(ಮಾ.26 ನಡೆಯುವ ಸಿರಿಧಾನ್ಯಗಳ ಬೇಕರಿ ಪದಾರ್ಥ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಿಮಿತ್ತ ಲೇಖನ)

ಹಾದಿಯ ಹೊಲ ನೋಡ, ಸಿರಿಧಾನ್ಯಗಳ ಬೆಳೆ ನೋಡ,
ಅಣ್ಣ ತಮ್ಮ, ಅಕ್ಕತಂಗ್ಯಾರ ನಗೆ ನೋಡ || ಹಡದವ್ವ ||
ಆರೋಗ್ಯ, ಐಶ್ವರ್ಯ ನೋಡ ಮನೆಯೊಳಗ |

ಇಂಥ ಜಾನಪದ ಗೀತೆಗಳನ್ನು ನಾವು ಅನೇಕ ಸಂದರ್ಭಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೇಳುತ್ತೇವೆ. ಈ ಗೀತೆಯನ್ನು ಹಿಂದಿನ ಹಿರಿಯರು ಮಾತ್ರ ಅರ್ಥೈಸಿಕೊಳ್ಳುವರು. ಇಂದಿನ ಜನಾಂಗ ಗೀತೆಗಳ ಶಬ್ದಾರ್ಥ ಮಾತ್ರ ತಿಳಿಯುವರು. ಪ್ರಾಯೋಗಿಕತೆಯ ಅರಿವು ಅವರಿಗಾಗದು, ಕಾರಣ ಆಧುನಿಕತೆಯ ಭರಾಟೆಯಲ್ಲಿ ಆಹಾರ ಸೇವನೆ ಸಂಸ್ಕೃತಿಯನ್ನು ಮರೆತಿz್ದÁರೆ. ಇದರಿಂದ ವಯೋವೃದ್ಧ್ರಾದಿಯಾಗಿ ನಾವಿಂದು ವಿವಿಧ ನೋವು, ದುಃಖ, ಕಾಯಿಲೆಗಳಿಂದ ಬಳಲುತ್ತಿz್ದೆÃವೆ. ಯುವಕರಲ್ಲಿ ಅಶಕ್ತತೆ, ನಿರಾಶೆ ಹೆಚ್ಚುತ್ತಲಿದೆ.

ಪ್ರಸ್ತುತ ದಿನಮಾನದಲ್ಲಂತೂ ಹೆಚ್ಚಿನಾಂಶ ನಾವೆಲ್ಲ ಬೇಕರಿ ಫುಡ್‌ಗಳಿಗೆ ಮಾರು ಹೋಗಿ ಕುಂಠಿತ ದೇಹ ಬೆಳವಣಿಗೆ, ಅಶಕ್ತತೆ, ದುರ್ನಡತೆ, ದುಶ್ಚಟಗಳಿಗೆ ಬಲಿಯಾಗಿ ದೇಶದ ಪ್ರಗತಿ ಕಾರ್ಯದಲ್ಲಿ ಸಹಕಾರ ದೊರೆಯದಾಗಿದೆ. ಸಮಾಜದಲ್ಲಿ ಅಸಹನೀಯ ಕೃತ್ಯಗಳು ಜರುಗುತ್ತಲಿವೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸಿರಿಧಾನ್ಯಗಳ ಬಳಕೆ ಸುಲಭೋಪಾಯವಾಗಿದೆ ಎಂಬುದು ಸಿರಿಧಾನ್ಯಗಳ ಫಲಾನುಭಾವಿಗಳ ಅಭಿಮತವಾಗಿದೆ. ಸಿರಿಧಾನ್ಯಗಳೆಂದರೆ ಸಜ್ಜೆ, ನವಣೆ, ರಾಗಿ, ಸಾವೆ, ಅರ್ಕ, ಬರಗ, ಊದಲು, ಕರ‍್ಲೆಗಳು ಪ್ರಮುಖವಾಗಿವೆ. ನಮ್ಮ ಹಿರಿಯರು ತಮ್ಮದೇ ಭಾಷೆಯಲ್ಲಿ ರಾಗಿ ತಿನ್ನೋರಿಗೆ ರೋಗವೇ ಇಲ್ಲ. ಸಜ್ಜೆ ತಿಂದೋರು ವಜ್ಜಾ ಹೊರುವರು ನವಣೆ ಉಣಿಸಿ ಬವಣೆ ಬಿಡಿಸಿ'' ಎಂಬಿತ್ಯಾದಿ ನಾಣ್ಣುಡಿ ರೂಪದಲ್ಲಿ ಸಿರಿಧಾನ್ಯಗಳ ಮಹತ್ವ ತಿಳಿಸಿರುವರು.

