ಗದಗ: ಕೋವಿಡ್ ಸೋಂಕಿನ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತ ನೀಡಿದ ಕೊವಿಡ್-19 ರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಏ.1 ರಂದು ಹೋಳಿ ಹಬ್ಬವನ್ನು ಶಾಂತ ರೀತಿಯಲ್ಲಿ ಸರಳವಾಗಿ ಆಚರಿಸಲು ಡಿವೈಎಸ್‌ಪಿ ಎಸ್.ಕೆ.ಪ್ರಲ್ಹಾದ ತಿಳಿಸಿದ್ದಾರೆ.

ಹೊಳಿಹಬ್ಬದ ಪ್ರಯುಕ್ತ ಬೆಟಗೇರಿಯ ಎಂ.ವಿ.ಮೂಲಿಮನಿ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾರ್ಗಸೂಚಿಗಳು

1, ನಗರದಲ್ಲಿ ಕಾಮನ ಮೂರ್ತಿ ಕೂಡಿಸಲು ಕಾಮ ರತಿ ಮಂಡಳಿಗಳು ಹೆಸ್ಕಾಂ, ಪೊಲೀಸ್, ಅಗ್ನಿಶಾಮಕ, ನಗರಸಭೆಯವರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.

2, ಕಾಲಕಾಲಕ್ಕೆ ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸಬೇಕು. ಕಾಮ ರತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ 10/10 ಅಳತೆಯ ಪೆಂಡಾಲನ್ನು ಮಾತ್ರ ಹಾಕಬೇಕು.

3, ಸ್ವಯಂ ಸೇವಕರು ಒಂದೇ ತರಹದ ಉಡುಪಿನಲ್ಲಿ ದಿನದ 24 ಗಂಟೆಯೂ ಇರಬೇಕು.

4, ಕಾಮ ರತಿ ವೀಕ್ಷಣೆಗೆ ಬರುವ ಸಾರ್ವಜನಿಕರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಬೇಕು.

5, ಸಾರ್ವಜನಿಕರಿಗಾಗಿ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸಬೇಕು.

6, ಪೆಂಡಾಲದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಬೇಕು ಮತ್ತು ಬೆಂಕಿ ನಂದಿಸುವ ಸಾಧನಗಳನ್ನು ಇರಿಸಿರಬೇಕು

7, ಸರ್ಕಾರದ ಆದೇಶದಂತೆ ಕಾಮನ ಮೂರ್ತಿಗಳನ್ನು ಸಾರ್ವಜನಿಕ ರಸ್ತೆ, ವೃತ್ತಗಳಲ್ಲಿ ಕೂರಿಸಬಾರದು.

8, ಮೆರವಣಿಗೆ ಮೂಲಕ ಸಾರ್ವಜನಿಕವಾಗಿ ಕೂಡಿಸುವುದಾಗಲಿ, ದಹನ ಮಾಡುವುದಾಗಲಿ, ಮನರಂಜನಾ ಕಾರ್ಯಕ್ರಮಗಳ ಆಯೋಜನೆ, ಧ್ವನಿವರ್ಧಕ, ಡಿಜೆ ಉಪಯೋಗ ಮಾಡಬಾರದು.

9, ಸಿಡಿಮದ್ದು, ಪಟಾಕಿಗಳನ್ನು ಅನವಶ್ಯಕವಾಗಿ ಹಚ್ಚಬಾರದು.

10, ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸಬಾರದು.

11, ಕಾಮರತಿ ಮೂರ್ತಿಗಳ ಮೇಲೆ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಹಾಕಬಾರದು.

12, ಪೆಂಡಾಲದಲ್ಲಿ ಬೆಂಕಿ ಬಳಸಿ ಅಡುಗೆ ಮಾಡುವುದಾಗಲಿ, ಜೂಜಾಟ ಆಡುವಂತಿಲ್ಲ ಮತ್ತು ಸಾರ್ವಜನಿಕರಿಗೆ ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡಬಾರದು.

13, ಕೋಮುಸೌಹಾರ್ಧತೆಗೆ ಧಕ್ಕೆಯಾಗುವ ಹಾಡು, ಭಾಷೆ ಬಳಸಬಾರದು.

Leave a Reply

Your email address will not be published. Required fields are marked *

You May Also Like

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಪೆನ್ಷನ್ ಸ್ಕೀಮ್:ಕಂದಾಯ ಸಚಿವ ಆರ್.ಅಶೋಕ್

ಗದಗ: ಇನ್ಮುಂದೆ ನೋ ಪೊಸ್ಟ್ ಆಫೀಸ್ ಓನ್ಲಿ ಬ್ಯಾಂಕ್ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.ಗದಗನಲ್ಲಿ…

ಶೀಘ್ರವಾಗಿ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾರಂಭಿಸಿಲು: ಮನವಿ

ಶಿರಹಟ್ಟಿ ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು, ಸ್ಥಳೀಯವಾಗಿ ಎಪಿಎಂಸಿ ಸ್ಥಾಪನೆ ಮಾಡಬೇಕೆಂದು ಮಂಗಳವಾರ ತಹಶಿಲ್ದಾರ ಮೂಲಕ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕ ಘಟಕದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬೀದರ್ ನಲ್ಲಿ ಮತ್ತೆ ಆತಂಕ!

ದೆಹಲಿಯಲ್ಲಿ ನಡೆದ ಜಮಾತ್‍ ಸಭೆಗೆ ಹೋಗಿ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯಿಂದ ಹಳೇ ಸಿಟಿಯಲ್ಲಿ ಇಂದು ಮತ್ತೆ ಇಬ್ಬರು ಸೋಂಕು ತಗುಲಿದೆ.

ಮಾಜಿ ಸಚಿವ ವಿನಯ್ ಗೆ ಮತ್ತೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ!

ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಇವತ್ತು ಕೂಡ ರಿಲೀಫ್ ಸಿಗದಂತಾಗಿದೆ. ಇಂದು ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ವಿಡಿಯೋ ಕಾನ್ಫರನ್ಸ್ ಮೂಲಕ ವಿನಯ್ ಅವರನ್ನು ಧಾರವಾಡದ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಿದರು.