ಗದಗ: ಪೊಲೀಸ್ ಇಲಾಖೆ ವತಿಯಿಂದ ಕಳೆದ ವರ್ಷ 28.05.2021 ರಂದು  ವಿಧಿವಿಜ್ಞಾನ  ಪ್ರಯೋಗಾಲಯ ವಿಭಾಗದಲ್ಲಿ  84 ಹುದ್ದೆಗೆ ಅಧಿಸೂಚನೆಯನ್ನು ಹೊರಡಿಸಿತ್ತು. ದಿನಾಂಕ: 04.12.2021ರಂದು ಪರೀಕ್ಷೆ ಯನ್ನು ನಡೆಸಿತ್ತು.  ಜನರಲ್ ಪೇಪರ  ಮತ್ತು   ವಿಷಯಾಧಿರಿತ ಪೇಪರ್ ಪರೀಕ್ಷೆಯನ್ನು ನಡೆಸಲಾಗಿತ್ತು. ದಿನಾಂಕ:20.01.2022 ರಂದು ಪರೀಕ್ಷಾ ಫಲಿತಾಂಶವನ್ನು ಪೋಲಿಸ್ ಇಲಾಖೆಯಿಂದ‌  ಪ್ರಕಟಿಸಿದೆ.

 ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿಯ ನಾಗನಗೌಡ ಗೌಡರ ಟಾಕ್ಷಿಕಾಲಾಜಿ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದು  ಸೈಂಟಿಫಿಕ್‌ ಆಫೀಸರ್ ಹುದ್ದೆಗೆ ಆಯ್ಕೆಯಾಗುವ ಮೂಲಕ, ಗದಗ  ಜಿಲ್ಲೆಯ ಕೀರ್ತಿಯನ್ನು  ಹೆಚ್ಚಿಸಿದ್ದಾನೆ. ನಾಗನಗೌಡ ಗೌಡರ ಈ  ಹುದ್ದೆಗೆ ಆಯ್ಕೆಯಾಗುವ ಮೂಲಕ ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ. ಅವರದು ತುಂಬಾ ಕಡು ಬಡತನದ ಕುಟುಂಬ. ಮುಶಿಗೇರಿಯ ಗ್ರಾಮದ ಹಳ್ಳಿ ಪ್ರತಿಭೆ ಇಂತಹ ಹುದ್ದೆಗೆ ಆಯ್ಕೆಯಾಗುವ  ಮೂಲಕ  ಊರಿನ ಜನರ ಖುಷಿ ದ್ವಿಗುಣ ಆಗಿದ್ದಂತು ನಿಜ .

ನನ್ನ ಮಗಗ ಸರ್ಕಾರಿ ನೌಕರಿ ಸಿಕ್ಕದ್ದು ಬಹಳ ಸಂತೋಷ ಆಗೈತ್ರಿ,  ನಾನು ಅವರ ಇವರ ಹೊಲದಾಗ ಕೂಲಿ ನಾಲಿ ಮಾಡಿ  ಓದಸಿನರ್ರಿ , ಇವತು ನನ್ನ ಜೀವನ ಸಾರ್ಥಕ ಆಗೈತ ನೋಡ್ರಿ . ನನ್ನ ಮಗ ಬಡ ಬಗ್ಗರಿಗೆ  ಸಹಾಯ ಮಾಡಲಿ  ಇನ್ನು ಹೆಚ್ಚ ಹೆಚ್ಚ ಬೆಳಿಲಿ

– ಅಭ್ಯರ್ಥಿಯ ತಾಯಿ ನೀಲವ್ವ

ಕುಟುಂಬದ ಹಿನ್ನೆಲೆ: ನಾಗನಗೌಡ ಇವರದು ಕೃಷಿಯ ಮೇಲೆ ಅವಲಂಬಿತ  ಕುಟುಂಬ, ಇವರ ತಂದೆ  ತಾಯಿಗಳಿಗೆ   ಅಕ್ಷರದ ಪರಿವೇ ಇದ್ದಿಲ್ಲ. ತಂದೆಯವರಾದ ಹನುಮಗೌಡ  ಇವರು ನಾಗನಗೌಡ  6ನೆ ತರಗತಿಯಲ್ಲಿದ್ದಾಗ   ತೀರಿಕೊಂಡಾಗ ಅವರ ತಾಯಿಯವರಾದ ನೀಲವ್ವಗೆ  ದಿಕ್ಕೆ ತೋಚದಾಗಿತ್ತು,  ಏಕೆಂದರೆ ತುಂಬು ಕುಟುಂಬ ನಿಭಾಯಿಸೋದೋ ಹೇಗೆ ಎನ್ನುವ ಚಿಂತಿ ಮತ್ತು  ಮುಂದೇ ಜೀವನ ಹೇಗೆ ?  ಅದರಲ್ಲೂ  5 ಜನ ಮಕ್ಕಳನ್ನು ಸಾಕುವ  ಜವಾಬ್ದಾರಿ  ಅವರ ಮೇಲೆ ಬಿತ್ತು. ನೀಲವ್ವ ಎದೆಗುಂದದೆ  ಕೂಲಿ ನಾಲಿ ಮಾಡಿ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ನಿಭಾಯಿಸುತ್ತಾರೆ.  ಕಡುಬಡತನದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಕಷ್ಟದ ಕೆಲಸ, ಅದನ್ನು  ಅವರ ತಾಯಿ ಸಮರ್ಥವಾಗಿ ನಿಭಾಯಿಸಿ ಇವತ್ತು ನಾಗನಗೌಡ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದು  ಹುದ್ದೆ ಪಡೆಯಲು  ಪ್ರೇರಣೆಯಾಗಿದ್ದಾರೆ.

ನಮ್ಮ  ಊರಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನಾಗನಗೌಡ ಗೌಡರ ಟಾಕ್ಷಿಕಾಲಾಜಿ ವಿಭಾಗದಲ್ಲಿ  ಸೈಂಟಿಫಿಕ್‌ ಆಫಿಸರ್ ಹುದ್ದೆಗೆ ರಾಜ್ಯಕ್ಕೆ 2ನೇ ರ‍್ಯಾಂಕ ಪಡೆದು  ಆಯ್ಕೆಯಾದದ್ದು ಬಹಳ ಸಂತೋ ವಾಗಿದೆ . ಸಂಶೋಧನೆಯಲ್ಲಿ  ತೊಡಗಿಕೊಂಡಿರುವ ನಾಗನಗೌಡ  ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ  ಮುಶಿಗೇರಿ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ. ಅವರ ಆಯ್ಕೆ ಯುವಕರಿಗೆ ಸ್ಪೂರ್ತಿ

–  ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ , ಕೆಎಎಸ್ (ಸಹಾಯಕ ಆಯುಕ್ತರು)

ವಿದ್ಯಾಭ್ಯಾಸ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮ ಊರಿನಲ್ಲಿ ಅಂದರೆ ಮೂಶಿಗೇರಿಯಲ್ಲಿ ಮುಗಿಸಿದ ನಂತರ,   ಗದಗನ ಕೆವಿಎಸ್ಆರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾದಲ್ಲಿ ಉತ್ತೀರ್ಣರಾದ ಮೇಲೆ   ಜೆ ಟಿ ಕಾಲೇಜಿನಲ್ಲಿ ಬಿ ಎಸ್ ಸ್ಸಿ ( ಪಿಸಿಎಮ್) ಪದವಿಯನ್ನು ಪಡೆದು. ಸ್ನಾತಕೋತ್ತರ ಪದವಿಯನ್ನು  ರಾಸಾಯನಶಾಸ್ತ್ರ ವಿಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗ ದಾಂಡೇಲಿಯಲ್ಲಿ ಮುಗಿಸಿದರು. ನೆಟ್ ಪರೀಕ್ಷೆಯನ್ನು  ತೇರ್ಗಡೆ ಹೊಂದಿ ಫೆಲೋಶಿಪ್  ಪಡೆದು  ಕರ್ನಾಟಕ ವಿಶ್ವವಿದ್ಯಾಲಯದ  ರಾಸಾಯನಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿಯನ್ನು ಡಾ.ರವೀಂದ್ರ ಬಿ ಚೌಗಲೆ   ಅವರ ಮಾರ್ಗದರ್ಶನ ದಲ್ಲಿ  ನಾಲ್ಕು ವರ್ಷಗಳಿಂದ  ಸಂಶೋಧನೆ ಮಾಡುತ್ತಿದ್ದಾರೆ.

ನನ್ನ ತಾಯಿ ನನಗ ಬಹಳ ಕಷ್ಟ ಪಟ್ಟ ಒದಿಸಿದಕ್ಕ ಇವತ್ತು  ಈ ಹುದ್ದೆಗೆ ಆಯ್ಕೆಯಾದೆ , ಇಲ್ಲ ಅಂದರ ನಾನು  ಬೇರೆಯವರ ಹೊಲದಲ್ಲಿ ದುಡಿಬೇಕಾಗಿತ್ತು ,  ಅವರ ಶ್ರಮ ನನಗ ಸ್ಪೂರ್ತಿ ಅದರ ಜೋತೆಗೆ ಕಾಲಕಾಲಕ್ಕೆ ನನಗೆ ಸೂಕ್ತ ಮಾರ್ಗದರ್ಶನವನ್ನು ಮಾಡಿದ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ , ಕೆಎಎಸ್ ( ಸಹಾಯಕ ಆಯುಕ್ತರು )ಮತ್ತು ಸ್ನೇಹಿತ  ಪಿಎಸ್ಐ ಅರವಿಂದ ಅಂಗಡಿ , ಸೈನಿಕರಾದ ಹನಮಂತಪ್ಪ  ತೆವರಣ್ಣನವರ, ಶಿಕ್ಷಕರಾದ ಶಿವಾನಂದ ಕುಂಕದ ನನ್ನ ಕುಟುಂಬ ವರ್ಗ ಮತ್ತು ನನ್ನ ಊರಿನ ಎಲ್ಲ ಜನರು ಈ ಹುದ್ದೆಗೆ  ಆಯ್ಕೆಯಾಗಲು ಸಹಕರಿಸಿದ್ದಾರೆ  ಈ  ಮೂಲಕ ಎಲ್ಲರಿಗೂ  ಧನ್ಯವಾದಗಳನ್ನು ತಿಳಿಸುತ್ತೇನೆ

– ನಾಗನಗೌಡ  ಹುದ್ದೆಗೆ ಆಯ್ಕೆ ಯಾದ ಅಭ್ಯರ್ಥಿ

ನಮ್ಮ  ಹಳ್ಳಿಯ ಕನ್ನಡ  ಶಾಲ್ಯಾಗ ಕಲತ ನಾಗನಗೌಡ ಗೌಡರ  ದೊಡ್ಡ ಹುದ್ದೆಗೆ ಆಯ್ಕೆಯಾದದ್ದು ನನಗ  ಬಹಳ ಖುಷಿ  ತಂದಿದೆ. ಮುಶಿಗೇರಿ ಹಳ್ಳಿಯಿಂದ  ಪೋಲೀಸ್ ಇಲಾಖೆಯ  ಟಾಕ್ಷಿಕಾಲಾಜಿ ವಿಭಾಗದಲ್ಲಿ  ರಾಜ್ಯಕ್ಕೆ 2ನೇ ರ‍್ಯಾಂಕ್ಪಡೆದು ಜನರಲ್ ಮೆರಿಟ್ ನಲ್ಲಿ ಆಯ್ಕೆಯಾದ ದ್ದು ನಮಗೆಲ್ಲ ಹೆಮ್ಮೆಯ ಸಂಗತಿ.

–  ರಾಜು ಮಾಲಗಿತ್ತಿ , ಅಧ್ಯಕ್ಷರು ತಾಲೂಕ  ರಾಜೀವಗಾಂಧಿ ಪಂಚಾಯತ್ ರಾಜ್ಯ ಸಂಘಟನೆ ಮತ್ತು  ಗ್ರಾಂ. ಪಂ ಸದಸ್ಯರು ಮುಶಿಗೇರಿ.

ನಾಗನಗೌಡ ಮೊದಲಿಂದಲು ಶ್ಯಾನ್ಯಾ ಹುಡುಗ, ಅವರ ಅವ್ವ ಕಷ್ಟ ಪಟ್ಟ ಒದಿಸ್ಯಾಳರಿ , ಸಣ್ಣ ಹುಡುಗ ಇದ್ದಾಗ ಅವರ ಅಪ್ಪ ತೀರಿಕೊಂಡರು ಅವರ ಅವ್ವ ಕೂಲಿ ಮಾಡಿ ಓದಿಸಿ ಮಗನನ್ನ ನೌಕರಿ ತಗೋಳ್ಳುವಹಾಗ ಮಾಡಿದಳು . ನಮ್ಮ ಹುಡುಗ ಚಲೋ ಹುದ್ದೆ ಪಡೆದದ್ದು ನನಗ ಅಷ್ಟ ಅಲ್ಲ ಇಡಿ ಊರ್ ಖುಸಿ ಆಗೈತಿ ನೋಡ್ರಿ  

-ಶಂಕ್ರಪ್ಪ ನಾಯ್ಕರ ಮಾಜಿ ಗ್ರಾಂ ಪಂಚಾಯತ ಅಧ್ಯಕ್ಷರು ಮುಶಿಗೇರಿ

ನಾಗನಗೌಡ ಉನ್ನತ ಹುದ್ದೆಗೆ  ಆಯ್ಕೆಯಾಗುವ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ವಿಧ್ಯಾಭ್ಯಾಸ ಮಾಡಿ ಸಂಶೋಧನೆಯಲ್ಲಿ ತೊಡಗಿಕೊಂಡು ಟಾಕ್ಷಿಕಾಲಾಜಿ ವಿಭಾಗದಲ್ಲಿ  ರಾಜ್ಯಕ್ಕೆ 2ನೇ ರ‍್ಯಾಂಕ್ಪಡೆದು ಸೈಂಟಿಫಿಕ್‌ ಆಪೀಸರ್ ಹುದ್ದೆಗೆ ಆಯ್ಕೆಯಾಗಿದ್ದು. ಸಂಶೋಧನೆಯಲ್ಲಿ ತೊಡಗಿಕೊಂಡ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ  ಸ್ಪೂರ್ತಿ,  ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಹುದ್ದೆಗಳನ್ನು  ಪಡೆದು ನಾಡಿನ ಕೀರ್ತಿಯನ್ನು ಹೆಚ್ಚಿಸಲಿ.

Leave a Reply

Your email address will not be published.

You May Also Like

ಯತ್ನಾಳ್ ರಾಜಿನಾಮೆಗೆ ಒತ್ತಾಯಿಸಿ ಕರವೇ ಪ್ರತಿಭಟನೆ: ಭೂತ ದಹನಕ್ಕೆ ಪೊಲೀಸರ ಅಡ್ಡಿ, ಪೊಲೀಸ್ ಹಾಗೂ ಪ್ರತಿಭಟನಾಕಾರರ ಮದ್ಯೆ ವಾಗ್ವಾದ

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡಪರ ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಚಿವ ಸುಧಾಕರ್ ಪತ್ನಿ, ಪುತ್ರಿಗೂ ಕೊರೊನಾ ಪಾಸಿಟಿವ್..!

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪತ್ನಿ ಹಾಗೂ ಪುತ್ರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ…

ಬಿಎಂಟಿಸಿ ಪಾಸ್ ದರ ಇಳಿಕೆ: ಇನ್ಮುಂದೆ ಟಿಕೇಟ್ ಬದಲಾಗಿ ಪಾಸ್, ಯಾವುದಕ್ಕೆ ಎಷ್ಟು?

ಕೊನೆಗೂ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಬಿಎಂಟಿಸಿ ಪಾಸ್ ದರವನ್ನು ಇಳಿಕೆಗೆ ಮುಂದಾಗಿದೆ. ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದೆ. ಹೀಗಾಗಿ ನಿತ್ಯ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಗಳನ್ನೆ ನೆಚ್ಚಿಕೊಂಡಿದ್ದ ಲಕ್ಷಾಂತರ ಜನರಿಗೆ ಇಂದು ಬಿಎಂಟಿಸಿ ಸಿಹಿ ಸುದ್ದಿ ನಿಡಿದೆ.