ಸಾಂಪ್ರದಾಯಕವಾಗಿ ಸಿರಿಧಾನ್ಯಗಳ ಬಳಕೆ ಮಾಡುವುದನ್ನು ನಮ್ಮ ಪೂರ್ವಜರು ಮತ್ತು ಆಯುರ್ವೇದ ವೈದ್ಯರು ಹೊಟ್ಟೆ ನೋವಿಗೆ ಸಪ್ಪನೆಯ ನೆವಣೆ ಅನ್ನವನ್ನು ಕೊಡಬೇಕು. ಊಟಕ್ಕೆ ನವಣೆ ಉಪಯೋಗಿಸಿದರೆ ಮತ್ತು ಬೊಜ್ಜು ಬರುವುದಿಲ್ಲ . ಶಸ್ತç ಚಿಕಿತ್ಸೆ ಪಡೆದವರು ಸಾವಕ್ಕಿ ಅನ್ನ ಉಂಡರೆ ನಂಜು ಆಗುವುದಿಲ್ಲ. ಮಹಿಳೆಯರು ಗರ್ಭಪಾತವಾದಾಗ ಸಾವಕ್ಕಿ ಅನ್ನ, ಹಾಲು ಉಣಬೇಕು. ಕುರ ಆದಾಗ ರಾಗಿಯನ್ನು ಅರೆದು ಹರಳೆಣ್ಣೆಯೊಂದಿಗೆ ರಾತ್ರಿ ಪಟ್ಟಿ ಹಾಕಿದರೆ ಬೆಳಗಿನ ಹೊತ್ತಿಗೆ ಕುರ ಒಡೆಯುತ್ತದೆ. ರಾಗಿ ಹಿಟ್ಟಿನ ಕಾಡಿಗೆ ಕಣ್ಣಿಗೆ ತಂಪನ್ನು ಕೊಡುತ್ತದೆ ಎಂದು ಸಿರಿಧಾನ್ಯಗಳಲ್ಲಿರುವ ಆಯುರ್ವೇದ ಔಷಧೀಯ ಗುಣಗಳನ್ನು ತಿಳಿಸಿದ್ದಾರೆ.

ವೈವಿಧ್ಯಮಯ ಭೌಗೋಳಿಕ ವಾತಾವರಣದಲ್ಲಿ ಬೆಳೆಯುವ ಸಿರಿ ಧಾನ್ಯಗಳು ನಮ್ಮ ದೇಶದ ಪಶ್ಚಿಮ ಘಟ್ಟಗಳ ಕಣಿವೆ, ಬಯಲು ಸೀಮೆಗಳಲ್ಲಿ ಬೆಳೆಯುತ್ತವೆ. ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ನವಣೆ, ಬರಗ, ರಾಗಿ, ಸಜ್ಜೆಗಳು ಬೆಳೆಯುತ್ತವೆ. ನಿತ್ಯ ಬದುಕಿನಲ್ಲಿ ನಾವು ದೇವರಿಗೆ ಅಭಿಷೇಕ ಸಲ್ಲಿಸುವಾಗ್ಗೆ, ವಿಶೇಷ ಭೋಜನ ಮಾಡಿದಾಗ್ಗೆಪಂಚಾಮೃತ”, ಪಂಚ ಪಕ್ವಾನ್,ಪಂಚ ಕಜ್ಜಾಯ” ಎಂಬಿತ್ಯಾದಿ ಪದಗಳನ್ನು ಬಳಸುತ್ತೇವೆ. ಆದರೆ ಅವೆಲ್ಲವೂ ಸಿರಿಧಾನ್ಯಗಳಿಗೆ ಸಂಬAಧಿಸಿದವುಗಳಾಗಿವೆ. ನವಣೆ, ಸಾವೆ, ಅರ್ಕ, ಊದಲು, ಕರ‍್ಲೆ ಈ ಐದು ಸಿರಿಧಾನ್ಯಗಳೇ ಪಂಚಪಕ್ವಾನ್, ಪಂಚ ಕಜ್ಜಾಯಗಳಾಗಿವೆ, ಇವಕ್ಕೆ ಪಂಚ ರತ್ನಗಳೆಂದೂ ಕರೆಯುವರು.

ಸಿರಿಧಾನ್ಯಗಳಿಂದ ನಾವು ಏನೆಲ್ಲ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಉದಾ: ಗಂಜಿ, ರೊಟ್ಟಿ, ಉಪ್ಪಿಟ್ಟು, ಪಾಯಸ, ಪಲಾವ್, ಮುz್ದÉ, ಪೊಂಗಲ್, ಹಪ್ಪಳ ಮುಂತಾದವುಗಳನ್ನು ಸಿದ್ಧಪಡಿಸಲು ಸಾಧ್ಯ. ಈಗಂತೂ ಸಿರಿಧಾನ್ಯಗಳಿಂದ ಕೇಕ್, ಚಾಕಲೇಟ್, ಬಿಸ್ಕತ್ತ ಇನ್ನಿತರೆ ಬೇಕರಿ ಪದಾರ್ಥ ತಯಾರಿಸುವ ಕಲೆಯನ್ನು ಅನೇಕ ಮಹಿಳೆಯರು ಕರಗತ ಮಾಡಿಕೊಂಡು ಸ್ವಯಂ ಉದ್ಯೋಗಸ್ಥರಾಗಿರುವರು.

ಇಷ್ಟೆಲ್ಲ ಪ್ರಾಮುಖ್ಯತೆ ಹೊಂದಿದ ಸಿರಿಧಾನ್ಯಗಳ ಸ್ಥಾನವನ್ನು ಇಂದು ಅಕ್ಕಿ, ಗೋಧಿಗಳು ಆಕ್ರಮಿಸಿಕೊಂಡು ಅನೇಕ ಸಮಸ್ಯೆಗಳನ್ನು ತೊಂದೊಡ್ಡಿವೆ. ಅವುಗಳಲ್ಲಿ ಮುಖ್ಯವಾಗಿ ಪೌಷ್ಠಿಕ ಆಹಾರದ ಕೊರತೆ, ದನಗಳಿಗೆ ಮೇವಿನ ಅಭಾವ, ಬಿತ್ತನೆ ಬೀಜದಲ್ಲಿ ಮೋಸ, ಆರೋಗ್ಯ ಸಮಸ್ಯೆ, ಕೃಷಿ e್ಞÁನ ಕುಂಠಿತ, ಅಧಿಕ ಖರ್ಚು, ಅತೀ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯ ದುಷ್ಪರಿಣಾಮ, ಕೃಷಿಯೇತರ ಕೆಲಸಗಳ ಅವಲಂಬನೆ, ಬೇಕರಿ ಆಹಾರ ಬಳಕೆ ಮುಂತಾದವುಗಳು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ನಾವು ನಿತ್ಯ ಸೇವಿಸುವ ಆಹಾರದಲ್ಲಿ ಸಿರಿಧಾನ್ಯಗಳ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಬಳಸಬೇಕು.

ಇಂದು ಮಕ್ಕಳಲ್ಲಿ ಹೆಚ್ಚುತ್ತಿರುವ ಬೇಕರಿ ಆಹಾರ ಸೇವನೆ ಕಡಿಮೆಗೊಳಿಸಲು, ಯುವ ಜನತೆಯನ್ನು ಸಶಕ್ತರನ್ನಾಗಿಸಲು ಸಿರಿಧಾನ್ಯಗಳು ಹೆಚ್ಚು ಪೂರಕವಾಗಿವೆ. ಅವುಗಳ ಬಳಕೆಯನ್ನು ಮಹಿಳೆಯರು ಕಾರ್ಯಾಚರಣೆಗೆ ತರಲೆಂಬ ಸದುz್ದÉÃಶದಿಂದ ಸಿದ್ಧಲಿಂಗ ನಗರದಲ್ಲಿನ ಬಸವ ಸಭಾ ಭವನದಲ್ಲಿ ಅಕ್ಕಮಹಾದೇವಿ ಯೋಗ ವಿe್ಞÁನ ಕೇಂದ್ರದವರು ಸಿರಿಧಾನ್ಯಗಳ ಬೇಕರಿ ಪದಾರ್ಥ ಪ್ರಾತ್ಯಕ್ಷಿಕೆ ಕಾರ್ಯಾಗಾರ (26-3-2021)ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂಥ ಕಾಯiÁðಗಾರಗಳಿಗೆ ಕೈ ಜೋಡಿಸಿ ಸಿರಿ ಧಾನ್ಯಗಳ ಮಹತ್ವವನ್ನು ಹೆಚ್ಚು ಪ್ರಸಾರಗೊಳಿಸೋಣ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶಾಂತಿ, ನೆಮ್ಮದಿ, ಐಶ್ಚರ್ಯ, ಆರೋಗ್ಯ, ಆಯುಷ್ಯ ಈ ಸಂಪತ್ತುಗಳ ಅಗತ್ಯವಿದೆ. ಹೀಗಾಗಿ ಸಿರಿಧಾನ್ಯಗಳು ಸುಸ್ಥಿರ ಆರೋಗ್ಯ ಮತ್ತು ಸ್ವಸ್ಥ ಸಮಾಜದ ಐಸಿರಿಗಳಾಗಿವೆ''. ಇತ್ತೀಚಿಗೆ ಸಿರಿಧಾನ್ಯಗಳಿಗೆ ಜಾಗತಿಕ ಮನ್ನಣೆ ದೊರೆತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಈಂಔ)2023 ರನ್ನು ಅಂತರಾಷ್ಟಿçÃಯ ಸಿರಿಧಾನ್ಯಗಳ ವರ್ಷ” ಎಂದು ಘೋಷಿಸಿದೆ. ಈ ದಿಸೆಯಲ್ಲಿ ಭಾರತೀಯರಾದ ನಾವೆಲ್ಲರೂ ಮುಂಚೂಣಿಯಲ್ಲಿದ್ದು, ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸಿ ಸ್ವಸ್ಥ ಭಾರತ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಪ್ರಾರ್ಥಿಸುವೆ.
-ಕೆ.ಎಸ್.ಪಲ್ಲೇದ್, ಪ್ರಾಚಾರ್ಯರು, ಬಸವಯೋಗ ಕೇಂದ್ರ ಗದಗ

Leave a Reply

Your email address will not be published. Required fields are marked *

You May Also Like

ನಡಕಟ್ಟಿನ ಕೂರಿಗೆ ಸಂಶೋಧನೆಗೆ ಪದ್ಮಶ್ರೀ ಪ್ರಶಸ್ತಿಯ ಗರಿ

ಧಾರವಾಡ: ಬಿತ್ತುವ ಕೂರಿಗೆ ತಜ್ಞ ಅಬ್ದುಲ್‌ ಖಾದರ್ ನಡಕಟ್ಟಿನ ಗೆ ಪದ್ಮಶ್ರೀ ಪ್ರಶಸ್ತಿಯ ಗರಿ ಹೌದು…

ರಾಜ್ಯದಲ್ಲಿಂದು 337 ಕೊರೊನಾ ಪಾಸಿಟಿವ್, ಮೃತ ಪಟ್ಟವರ ಸಂಖ್ಯೆ 10 : ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 337 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8281…

ರಾಜ್ಯದಲ್ಲಿಂದು 204 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 204 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7734ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 348. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 4804 ಕೇಸ್ ಗಳು. ಈ ಮೂಲಕ ರಾಜ್ಯದಲ್ಲಿ ಈವರೆಗೆ 2824 ಸಕ್ರೀಯ ಪ್ರಕರಣಗಳಿವೆ.