ದೆಹಲಿ: ಈ ವರ್ಷ 2021ರ ನೀಟ್ (ಯುಜಿ) ಪರೀಕ್ಷೆಯನ್ನು 12 ಸೆಪ್ಟೆಂಬರ್ ರಂದು ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಇಂದು ಸಂಜೆಯಿಂದಲೇ ಅರ್ಜಿ ಹಾಕಲು ಆಹ್ವಾನಿಸಿದ್ದು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಸಚಿವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಈ ಪರೀಕ್ಷೆಯು ದೇಶದಾದ್ಯಂತ ನಡೆಯಲಿದ್ದು ಕೋವಿಡ್ ಸೋಂಕು ಹರಡುತ್ತಿರುವುದರಿಂದ ಪರೀಕ್ಷೆಯ ಕೇಂದ್ರಗಳನ್ನು ಹೆಚ್ಚಿಸಲಾಗುವುದು ಹಾಗೂ ಈ ಮುಂಚೆ 155 ನಗರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಈಗ 198 ನಗರಗಳಲ್ಲಿ ಪರೀಕ್ಷೆ ನಡೆಸಲಾಗುವುದು ಹಾಗೂ 3862 ಕೇಂದ್ರಗಳನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೋರಿಯಾದಿಂದ ಕೋಲಾರಕ್ಕೂ ಬಂದಿವೆ ಸೋಂಕು ಟೆಸ್ಟ್ ಕಿಟ್ ಗಳು

ಕೊರೋನಾ ಸೋಂಕು ತುರ್ತಾಗಿ ಪತ್ತೆ ಹಚ್ಚಲು ಕೋರಿಯಾದಿಂದ ಕೋಲಾರ ಜಿಲ್ಲೆಯ ಆರೋಗ್ಯ ಇಲಾಖೆಗೆ ರ್ಯಾಪಿಡ್ ಆಂಟಿ ಬಾಡಿ ಟೆಸ್ಟಿಂಗ್ ಕಿಟ್ ಗಳು ಬಂದಿವೆ. ಈ ಮೂಲಕ ಇಪ್ಪತ್ತು ನಿಮಿಷದೊಳಗಾಗಿ ಕೊರೋನಾ ಸೇರಿ ಯಾವುದೇ ಸೋಂಕಿದ್ದರೂ ಪತ್ತೆ ಹಚ್ಚಬಹುದಾಗಿದೆ. ಇದು ದೇಶದಲ್ಲಿ ಮೊದಲ ಪ್ರಯತ್ನ ಎಂದು ಹೇಳಲಾಗುತ್ತಿದೆ.

ವಿಜಯನಗರ ಜಿಲ್ಲೆ: ಇಭ್ಭಾಗವಾಗಲಿದೆ ಮೈಸೂರು ರಾಜ್ಯದ ಗಡಿ …!

ಬಳ್ಳಾರಿ ಜಿಲ್ಲೆಯ ಗರ್ಭಸಂಜಾತ ಶಿಶುವಾಗಿ ಹುಟ್ಟಲು ವಿಜಯನಗರ ಜಿಲ್ಲೆಗೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಇದು ಒಂದೆಡೆ ಸಚಿವ ಆನಂದ ಸಿಂಗ್ ರವರ ಕನಸುಗಳಿಗೆ ರೆಕ್ಕೆ ಬರಿಸಿದ್ದರೆ, ಮತ್ತೊಂದೆಡೆ ರಾಜಕೀಯ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದ ಆತ್ಮಗಳ ನಿದ್ದೆಗೆಡಿಸಿದೆ. ಬಳ್ಳಾರಿ ಜಿಲ್ಲೆಯ ವಿಭಜನೆಗೆ ಸಾಂಸ್ಕೃತಿಕ ಚಿಂತಕರ ಮನಸ್ಸು ಕೂಡ ಒಪ್ಪುತ್ತಿಲ್ಲವಾದರೂ, ಜಿಲ್ಲಾ ಕೇಂದ್ರ ‘ದೂರ’ ಅನ್ನುವ ಚಡಪಡಿಕೆ ಅವರ ಧ್ವನಿಯನ್ನು ಹತ್ತಿಕ್ಕಿರುವುದು ಸುಳ್ಳೇನಲ್ಲ…!

ದೇಶದ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆಯಂತೆ!

ಮಹಾಮಾರಿ ಕೊರೊನಾದಿಂದಾಗಿ ಜಿಡಿಪಿ ಕುಸಿತ ಕಂಡಿದ್ದು, ಈ ವರ್ಷದಲ್ಲಿ ಜಿಡಿಪಿ ಶೇ.0.2ಕ್ಕೆ ಕುಸಿಯಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಅಂದಾಜು ಮಾಡಿದೆ.

ಜೆಇಇ, ನೀಟ್ ಪರೀಕ್ಷೆ ವೇಳಾಪಟ್ಟಿ

ಜೆಇಇ ಹಾಗೂ ನೀಟ್ ಪರೀಕ್ಷೆಗಾಗಿ ಎದುರು ನೋಡುತ್ತಿದ್ದ ವಿದ್ಯಾರ್ಥಿಗಳಿಗೆ ಹೊಸ ವೇಳಾ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.