ಉತ್ತರಪ್ರಭ

ದೆಹಲಿ: 2021ರ 70ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು ನೂತನ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದಾಳೆ. ಮಿಸ್ ಯೂನಿವರ್ಸ್ 2021 ಸ್ಪರ್ಧೆಯಲ್ಲಿ ನಟಿ ಮತ್ತು ಮಾಡೆಲ್ ಹರ್ನಾಜ್ ಕೌರ್ ಸಂಧು ಅವರನ್ನು ಸ್ಪರ್ಧೆಯ ವಿಜೇತೆ ಎಂದು ಘೋಷಿಸುತ್ತಿದ್ದಂತೆ ಭಾರತದ ತ್ರಿವರ್ಣವು ಎತ್ತರಕ್ಕೆ ಹಾರಾಡಿದೆ.

ಇಸ್ರೇಲ್‌ನ ದಕ್ಷಿಣ ನಗರವಾದ ಇಲಾಟ್‌ನಲ್ಲಿ ಡಿಸೆಂಬರ್ 12(ಭಾನುವಾರ) ರಂದು ವಿಶ್ವ ಸುಂದರಿ ಸ್ಪರ್ಧೆ ನಡೆದಿದೆ. ಮಿಸ್ ಯೂನಿವರ್ಸ್ 2021 ಹರ್ನಾಜ್ ಸಂಧು ಪಂಜಾಬ್‌ನ ಚಂಡೀಗಢ ಮೂಲದ ಮಾಡೆಲ್ ಆಗಿದ್ದಾರೆ.ಭಾರತದ ಹರ್ನಾಜ್ ಸಂಧು ಹೊರತುಪಡಿಸಿ, ಪರುಗ್ವೆಯ ನಾಡಿಯಾ ಫೆರೇರಾ ಮೊದಲ ರನ್ನರ್ ಅಪ್, ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಗಿದೆ. ಇದು ಪ್ರತಿಷ್ಠಿತ ವಾರ್ಷಿಕ ಕಾರ್ಯಕ್ರಮದ 70ನೇ ಆವೃತ್ತಿಯಾಗಿತ್ತು.2000ರಲ್ಲಿ ಲಾರಾ ದತ್ತಾ ಪ್ರಶಸ್ತಿಯನ್ನು ಗೆದ್ದ 21 ವರ್ಷಗಳ ನಂತರ ವಿಶ್ವ ಸುಂದರಿ ಕಿರೀಟವನ್ನು ಭಾರತಕ್ಕೆ ತಂದಿದ್ದಾರೆ.


ಅಕ್ಟೋಬರ್‌ನಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಇಂಡಿಯಾ 2021 ಕಿರೀಟವನ್ನು ಪಡೆದಿದ್ದರು. ಅವರು ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ನಂತಹ ಅನೇಕ ಸ್ಪರ್ಧೆಯಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದಾರೆ.
ಹರ್ನಾಜ್ ಕೌರ್ ಸಂಧು ಕುರಿತು
ವೃತ್ತಿಯಲ್ಲಿ ಮಾಡೆಲ್ ಆಗಿರುವ ಹರ್ನಾಜ್ ಕೌರ್ ಸಂಧು, ಪಂಜಾಬ್‌ನ ಚಂಡೀಗಢದಿAದ ಬಂದವರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ಮಾಡಿದ್ದಾರೆ. ಚಂಡೀಗಢದಲ್ಲಿಯೇ ಪದವಿ ಪಡೆದ ನಂತರ, ಹರ್ನಾಜ್ ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.ಕೇವಲ 21ನೇ ವಯಸ್ಸಿನಲ್ಲಿ ಸಂಧು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಆದರೆ ಇದರಹೊರತಾಗಿಯೂ, ಅವರು ತಮ್ಮ ಅಧ್ಯಯನವನ್ನು ಬಿಡಲಿಲ್ಲ.


2017ರಂದು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಪ್ರದರ್ಶನವನ್ನು ನೀಡಿದರು, ಅಂದಿನಿAದ ಅವರ ಮಾಡೆಲಿಂಗ್ ಪಯಣ ಆರಂಭವಾಯಿತು. ಸಂಧುಗೆ ಕುದುರೆ ಸವಾರಿ, ಈಜು ಮತ್ತು ಪ್ರವಾಸ ತುಂಬಾ ಇಷ್ಟವಾದ ಹವ್ಯಾಸಗಳು.ಚಂಡೀಗಢದ ಮಾಡೆಲ್ ಹರ್ನಾಜ್ ಸಂಧು ತಮ್ಮ ವೃತ್ತಿಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 2017ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ, 2018ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್, 2019 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಮತ್ತು 2021 ರಲ್ಲಿ ಮಿಸ್ ಯೂನಿವರ್ಸ್ ಗರಿ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ: ಬಸವಭೂಮಿ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತಾತೀಥ್ಯ

ಆಲಮಟ್ಟಿ : ಆಲಮಟ್ಟಿಗೆ ಆಗಮಿಸಿದ್ದ ಬಸವಭೂಮಿ ಯಾತ್ರೆಯ ಸಹಸ್ರಾರು ಬಸವಭಕ್ತ ಯಾತ್ರಾಥಿ೯ಗಳಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡು…

ಕೊರೊನಾ ಆಸ್ಪತ್ರೆಯ ಬಿಲ್ ನೋಡಿ ಕುಸಿದು ಬಿದ್ದ ರೋಗಿ!

ವಾಷಿಂಗ್ಟನ್ : ಅಮೆರಿಕದಲ್ಲಿನ 70 ವರ್ಷದ ವೃದ್ಧರೊಬ್ಬರು ಕೊರೊನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.…

22ನೆ ಸ್ಥಾನದಲ್ಲಿ ಗದಗ ಜಿಲ್ಲೆ : ಕಲಾ ವಿಭಾಗದಲ್ಲಿ ಕಳಪೆ, ಪಿಯುಸಿ-2 ಫಲಿತಾಂಶ ವಿವರ

ಕಳೆದ ಬಾರಿ ಶೇ. 57ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ ಈ ಬಾರಿ ಶೇ.63 ಸಾಧನೆ ಮಾಡಿದೆ. ಒಟ್ಟಾರೆ ಜಿಲ್ಲಾವಾರು ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ್ದು, 22 ನೆ ಸ್ಥಾನದಲ್ಲಿದೆ.