


ಬಿಗ್ ಬಾಸ್ ಮನೆಯಲ್ಲೀಗ ಸದ್ಯ ಎರಡನೇ ಇನ್ನಿಂಗ್ಸ್ ಶುರುವಾಗಿದೆ. ಈಗಾಗಲೇ ಇನ್ನಿಂಗ್ಸ್ 19ನೇ ದಿನ ಕೂಡ ಪೂರ್ಣಗೊಂಡಿದ್ದು, ಪ್ರತಿ ಸೋಮವಾರ ಎಲಿಮಿನೇಷನ್ ಗೆ ನಾಮಿನೇಷನ್ ಕಾರ್ಯ ನಡೆಯುತ್ತದೆ. ಈ ಬಾರಿ ಬಿಗ್ ಬಾಸ್ 8 ಸದಸ್ಯರು ನಾಮಿನೇಟ್ ಆಗಿದ್ದಾರೆ.


ಈ ನಾಮಿನೇಟ್ ನಿಂದ ತಪ್ಪಿಸಿಕೊಳ್ಳಲು ಬಿಗ್ ಬಾಸ್ ಎರಡು ತಂಡಗಳನ್ನು ಮಾಡಿ ನಕ್ಷತ್ರ ಅಂಟಿಸುವ ಕುರಿತು ಟಾಸ್ಕ್ ನೀಡಿದ್ದರು. ಈ ಸಂದರ್ಭದಲ್ಲಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ಮಾಡಿದ್ದರು. ಈ ವೇಳೆ ಈ ಟಾಸ್ಕ್ ನ ಪ್ರಕಾರ ತಂಡದ ತಲಾ ಓರ್ವ ಸದಸ್ಯ ಜಾಕೆಟ್ ಹಾಕಬೇಕು ಎಂದು ಹೇಳಲಾಗಿತ್ತು. ಅವರಿಗೆ ಎದುರಾಳಿ ತಂಡದವರು ನಕ್ಷತ್ರ ಅಂಟಿಸಬೇಕಿತ್ತು. ಈ ಸಂದರ್ಭದಲ್ಲಿ ನಿಂಗ್ ಐತೇ ತಂಡದದಿಂದ ದಿವ್ಯಾ ಜಾಕೇಟ್ ಧರಿಸಿದ್ದರು. ಆಗ ಎದುರಾಳಿ ತಂಡದವರು ದಿವ್ಯಾ ಮೇಲೆ ನಕ್ಷತ್ರ ಅಂಟಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ದಿವ್ಯಾ ಕೈ ಗ್ಲಾಸ್ ಗೆ ತಗುಲಿದ ಪರಿಣಾಮ ದಿವ್ಯಾ ಕೈಗೆ ಗಾಯವಾಗಿದೆ. ಇದರಿಂದ ದಿವ್ಯಾ, ಬಿಕ್ಕಿ ಬಿಕ್ಕಿ ಅತ್ತರು. ನಂತರ ಅವರಿಗೆ ಚಿಕಿತ್ಸೆ ನೀಡಲಾಯಿತು.
ವಿಜಯಪಥ ಹಾಗೂ ನಿಂಗ್ ಐತೆ ಎಂಬ ಎರಡು ತಂಡಗಳನ್ನು ಈ ಸ್ಪರ್ಧೆ ಮಾಡಿದ್ದರು. ವಿಜಯ ಪಥ ತಂಡಕ್ಕೆ ಅರವಿಂದ್ ನಾಯಕರಾಗಿದ್ದರೆ, ನಿಂಗ್ ಐತೆ ತಂಡಕ್ಕೆ ಮಂಜು ನಾಯಕರಾಗಿದ್ದರು.
ವಿಜಯ ಪಥ ತಂಡದಲ್ಲಿ ಶುಭಾ, ವೈಷ್ಣವಿ, ಪ್ರಶಾಂತ್, ಪ್ರಿಯಾಂಕಾ ಇದ್ದರು. ನಿಂಗ್ ಐತೆ ತಂಡದಲ್ಲಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ಶಮಂತ್ ಇದ್ದರು.

Leave a Reply

Your email address will not be published. Required fields are marked *

You May Also Like

ಕರುಳ ಕುಡಿಯ ಜೋಗುಳದಲಿ

ನೋವು! ಯಾತನೆ! ಯಮಯಾತನೆ! ಇಡೀ ದೇಹವನ್ನೇ ಒಳ್ಳಲ್ಲಿ ಹಾಕಿ ಕುಟ್ಟಿದ ಅನುಭವ. ಸಾಕಪ್ಪ ಸಾಕು ಈ ಜೀವನ ಎನಿಸುವಷ್ಟು ವೈರಾಗ್ಯ.ಈ ಬದುಕೇ ಬೇಡ. ತಡೆದುಕೊಳ್ಳಲಾರೆ… ಸಹಿಸಲಾರೆ… ಅನುಭವಿಸಲಾರೆ. ಕಣ್ಣು ಬಿಡಲೂ ತ್ರಾಣವಿಲ್ಲ. ಯಾವುದೋ ಕೈಗಳು ಬಂದು ತಡವುತ್ತಿವೆ. ಹಣೆ ಮುಟ್ಟಿ ನೋಡಿದ ಸ್ಪರ್ಶದ ಅನುಭವ. ಆದರೂ ಕಣ್ಗಳು ಮೆತ್ತಿಕೊಂಡಿವೆ. ನರಳುವುದು, ಮುಲುಗುವುದು, ಒದ್ದಾಡುವುದ ಬಿಟ್ಟರೆ ಏನೂ ಮಾಡಲಾಗದ ಅಸಹಾಯಕತೆ.

ಮೇ.18ರಿಂದ ಸಾರಿಗೆ ಸಂಚಾರ ಆರಂಭ?

ಮೇ.18ರಿಂದ ಸಾರಿಗೆ ಸಂಚಾರ ಆರಂಭ? ಬೆಂಗಳೂರು: ಮೇ.18ರಿಂದ ಸಾರಿಗೆ ಸಂಚಾರ ಸಂಪೂರ್ಣವಾಗಿ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಮೇ.17ಕ್ಕೆ…

ಮದ್ಯಕ್ಕೆ ಕೊಡುವ ಪ್ರೋತ್ಸಾಹ ವಿದ್ಯೆಗೆ ನೀಡಿ- ಗುರುಶಾಂತ ಸ್ವಾಮೀಜಿ

ವರದಿ: ಗುಲಾಬಚಂದ ಜಾಧವ ಆಲಮಟ್ಟಿ : ಬಹಳಷ್ಟು ಯುವಕರ ಮನಸ್ಥಿತಿಯಿಂದು ಕೆಟ್ಟು ಹೋಗುತ್ತಲ್ಲಿದೆ. ದುಷ್ಚಟಗಳ ದಾಸರಾಗಿ…

ಪರಿಸರ ಸ್ನೇಹಿ ಗಣಪತಿ ಪೂಜಿಸುವ ಸಂಸ್ಕೃತಿ ಪರಿಚಯಿಸೋಣ..!’

ಗಣೇಶ ಚತುರ್ಥಿ’ ಬಂತೆಂದರೆ ದೇಶಾದ್ಯಂತ ಎಲ್ಲಿಲ್ಲದ ಸಂಭ್ರಮ. ಮನೆ ಮನಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಬೀದಿ ಬೀದಿಯಲ್ಲಿ ಬಾಲ ಗಣೇಶನಿಂದ ಹಿಡಿದು ಬೃಹತ್ ಗಣೇಶ ಮೂರ್ತಿ ಕೂರಿಸಿ ಬಪ್ಪರೇ ಬಪ್ಪಾ, ಗಣಪತಿ ಬಪ್ಪಾ: ಗಣಪ್ ಗಣಪ್ ಮೋರಯಾ.. ಎಂಬ ಹರ್ಷೋದ್ಘಾರ ಮೊಳಗುತ್ತಿತ್ತು.