30 ಕೆಜಿ ಚಿನ್ನ ಅಕ್ರಮ ಸಾಗಾಣಿಕೆಯ ಆರೋಪ ಎದುರಿಸುತ್ತಿರುವ ಸ್ವಪ್ನ ಸುರೇಶ್ ಲಾಕ್ ಡೌನ್ ಸಂದರ್ಭದಲ್ಲಿ ಕೆರಳದಿಂದ ಬೆಂಗಳೂರು ತಲುಪಿದ್ದು ಹೇಗೆ?
ಬೆಂಗಳೂರು: ಯುಎಇಯಿಂದ 30 ಕೆ.ಜಿ. ಚಿನ್ನವನ್ನು ಭಾರತಕ್ಕೆ ಅಕ್ರಮ ಸಾಗಾಣಿಕೆ ಮಾಡಿದ ಆರೋಪ ಎದುರಿಸುತ್ತಿರುವ ಸ್ವಪ್ನ ಸುರೇಶ್ ಅವರನ್ನು ಎನ್ಐಎ (ರಾಷ್ಟ್ರೀಯ ತನಿಖಾ ದಳ) ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿತ್ತು. ಸ್ವಪ್ನ ಜೊತೆ ಇನ್ನೊಬ್ಬ ಆರೋಪಿ ಸಂದೀಪ್ ನಾಯರ್ ಕೂಡ ಆಗಲೇ ಸಿಕ್ಕಿಬಿದ್ದಿದ್ದ.
ಲಾಕ್ ಡೌನ್ ಕಟ್ಟುನಿಟ್ಟಿನಲ್ಲಿಯೂ ಸ್ವಪ್ನ ಮತ್ತು ಸಂದೀಪ್ ಕೇರಳ ಗಡಿ ದಾಟಿ ಬೆಂಗಳೂರು ತಲುಪಿದರು ಹೇಗೆ? ತಿರುವನಂತಪುರದಲ್ಲಿರುವ ಬಿಗಿಯಾದ ಸಂಚಾರ ನಿಯಮಗಳನ್ನು ಭೇದಿಸಿ, ಕೇರಳ ಮತ್ತು ತಮಿಳುನಾಡು ಗಡಿಗಳನ್ನು ದಾಟಿ ಅವರಿಬ್ಬರೂ ಬೆಂಗಳೂರು ತಲುಪಿದ್ದಾದರೂ ಹೇಗೆ? ಅಂತಾರಾಜ್ಯ ಪ್ರಯಾಣಕ್ಕೆ ಜನಸಾಮಾನ್ಯರು ಪಾಸ್ ಪಡೆಯಬೇಕು. ಆದರೆ ಆರೋಪಿಗಳು ಹೇಗೆ ಬೆಂಗಳೂರು ತಲುಪಿದರು? ಎಂಬ ಪ್ರಶ್ನೆಗಳನ್ನು ಕೇರಳದ ಕಾಂಗ್ರೆಸ್ ಮತ್ತು ಬಿಜೆಪಿ ಎತ್ತಿವೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ಅವರಿಗೆ ಸ್ವಪ್ನ ಆತ್ಮೀಯರಾಗಿದ್ದರು ಎನ್ನಲಾಗಿದೆ. ಕೇರಳ ಸರ್ಕಾರ ಶಿವಶಂಕರ್ ಅವರನ್ನು ವಜಾಗೊಳಿಸಿದೆ.