ಮಡಿಕೇರಿ : ಕಿಡಿಗೇಡಿಗಳ ವಾಮಾಚಾರಕ್ಕೆ ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯದಲ್ಲಿ ನಡೆದಿದೆ.
ಗ್ರಾಮದಲ್ಲಿ ಮೂರು ರಸ್ತೆಗಳು ಸೇರುವ ಜಾಗದಲ್ಲಿ ವಾಮಾಚಾಲ ಮಾಡಲಾಗಿದೆ. ಒಂದು ಸಣ್ಣ ಗಡಿಗಿಗೆ ಕೆಂಪು ಬಟ್ಟೆ ಕಟ್ಟಿ ಇಡಲಾಗಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಇದು ವಾಮಾಚಾರವೇ ಅಥವಾ ಕಿಡಿಗೇಡಿಗಳು ಜನರನ್ನು ಹೆದರಿಸಲು ಈ ರೀತಿ ಮಾಡಿದ್ದಾರೆಯೇ ಎಂಬುವುದು ತಿಳಿದಿಲ್ಲ. ಆದರೆ, ಗ್ರಾಮದಲ್ಲಿ ಮಾತ್ರ ಭಯದ ವಾತಾವರಣ ನಿರ್ಮಾಣವಾಗಿದೆ.