ಬೆಂಗಳೂರು : ಐದು ವರ್ಷಗಳ ಹಿಂದೆಯೇ ಕೊರೊನಾ ವೈರಸ್ ನಂತಹ ಗಂಡಾಂತರದ ಬಗ್ಗೆ ಎಚ್ಚರಿಕೆ ನೀಡಿದ್ದ ಉದ್ಯಮಿ ಬಿಲ್ ಗೇಟ್ಸ್ ಈಗ ಮತ್ತೆ ಎರಡು ಗಂಡಾಂತರಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಬಿಲ್ ಗೇಟ್ಸ್ ಅವರು 2015ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊರೊನಾ ವೈರಸ್ ನಂತಹ ಸಾಂಕ್ರಾಮಿಕದ ಕುರಿತು ಮಾತನಾಡಿದ್ದರು. ಮುಂದೊಂದು ದಿನ ಹರಡುವ ಸೋಂಕಿನಿಂದ ಮನೆ ಮನೆಗೂ ಸಂಕಷ್ಟ ಎದುರಾಗಲಿದೆ ಎಂಬ ಎಚ್ಚರಿಕೆ ನೀಡಿದ್ದರು. ಅಲ್ಲದೇ, ಇಂತಹ ಸೋಂಕುಗಳನ್ನು ಮೆಟ್ಟಿ ನಿಲ್ಲಲು ಜಗತ್ತು ಸಿದ್ಧವಾಗಬೇಕು ಎಂದು ಹೇಳಿದ್ದರು. 

ಆದರೆ, ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ವೊಂದರಲ್ಲಿ ಅವರು ಮತ್ತೆ ಇಂತಹ ಗಂಡಾಂತರಗಳ ಬಗ್ಗೆ ಮಾತನಾಡಿದ್ದಾರೆ. ಉಸಿರಾಟದ ಕಾಯಿಲೆ ಸೃಷ್ಟಿಸುವ ಸೋಂಕುಗಳು ಆಗಾಗ ಬರುತ್ತವೆ. ಇವು ತುಂಬಾ ಅಪಾಯಕಾರಿ. ಈ ಸಾಂಕ್ರಾಮಿಕ ಸೋಂಕುಗಳಿಂದ ಜನರು ಪ್ರತಿ ವರ್ಷ ಸಾಯುತ್ತಲೇ ಇದ್ದಾರೆ. ಹೀಗಾಗಿ ಬಿಕ್ಕಟ್ಟು ದೊಡ್ಡದಾಗುವ ಮೊದಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ. ಅಲ್ಲದೇ, ಜೈವಿಕ ಹಾನಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಅವರು ಹೇಳಿದ್ದಾರೆ. 

Leave a Reply

Your email address will not be published. Required fields are marked *

You May Also Like

ಟಿಕ್ ಟಾಕ್ ಸೇರಿ 59 App ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ದೆಹಲಿ: ದೇಶದ ಸಮಗ್ರತೆ, ಏಕತೆ ಹಾಗೂ ದೇಶದ ರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯಗಳ ಭದ್ರತೆಯ ಜೊತೆಗೆ ಸಾರ್ವಜನಿಕರ…

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ : ಸೋನಿಯಾ ಗಾಂಧಿ ವಿರುದ್ಧ ಎಎಫ್.ಐ.ಆರ್..!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟರ್ ನಲ್ಲಿ ಇಲ್ಲಸಲ್ಲದ ಅವಹೇಳನಕಾರಿ ಟ್ವೀಟ್ ಮಾಡಿರುವ ಆರೋಪ…

3 ಲಕ್ಷ ಕೋಟಿ ಜಾಮೀನು ರಹಿತ ಸಾಲಕ್ಕೆ ಮೀಸಲು: ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್

ಪ್ರದಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಕುರಿತು ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ಯಾಕೇಜ್ ನಲ್ಲಿ ಯಾವುದಕ್ಕೆ ಆದ್ಯತೆ ನೀಡಲಾಗಿದೆ. ಜನಸಾಮಾನ್ಯರಿಗೆ ಏನೆಲ್ಲ ಅನುಕೂಲ ದೊರೆಯಲಿದೆ ಎನ್ನುವ ಕುರಿತು ಮಾಹಿತಿ ನೀಡಿದರು.

ಬುಧವಾರ ಭಾರತಕ್ಕೆ ಬರಲಿವೆ ರಫೇಲ್ ಯುದ್ಧ ವಿಮಾನ: ಸದ್ಯ ಫ್ರಾನ್ಸ್ ಬಿಟ್ಟಿವೆ ಫೈಟರ್ ಜೆಟ್ಸ್

ಸೋಮವಾರ ಫ್ರಾನ್ಸ್ ನಿಂದ ಹೊರಟಿರುವ ಮೊದಲ ಬ್ಯಾಚಿನ ರಫೇಲ್ ಯುದ್ಧ ಫ್ರಾನ್ಸ್ ಬಿಟ್ಟಿರುವ 5 ರಫೇಲ್ ಯುದ್ಧ ವಿಮಾನಗಳು 7 ಸಾವಿರ ಕಿಮೀ ದೂರ ಕ್ರಮಿಸಿ ಬುಧವಾರ ಭಾರತವನ್ನು ತಲುಪಲಿವೆ. ಯುಎಇನಲ್ಲಿರುವ ಫ್ರಾನ್ಸ್ ಏರ್ ಬೇಸ್ ನಲ್ಲಿ ಇಳಿದು ನಂತರ ಭಾರತ ತಲುಪಲಿವೆ. ಎವಿಯೇಷನ್ ಕಂಪನಿ ಡಸಾಲ್ಟ್ ನಿರ್ಮಿಸಿರುವ ಈ ಅತ್ಯಾಧುನಿಕ ಫೈಟರ್ ಜೆಟ್ಸ್ ದಕ್ಷಿಣ ಫ್ರಾನ್ಸಿನ ಬ್ರೊಡಾಕ್ಸ್ ನಗರದಿಂದ ಪ್ರಯಾಣ ಬೆಳೆಸಿವೆ. 2016ರಲ್ಲಿ ಭಾರತವು ಫ್ರಾನ್ಸ್ ಕಂಪನಿ ಡಸಾಲ್ಟ್ ಕಂಪನಿಯಿಂದ ಇಂತಹ 36 ವಿಮಾನಗಳನ್ನು ಖರೀದಿಸಲು 59 ಸಾವಿರ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು. ಅದರ ಮೊದಲ ಭಾಗವಾಗಿ ಈಗ 5 ವಿಮಾನಗಳು ದೇಶದ ಸೇನೆಯ ಭಾಗವಾಗಲಿವೆ.