ಮಾನವ ಸಂಘ ಜೀವಿ ಸಮಾಜದಲ್ಲಿದ್ದುಕೊಂಡು ಹೊಂದಿಕೊAಡು ಜೀವನ ಸಾಗಿಸುತ್ತಿದ್ದಾನೆ. ಈ ಜೀವನ ಸಾಗಿಸುವುದಕ್ಕಾಗಿ ದಿನಂಪ್ರತಿ ದೇಹ ಮತ್ತು ಬುದ್ಧಿಯನ್ನು ದಂಡಿಸಿ ದುಡಿಯುತ್ತಲೇ ಇದ್ದಾನೆ. ಈ ದಣಿದ ದೇಹ ಮತ್ತು ಬುದ್ಧಿಗೆ ವಿಶ್ರಾಂತಿ ನೀಡಲು ಅವನು ಮೊರೆ ಹೋಗುವುದು ಮನರಂಜನೆಯನ್ನು.
ಈ ಮನರಂಜನೆಗಳಲ್ಲಿ ಸಂಗೀತವು ಒಂದು. ಸಂಗೀತವು ಪ್ರತಿ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವೆAದರೆ ತಪ್ಪಾಗಲಾರದು. ಜನನದಿಂದ ಮರಣದವರೆಗು ಸಂಗೀತ ಮಾನವನೊಂದಿಗೆ ಅವಿನಾಭಾವ ಸಂಬAಧ ಹೊಂದಿದೆ. ಮಗು ಗರ್ಭದಲ್ಲಿರುವಾಗಲೇ ಅದು ಸಂಗೀತದೊAದಿಗೆ ಸಂಬAಧ ಹೊಂದುತ್ತದೆ. ಮುಂದೆ ಅದು ಮಣ್ಣಲ್ಲಿ ಮಣ್ಣಾಗುವವರೆಗು ಸಾಗುತ್ತದೆ.
ಸೀಮಂತ, ನಾಮಕಣ, ಉಪನಯನ, ಮದುವೆ, ಜಾತ್ರೆ, ಹಬ್ಬ ಹರಿದಿನಗಳು, ಸಾವು ಹೀಗೆ ಮನುಷ್ಯನ ಜೀವನದಲ್ಲಿ ನಡೆಯುವ ಅತಿ ಮುಖ್ಯ ಕಾರ್ಯಕ್ರಮಗಳಲ್ಲಿ ಸಂಗೀತ ಇದ್ದೆ ಇರುತ್ತದೆ. ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿರುವ ಮಾನವನಿಗೆ ಕೆಲಸದಿಂದ ಸಿಗುವ ತೃಪ್ತಿಗಿಂತ ಒತ್ತಡವೇ ಹೆಚ್ಚು. ಹೀಗೆ ಎಷ್ಟೇ ಒತ್ತಡವಿದ್ದರು ಒಮ್ಮೆ ತಮಗಿಷ್ಟವಾದ ಸಂಗೀತವನ್ನು ಆಲಿಸಿದಾಗ ಆ ವ್ಯಕ್ತಿಗೆ ಹೊಸ ಚೈತನ್ಯ ಮೂಡುತ್ತದೆ. ಕೆಲಸದ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ. ಇದರಿಂದ ಆರೋಗ್ಯವು ಸಹ ಉತ್ತಮವಾಗುತ್ತದೆ.


ಮಾನವನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವು ಮುಖ್ಯ. ಹೀಗಾಗಿಯೇ ಮಾನಸಿಕ ಆರೋಗ್ಯ ಸುಧಾರಿಸಲು ಸಂಗೀತ ಚಿಕಿತ್ಸೆಯನ್ನು ನೀಡುತ್ತಾರೆ. ಇದರಿಂದ ಆತಂಕ, ಖಿನ್ನತೆ, ನಿದ್ರಾಹೀನತೆ, ಒತ್ತಡವು ಕಡಿಮೆಯಾಗುತ್ತದೆ. ಬೌದ್ಧಿಕ ಮಟ್ಟ, ಸಂತೋಷ, ಆತ್ಮತೃಪ್ತಿ ಹೆಚ್ಚಾಗುತ್ತದೆ.
ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಸಂಗೀತವು ವ್ಯಕ್ತಿಯ ಜೀವನಕ್ಕೆ ಬಹುಮುಖ್ಯವಾಗಿದೆ. ಸಂಗೀತವನ್ನು ಕೇವಲ ಮನರಂಜನೆಗೆ ಬಳಸದೆ, ಅದರಲ್ಲಿರುವ ಚಿಕಿತ್ಸಕ ಗುಣಗಳನ್ನು ಅರಿತುಕೊಂಡು ಸಂಗೀತ ಆಲಿಸಿದರೇ ಹೆಚ್ಚು ಪರಿಣಾಮಕಾರಿಯಾಗುತ್ತದೆ.

  • ಶ್ರೇಯಾ ಜೋರಾಪೂರ, ಸಂಗೀತ ವಿಭಾಗ
    ಕರಾಅವಿವಿ, ವಿಜಯಪುರ
Leave a Reply

Your email address will not be published. Required fields are marked *

You May Also Like

ವೈದ್ಯಕೀಯ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ರಾಜ್ಯದಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ..!

ಉತ್ತರಪ್ರಭ ಸುದ್ದಿ ಕೊಪ್ಪಳ: ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ವರ್ಷ ಪಠ್ಯಕ್ರಮಗಳು ನಡೆಯಬೇಕಿತ್ತು. ಆದರೆ…

ಬಿಟ್ ಕಾಯಿನ್ ದಂಧೆಯ ಕೈವಾಡ: ಒಬಾಮಾ, ಗೇಟ್ಸ್ ಟ್ವೀಟರ್ ಅಕೌಂಟ್ ಹ್ಯಾಕ್ಡ್!

ಬಿಟ್ ಕಾಯಿನ್ ಹಗರಣವೊಂದನ್ನು ಪ್ರಮೋಟ್ ಮಾಡಲು ಅಮೆರಿಕದ ಖ್ಯಾತನಾಮರ ಟ್ವೀಟರ್ ಅಕೌಂಟ್ ಗಳನ್ನು ಹ್ಯಾಕ್ ಮಾಡಲಾಗಿದೆ. ಟ್ವೀಟರ್ ಕಂಪನಿ ಈಗ ಆ ಅಕೌಂಟ್ಸ್ ಸ್ಥಗಿತಗೊಳಿಸಿದೆ.

ಮತ್ತೆ ಪ್ರವಾಹ.. ಉತ್ತರ ಕರ್ನಾಟಕಕ್ಕೆ ಮತ್ತೆ ಸಂಕಷ್ಟ

ಹಳೆ ಗಾಯ ಇನ್ನೂ ಮಾಸಿಲ್ಲ. ಈಗ ಮತ್ತೆ ನಾಡಿನ ಜನರಿಗೆ ಜಲಾಘಾತ ಒಕ್ಕರಿಸಿದೆ. ಜಲಸ್ಫೋಟಕ್ಕೆ ಉತ್ತರ ಕರ್ನಾಟಕದ ಹಲವು ಗ್ರಾಮಗಳ ಸಾವಿರಾರೂ ಎಕರೆ ಬೆಳೆ ಜೊತೆಗೆ ಅವರ ಬದುಕು ಮತ್ತೆ ನೀರು ಪಾಲಾಗಿದೆ. ರಕ್ಕಸ ಪ್ರವಾಹಕ್ಕೆ ಎಲ್ಲವೂ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಜನರ ಕಥೆ ಕೇಳಿದಾಗ ಕರಳು ಕಿತ್ತು ಬರುತ್ತೆ. ಮನೆಯ ಬಾಗಿಲಿಗೆ ಮತ್ತೆ ನದಿಗಳು ಭೇಟಿ ನೀಡಿವೆ. ಬದುಕನ್ನೇ ನಲುಗಿಸಿಬಿಟ್ಟಿವೆ. ರಸ್ತೆ, ಹೊಲ ಗದ್ದೆ, ಮನೆ ಮಠಗಳು ನೀರು ಪಾಲಾಗುತ್ತಿವೆ.

ಕೊರೋನಾ ಸೋಂಕಿತ ಮಹಿಳೆ ಸಾವು

ಕೊರೋನಾ ಸೋಂಕಿತ ಮಹಿಳೆ ಸಾವುವಿಜಯಪುರ : ಕೊರೊನಾ ಪೀಡಿತ ಮಹಿಳೆ ಸಾವನ್ನಪ್ಪಿದ ಘಟನೆ ಇಜಯಪುರ ಜಿಲ್ಲೆಯಲ್ಲಿ…