ಮೆಸಾಚ್ಯುಸೆಟ್ಸ್: ಅಮೆರಿಕದ ಮೆಸಾಚ್ಯುಸೆಟ್ಸ್ ನಲ್ಲಿ 103ರ ವೃದ್ಧೆ ಸ್ಟೆಂಜಾ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಡಿ ಗೆದ್ದ ವೃದ್ಧೆಗೆ ಆಸ್ಪತ್ರೆ ಸಿಬ್ಬಂದಿ ಗೌರವಿಸಿ ಬೀಳ್ಕೊಟ್ಟಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕೆಲವು ದಿನಗಳ ಹಿಂದೆ ಸ್ಟೆಂಜಾ ಜ್ವರದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಅವರಿಗೆ ಕೊರೊನಾ ಇರುವ ಸಂಗತಿ ತಿಳಿದ ನಂತರ ಕುಟುಂಬಸ್ಥರು ಇವರ ಆಸೆಯನ್ನೇ ಕೈಬಿಟ್ಟಿದ್ದರು. ಅವರಿಗೆ ವಿದಾಯ ಹೇಳಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ, ಅವರು ಅಚ್ಚರಿಯ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸಿ, ಇದೀಗ ಬಿಡುಗಡೆಯಾಗಿದ್ದಾರೆ. ವಿಶೇಷವೆಂದರೆ ತಮಗೆ ಕೊರೊನಾ ಎಂಬ ರೋಗಕ್ಕೆ ಚಿಕಿತ್ಸೆ ನೀಡಲಾಗಿದೆ ಎಂಬ ಸಂಗತಿ ಕೂಡ ಅವರಿಗೆ ತಿಳಿದಿಲ್ಲ.

Leave a Reply

Your email address will not be published. Required fields are marked *

You May Also Like

ಸರ್ಕಾರದ ಆದೇಶದಲ್ಲಿ ಗೊಂದಲ ಗೂಡು ಸೇರಲು ಗದಗ ಜಿಲ್ಲೆಯ ಕಾರ್ಮಿಕರ ಪರದಾಟ..!

ಕಾರ್ಮಿಕರಿಗೆ ನಿಗದಿತ ದರದಲ್ಲಿ ಊರು ಸೇರಿಸಬೇಕು ಎನ್ನುವ ನಿಯಮವಿದೆ. ಆದರೆ ಉಡುಪಿಯಲ್ಲಿ ಮಾತ್ರ ಗದಗ ಜಿಲ್ಲೆಯ ಕಾರ್ಮಿಕರು ಊರು ಸೇರಲು ಪರದಾಡುವಂತಾಗಿದೆ. ಈಗಾಗಲೇ ಒಂದುವರೆ ತಿಂಗಳಿಂದ ಕೆಲಸವಿಲ್ಲದೇ ಕಾರ್ಮಿಕರು ಒಪ್ಪತ್ತಿನೂಟಕ್ಕೂ ಪರದಾಡಿದ ಕಾರ್ಮಿಕರು ಊರು ಸೇರಲು ಪರದಾಡುವಂತಾಗಿದೆ.

ಜುಲೈ 29 ಅಂತರರಾಷ್ಟ್ರೀಯ ಹುಲಿಗಳ ದಿನ “ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ”

“ಇಡೀ ಪ್ರಪಂಚದ ಅತ್ಯಂತ ಭವ್ಯವಾದ ಜೀವಿ, ಹುಲಿ” ಎಂದು ಜ್ಯಾಕ್ ಹನ್ನಾ ಹೇಳಿದ ಮಾತು ನಿಜಕ್ಕೂ…

ಓರ್ವ ಉಗ್ರನನ್ನು ಬಲಿ ಪಡೆದ ಸೇನೆ

ಜಮ್ಮು ಮತ್ತು ಕಾಶ್ಮೀರದ ಅವಂತಿಪೊರಾದಲ್ಲಿ ಓರ್ವ ಉಗ್ರನನ್ನು ಭಾರತೀಯ ಸೇನೆ ಬಲಿ ಪಡೆದಿದೆ. ಶರ್ಷಾಲಿ ಖ್ರೂ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಮಾಹಿತಿಯ ಮೇರೆಗೆ ಸೇನಾಪಡೆ ಕಾರ್ಯಾಚರಣೆ ನಡೆಸಿತ್ತು..