ನ್ಯೂಯಾರ್ಕ್:
ಜಗತ್ತಿನಲ್ಲಿ ಕೊರೊನಾ ಸೋಂಕಿನ ಬಳಿಕ ಇನ್ನೂ ಎರಡು ವಿನಾಶಕಾರಿ ವಿಪತ್ತುಗಳು ವಿಶ್ವವನ್ನು ಕಾಡಲಿವೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.
ಹವಾಮಾನ ಬದಲಾವಣೆ ಹಾಗೂ ಜೈವಿಕ ಭಯೋತ್ಪಾದನೆ ಎಂಬ ಎರಡು ಮಹಾವಿಪತ್ತುಗಳನ್ನು ಎದುರಿಸಲು ಜಗತ್ತು ಇನ್ನೂ ಸಿದ್ಧವಾಗಿಲ್ಲ ಎಂದು ಯುಟ್ಯೂಬ್‌ ಚಾನಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಅಪಾಯಕಾರಿ ವೈರಸ್ಸನ್ನು ಸೃಷ್ಟಿಸಿ ಕೆಲವೇ ವ್ಯಕ್ತಿಗಳು ಜೈವಿಕ ಭಯೋತ್ಪಾದನೆ ಉಂಟು ಮಾಡಬಹುದು. ಕೋವಿಡ್‌ನಂತಹ ಸ್ವಾಭಾವಿಕ ವೈರಸ್‌ಗಳಿಗಿಂತ ಕೃತಕ ವೈರಸ್‌ಗಳ ಅಪಾಯದ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅಂತಹ ವಿಪತ್ತು ಎದುರಾದರೆ, ಈಗ ಎಷ್ಟುಸಾವು ಸಂಭವಿಸಿದೆಯೋ ಅದಕ್ಕಿಂತ ಹೆಚ್ಚಿನ ಮರಣ ಉಂಟಾಗಲಿದೆ.
ಮಾನವನಿರ್ಮಿತ ವೈರಸ್‌ಗಳಾಗಿರುವುದರಿಂದ ಪ್ರತಿ ವರ್ಷ ಜಗತ್ತನ್ನು ಕಾಡುವ ಸಂಭವ ಇರುತ್ತದೆ ಎಂದು ಹೇಳಿದ್ದಾರೆ.
2014ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಎಬೋಲಾ ರೋಗ ಕಾಣಿಸಿಕೊಂಡಿತ್ತು. ಆ ವೇಳೆ ಮಾತನಾಡಿದ್ದ ಬಿಲ್‌ ಗೇಟ್ಸ್‌, ಸದ್ಯೋಭವಿಷ್ಯದಲ್ಲಿ ಅತ್ಯಂತ ಸಾಂಕ್ರಾಮಿಕ ವೈರಸ್‌ ಜಗತ್ತನ್ನು ಕಾಡಲಿದೆ. ಅದನ್ನು ಎದುರಿಸಲು ಜಗತ್ತು ಸಿದ್ಧವಿಲ್ಲ. ಅತ್ಯಂತ ವೇಗವಾಗಿ ವೈರಾಣು ಹಬ್ಬುತ್ತದೆ ಎಂದು ಹೇಳಿದ್ದರು

Leave a Reply

Your email address will not be published. Required fields are marked *

You May Also Like

ಕೊರೊನಾ ಗೆದ್ದ 103ರ ವೃದ್ಧೆ

ಅಮೆರಿಕದ ಮೆಸಾಚ್ಯುಸೆಟ್ಸ್ ನಲ್ಲಿ 103ರ ವೃದ್ಧೆ ಸ್ಟೆಂಜಾ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ.

ಅಮೆರಿಕದಲ್ಲಿ ಕೆಲಸ ಹುಡುಕುವುದು ಇನ್ನು ಕನಸು ಮಾತ್ರನಾ?

ವಾಷಿಂಗ್ಟನ್‌: ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಚ್‌-1ಬಿ, ಎಲ್‌-1 ವೀಸಾ ಮತ್ತು ಇತರೆ…

ಪಾಕ್ ನಂತೆ ಚೀನಾ ರಾಷ್ಟ್ರವು ಗಡಿಯಲ್ಲಿ ಉದ್ಧಟತನ ಮೆರೆಯುತ್ತಿದೆ – ರಾಜನಾಥ್ ಸಿಂಗ್!

ನವದೆಹಲಿ : ಗಡಿ ರೇಖೆಯ ಬಳಿ ಪಾಕ್ ನಂತೆ ಚೀನಾ ಕೂಡ ವಿವಾದ ಸೃಷ್ಟಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.

ಹರ್ನಾಜ್ ಕೌರ್ ಸಂಧು 2021ರ ನೂತನ ವಿಶ್ವ ಸುಂದರಿ!

ಉತ್ತರಪ್ರಭ ದೆಹಲಿ: 2021ರ 70ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು…