ಮುಂಬಯಿ: ಮೊಸರಿನಿಂದಾಗಿ ಶುರುವಾದ ಜಗಳದಲ್ಲಿ ಪತ್ನಿಯ ಕೊಂದ ಪತಿಗೆ ನ್ಯಾಯಾಲಯ 8 ವರ್ಷಗಳ ಶಿಕ್ಷೆ ವಿಧಿಸಿದೆ.

ಆಂಟಾಪ್ ಹಿಲ್ ನ ನಿವಾಸಿ ಸಚಿನ್ ಮಾಲೊರೆ (39) ಶಿಕ್ಷೆಗೆ ಒಳಗಾದ ಪತಿ. ಈ ವ್ಯಕ್ತಿ ಪತ್ನಿ ರಂಜನಾ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ. ಈ ಘಟನೆ ಎರಡು ವರ್ಷಗಳ ಹಿಂದೆ ನಡೆದಿದೆ. ಸಚಿನ್ ತನ್ನ ಮನೆಗೆ ಮೊಸರನ್ನ ತಂದಿದ್ದರು. ಇದನ್ನು ಪತಿಗೆ ನೀಡದೆ, ಪತ್ನಿ ತಿಂದಿದ್ದರು. ಈ ವಿಷಯವಾಗಿ ಇಬ್ಬರ ನಡುವೆ ಜಗಳ ಶುರುವಾಗಿತ್ತು. 

ಈ ಸಂದರ್ಭದಲ್ಲಿ ಕೋಪಗೊಂಡ ಪತಿ, ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಇರಿದು ತಲೆ ಮರೆಸಿಕೊಂಡಿದ್ದ. ಅಕ್ಕ – ಪಕ್ಕದವರು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಗ ಪತ್ನಿಯು ಪತಿಯ ವಿರುದ್ಧ ದೂರು ದಾಖಲಿಸಿದ್ದರು. ವಾದ – ವಿವಾದ ಆಲಿಸಿದ ಕೋರ್ಟ್, ಪತಿಗೆ 8 ವರ್ಷಗಳ ಶಿಕ್ಷೆ ವಿಧಿಸಿದೆ. 

ವಿಚಾರಣೆ ಸಮಯದಲ್ಲಿ ಪತಿಯು ಆಕಸ್ಮಿಕವಾಗಿ ರಂಜನಾ ಉಕ್ಕಿನ ಪಾತ್ರೆಯ ಮೇಲೆ ಬಿದ್ದಿದ್ದಾಳೆ. ಹೀಗಾಗಿ ಗಾಯವಾಗಿದೆ ಎಂದು ವಾದಿಸಿದ್ದ. ಆದರೆ, ವೈದ್ಯಕೀಯ ಸಾಕ್ಷ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳಿಂದಾಗಿ ಆರೋಪಿ ಪತಿಗೆ ಶಿಕ್ಷೆಯಾಗುವಂತಾಗಿದೆ. 

Leave a Reply

Your email address will not be published. Required fields are marked *

You May Also Like

ಆಸ್ಟ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಗೂರರ 'ಅಮೃತಮತಿ' ಆಯ್ಕೆ

ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ನ ಪುಟ್ಟಣ್ಣ ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ…

ಗೋಲ್ಡ್ ಸ್ಮಗ್ಲಿಂಗ್: ‘ಸ್ವಪ್ನ’ ಸುಂದರಿ ಲಾಕ್ ಡೌನಿನಲ್ಲಿ ಬೆಂಗಳೂರಿಗೆ ಬಂದಿದ್ದು ಹೇಗೆ?

ಯುಎಇಯಿಂದ 30 ಕೆಜಿ ಚಿನ್ನ ಅಕ್ರಮ ಸಾಗಾಣಿಕೆಯ ಆರೋಪ ಎದುರಿಸುತ್ತಿರುವ ಸ್ವಪ್ನ ಸುರೇಶ್ ಲಾಕ್ ಡೌನ್ ಸಂದರ್ಭದಲ್ಲಿ ಕೆರಳದಿಂದ ಬೆಂಗಳೂರು ತಲುಪಿದ್ದು ಹೇಗೆ?

ಬೆಳಿಗ್ಗೆ 4ಕ್ಕೆ ಕಾರ್ ತೊಳೆಯುವ ಕೆಲಸ: 12ನೆ ತರಗತಿಯಲ್ಲಿ ಶೇ.91.7 ಸ್ಕೋರ್ ಸಾಹಸ

ಅದು ಸ್ಲಮ್ಮೊಂದರಲ್ಲಿನ ಮನೆ. ಹೆಸರಿಗಷ್ಟೇ ಮನೆ. ಇರುವುದೇ ಎರಡು ಕೋಣೆ ಮಾತ್ರ. ಇದರಲ್ಲಿ ಒಂಭತ್ತು ಜನರ ಕುಟುಂಬ ವಾಸಿಸುತ್ತಿದೆ. ಮನೆಯ ಹಿರಿಯನಿಗೆ ಹೃದಯ ಕಾಯಿಲೆ. ಉಳಿದ ಸಹೋದರರಿಗೆ ನಿಶ್ಚಿತ ಉದ್ಯೋಗವಿಲ್ಲ. ಅಲ್ಲಿ ಹಸಿವು ಖಾಯಂ ಅತಿಥಿಯಾಗಿರುವಾಗ ವಿದ್ಯಾಭ್ಯಾಸದ ಖರ್ಚು ನಿಭಾಯಿಸುವುದೇ ಅಸಾಧ್ಯ.

ನವದೆಹಲಿ : ದೇಶದ ಮೆಟ್ರೋ ನಗರಗಳು ರೆಡ್ ಜೋನ್ ನಲ್ಲಿ: ಆರೋಗ್ಯ ಸಚಿವಾಲಯ ನಿರ್ಧಾರ

ದೇಶದಲ್ಲಿನ ಎಲ್ಲ ಮೆಟ್ರೋ ನಗರಗಳನ್ನು ರೆಡ್ ಜೋನ್ ನಲ್ಲಿರಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ.