ನವದೆಹಲಿ : ಗಡಿ ರೇಖೆಯ ಬಳಿ ಪಾಕ್ ನಂತೆ ಚೀನಾ ಕೂಡ ವಿವಾದ ಸೃಷ್ಟಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.

ಅರುಣಾಚಲ ಪ್ರದೇಶ, ಲಡಾಖ್, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಜಮ್ಮು ಕಾಶ್ಮೀರ ಮತ್ತು ಪಂಜಾಬ್ ನಲ್ಲಿ ನಿರ್ಮಿಸಿದ 44 ಸೇತುವೆಗಳನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಅಡಿಗಲ್ಲು ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದ ಅವರು, 

ಕೇಂದ್ರ ಸರ್ಕಾರ ಗಡಿಯಲ್ಲಿ ಶತೃಗಳನ್ನು ಮಾತ್ರ ಎದುರಿಸುತ್ತಿಲ್ಲ. ಗಡಿ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಗಡಿ ಭಾಗದಲ್ಲಿ ಕಾರ್ಯಾಚರಣೆ ನೆಪದಲ್ಲಿ ಮೊದಲು ಪಾಕ್, ಈಗ ಚೀನಾ ವಿವಾದ ಸೃಷ್ಟಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ನಾವು ಉಭಯ ರಾಷ್ಟ್ರಗಳೊಂದಿಗೆ 7 ಸಾವಿರ ಕಿ.ಮೀ ಗಡಿ ರೇಖೆ ಹೊಂದಿದ್ದೇವೆ. ಲಡಾಖ್ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ತನ್ನ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಭಾರತೀಯ ಸೇನೆ ಕೂಡಾ ಲಡಾಖ್, ಸಿಕ್ಕಿಂ, ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳಲ್ಲಿ ಸೇನಾ ಚಟುವಟಿಕೆಗಳನ್ನು ಚುರುಕುಗೊಳಿಸುತ್ತಿದೆ. ಸೋಮವಾರ ಉಭಯ ರಾಷ್ಟ್ರಗಳ ಸೇನಾ ಕಮಾಂಡರ್ ಹಂತದ 7ನೇ ಸಭೆಯನ್ನು ನಡೆಸಲಾಗಿತ್ತು ಎಂದು ಹೇಳಿದ್ದಾರೆ. 

Leave a Reply

Your email address will not be published. Required fields are marked *

You May Also Like

ಬಿಟ್ ಕಾಯಿನ್ ದಂಧೆಯ ಕೈವಾಡ: ಒಬಾಮಾ, ಗೇಟ್ಸ್ ಟ್ವೀಟರ್ ಅಕೌಂಟ್ ಹ್ಯಾಕ್ಡ್!

ಬಿಟ್ ಕಾಯಿನ್ ಹಗರಣವೊಂದನ್ನು ಪ್ರಮೋಟ್ ಮಾಡಲು ಅಮೆರಿಕದ ಖ್ಯಾತನಾಮರ ಟ್ವೀಟರ್ ಅಕೌಂಟ್ ಗಳನ್ನು ಹ್ಯಾಕ್ ಮಾಡಲಾಗಿದೆ. ಟ್ವೀಟರ್ ಕಂಪನಿ ಈಗ ಆ ಅಕೌಂಟ್ಸ್ ಸ್ಥಗಿತಗೊಳಿಸಿದೆ.

ವಿಮಾನ ಅಪಘಾತ – 22 ಜನ ವಿದ್ಯಾರ್ಥಿಗಳು ದಹನ!

ಉಕ್ರೇನ್ ನಲ್ಲಿ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ವಿಮಾನ ಅಪಘಾತವಾದ ಪರಿಣಾಮ 22 ಜನ ವಿದ್ಯಾರ್ಥಿಗಳು ಸಜೀವವಾಗಿ ದಹನಗೊಂಡಿರುವ ಘಟನೆ ನಡೆದಿದೆ.

ಕೋವಿಡ್ ಲಸಿಕೆ 2021ರಲ್ಲಿ ಲಭ್ಯ ದಿಢೀರ್ ನಿರೀಕ್ಷೆ ಬೇಡ: ಡಬ್ಲೂಎಚ್ಒ ತಜ್ಞ

ಕೋವಿಡ್ ಲಸಿಕೆ ತಯಾರಿಸುತ್ತಿರುವ ಎಲ್ಲ ಪ್ರಯೋಗಗಳು ಈಗ ಯಶಸ್ವಿ ಹಾದಿಯಲ್ಲಿವೆ. ಸುರಕ್ಷತೆ ಮತ್ತು ರೋಗ ನಿರೋಧಕತೆ ಸೃಷ್ಟಿಸುವ ದೃಷ್ಟಿಯಲ್ಲಿ ಈ ಪ್ರಯೋಗಗಳು ಫಲ ನೀಡುತ್ತಿವೆ.

ಚೀನಾ ಟೆನ್ಷನ್: ಸೇನಾಧಿಕಾರಿ, ಇಬ್ಬರು ಸೈನಿಕರು ಬಲಿ!

ದೆಹಲಿ: ಚೀನಾ ಮತ್ತು ಭಾರತೀಯ ಯೋಧರ ನಡುವಿನ ಮುಖಾಮುಖಿಯಲ್ಲಿ ಲಡಾಖ್ ನ ಗಾಲ್ವಾನ್ ನಲ್ಲಿ ಒಬ್ಬ…